ನಟಿ ರಮ್ಯಾ ಅವರು ಅಭಿ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು 2002ನೇ ಇಸ್ವಿಯಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಮೊಟ್ಟಮೊದಲ ಬಾರಿಗೆ ತೆರೆಯನ್ನು ಹಂಚಿಕೊಂಡರು. ಇಲ್ಲಿಂದ ಪ್ರಾರಂಭವಾದ ಇವರ ಸಿನಿಮಾ ಜರ್ನಿ ಸುಮಾರು ಎರಡು ದಶಕಗಳವರೆಗೂ ಕೂಡ ಮುಂದುವರೆದಿದೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ಧ್ಯಾನ್, ಲೂಸ್ ಮಾದ ಯೋಗಿ, ದುನಿಯಾ ವಿಜಯ್, ರಾಕಿಂಗ್ ಸ್ಟಾರ್ ಯಶ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ನೆನಪಿರಲಿ ಪ್ರೇಮ್, ಉಪೇಂದ್ರ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಬಹು ಬೇಡಿಕೆಯನ್ನು ಉಳಿಸಿಕೊಂಡಿದ್ದಂತಹ ನಟಿ ರಮ್ಯಾ ಅವರು ಯಾಕೋ ಇತ್ತೀಚಿನ ದಿನದಲ್ಲಿ ಸಿನಿಮಾರಂಗದಿಂದ ದೂರ ಉಳಿದಿದ್ದರೆ ಇದಕ್ಕೆ ಮುಖ್ಯ ಕಾರಣ ಅಂದರೆ ಅವರು ರಾಜಕೀಯ ಪ್ರವೇಶ ಮಾಡಿದ್ದು. ಹೌದು 2017ರಲ್ಲಿ ಅವರು ಮಂಡ್ಯ ಎಲೆಕ್ಷನ್ ನಲ್ಲಿ ನಿಂತುಕೊಳ್ಳುತ್ತಾರೆ ಈ ಒಂದು ಎಲೆಕ್ಷನ್ ನಲ್ಲಿ ವಿಜೇತರಾಗಿ ಸುಮಾರು ಐದು ವರ್ಷಗಳ ಕಾಲ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಇಲ್ಲಿಂದ ಇವರಿಗೆ ಸಿನಿಮಾರಂಗದ ಕಡೆ ಇದ್ದಂತಹ ಒಲವು ಕಡಿಮೆಯಾಗುತ್ತದೆ ಈ ಕಾರಣದಿಂದ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ. ಆದರೆ ರಮ್ಯಾ ಅವರು ಸದ್ಯಕ್ಕೆ ರಾಜಕೀಯದಿಂದಲೂ ದೂರ ಉಳಿದಿದ್ದು ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಬೇಕು ಅಂತ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ತಿಂಗಳಷ್ಟೇ ಡಾಲಿ ಧನಂಜಯ್ ಅವರ ಹೊಯ್ಸಳ ಸಿನಿಮಾ ಒಂದಕ್ಕೆ ರಮ್ಯಾ ಅವರು ಆಗಮಿಸಿದ್ದರು.
ಅಷ್ಟೇ ಅಲ್ಲದೆ ನಾನು ಮತ್ತೆ ಒಳ್ಳೆಯ ಕಥೆಯೊಂದಿಗೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತೇನೆ ಎಂಬುದನ್ನು ಕೂಡ ಹೇಳಿಕೊಂಡಿದ್ದರು ರಮ್ಯಾ ಅವರು ನೀಡಿದಂತಹ ಹೇಳಿಕೆಯನ್ನು ಕೇಳಿದಂತಹ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಏಕೆಂದರೆ ಕಳೆದ ಐದು ವರ್ಷಗಳಿಂದ ರಮ್ಯಾ ಅಭಿನಯದ ಯಾವ ಸಿನಿಮಾ ಕೂಡ ಇನ್ನೂ ತೆರೆಕಂಡಿಲ್ಲ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಟಿಯರು ಇರಬಹುದು ಆದರೆ ಈಗಲೂ ಕೂಡ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ನಟಿ ಅಂದರೆ ಅದು ರಮ್ಯಾ ಅವರು ಅಂತಾನೆ ಹೇಳಬಹುದು. ಇನ್ನು ರಮ್ಯಾ ಅವರ ವೈಯಕ್ತಿಕ ವಿಚಾರ ಜೀವನದ ವಿಚಾರಕ್ಕೆ ಬರುವುದಾದರೆ ರಮ್ಯಾ ಅವರಿಗೆ ಈಗಾಗಲೇ 39 ವರ್ಷ ಆಗುತ್ತಿದ್ದು 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೂ ಕೂಡ ಇನ್ನೂ ಯಾಕೆ ಖ್ಯಾತ ನಟಿ ಮದುವೆಯಾಗಿಲ್ಲ ಎಂಬ ವಿಚಾರಗಳು ಕೇಳಿ ಬರುತ್ತಿದೆ ಕಳೆದ ಕೆಲವು ವರ್ಷಗಳ ಹಿಂದೆ ರಮ್ಯಾ ಅವರ ಹೆಸರು ರಾಜಕಾರಣಿ ಉದ್ಯಮಿ ಬಿಸಿನೆಸ್ ಮ್ಯಾನ್ ಗಳ ಜೊತೆ ಕೇಳಿ ಬರುತ್ತಿತ್ತು.
ಆದರೆ ರಮ್ಯಾ ಅವರು ಇನ್ನೂ ಕೂಡ ಒಂಟಿಯಾಗಿ ಇದ್ದಾರೆ ಹಾಗಾಗಿ ರಮ್ಯಾ ಅವರ ಜೊತೆಯಲ್ಲಿ ಕೇಳಿ ಬರುತ್ತಿದ್ದಂತಹ ಹೆಸರಿನ ವ್ಯಕ್ತಿಗಳು ಏನಾದರೂ ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಇತ್ತ ಅಥವಾ ಇವೆಲ್ಲವೋ ಕಾಸಿಪ್ಪ ಮದುವೆ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆಯನ್ನು ರಮ್ಯ ಅವರಿಗೆ ಅಭಿಮಾನಿಗಳು instagram ಖಾತೆಯಲ್ಲಿ ಕೇಳಿದರು ಈ ಒಂದು ಪ್ರಶ್ನೆಗೆ ಉತ್ತರ ನೀಡಿದಂತಹ ರಮ್ಯಾ ಅವರು ಬಹುಶಃ ನನ್ನ ಸೌಲ್ ಮೇಟ್ ಸ-ತ್ತು ಹೋಗಿರಬಹುದು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಮ್ಯಾ ಅವರು Iamnotshane ಅವರ Maybe My Soulmate Died ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ನಾನು ಯಾಕೆ ಮದುವೆಯಾಗಿಲ್ಲ? ನನ್ನ ಸೋಲ್‌ಮೇಟ್ ಸತ್ತುಹೋಗಿರಬಹುದು” ಎಂದು ಕ್ಯಾಪ್ಶನ್ ನೀಡಿದ್ದಾರೆ. ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ರಮ್ಯಾ ಅವರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು ಅಂತ ಅನಿಸುತ್ತದೆ. ಆ ಹುಡುಗ ಕೈ ಕೊಟ್ಟಿರಬಹುದು ಅದಕ್ಕೆ ರಮ್ಯಾ ಅವರು ಈ ರೀತಿ ಹೇಳಿಕೊಂಡಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.