ಧಾರಾವಾಹಿಗಳು ನಮ್ಮ ಜೀವನದ ಒಂದು ಭಾಗವಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಏಕೆಂದರೆ ಪ್ರತಿಯೊಬ್ಬರೂ ಕೂಡ ಸಂಜೆ 5:00 ಗಂಟೆ ಆದರೆ ಸಾಕು ಟಿವಿ ಮುಂದೆ ಹಾಜರಾಗಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರಲಿ ಅಥವಾ ಅವರ ಮನಸ್ಸಿಗೆ ಎಷ್ಟೇ ರೀತಿಯಾದಂತಹ ಬೇಸರವಿರಲಿ ಇವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿ ಧಾರವಾಹಿಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಾರೆ ಅದರಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ ಅಂತ ಹೇಳಬಹುದು.
ಸಂಜೆ ಐದರಿಂದ ಹಿಡಿದು ರಾತ್ರಿ ಹನ್ನೊಂದು ಗಂಟೆಯವರೆಗೂ ಪ್ರಸಾರವಾಗುವಂತಹ ಎಲ್ಲ ಧಾರಾವಾಹಿಗಳನ್ನು ನೋಡುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬೆಳ್ಳಿ ತೆರೆಗಿಂತ ಕಿರುತೆರೆಗೆ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಅಂತ ಹೇಳಬಹುದು. ವಾರವಿಡೀ ಧಾರವಾಹಿಗಳ ದರ್ಬಾರು ಆದರೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳು ಇನ್ನಿತರ ಡ್ಯಾನ್ಸಿಂಗ್ ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಾರೆ ಈ ಕಾರಣಕ್ಕಾಗಿಯೇ ಬೆಳ್ಳಿತೆರೆಗಿಂತ ಕಿರುತೆರೆ ಹೆಚ್ಚು ಸದ್ದು ಮಾಡುತ್ತಿರುವುದು.
ಮಹಿಳೆಯರು ಈ ಧಾರಾವಾಹಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಅಂದರೆ ಒಂದು ದಿನದ ಈ ನೋಡಿಲ್ಲ ಅಂದರೆ ಸಾಕು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡ ರೀತಿ ಆಡುತ್ತಾರೆ ಅಷ್ಟರ ಮಟ್ಟಿಗೆ ಈ ಧಾರಾವಾಹಿಯಲ್ಲಿ ಇನ್ವಾಲ್ವಾಗಿರುತ್ತಾರೆ. ಹಾಗಾಗಿ ಈ ಧಾರಾವಾಹಿಗಳು ಅವರ ಜೀವನದ ಒಂದು ಭಾಗವಾಗಿದೆ ಇನ್ನು ಸಾಮಾನ್ಯವಾಗಿ ತಮ್ಮ ನೆಚ್ಚಿನ ಧಾರಾವಾಹಿಗಳು ಮುಕ್ತಾಯವಾಗುತ್ತಿದೆ ಎಂಬ ವಿಚಾರವನ್ನು ಕೇಳಿದಾಗ ಸಾಮಾನ್ಯವಾಗಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಆದರೆ ಈ ಬಾರಿ ಧಾರವಾಹಿ ಪ್ರಿಯರಿಗೆ ದೊಡ್ಡ ಆ.ಘಾ.ತ.ವೇ ಎದುರಾಗಿದೆ ಕಾರಣ ಏಕೆಂದರೆ ಈ ಬಾರಿ ಒಂದು ಧಾರಾವಾಹಿ ಮುಕ್ತಾಯವಾಗುತ್ತಿಲ್ಲ ಬದಲಿಗೆ ಸಾಲು ಸಾಲು ಧಾರಾವಾಹಿಗಳು ಮುಕ್ತಾಯವಾಗುತ್ತಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ನಾಲ್ಕು ಧಾರವಾಹಿಗಳು ಕೂಡ ಮುಕ್ತಾಯವಾಗುತ್ತಿದೆ ಎಂಬ ಮಾಹಿತಿಯು ಇದೀಗ ಲಭ್ಯವಾಗುತ್ತಿದೆ. ಅಷ್ಟಕ್ಕು ಈ ಧಾರಾವಾಹಿಗಳು ಯಾಕೆ ಮುಕ್ತಾಯವಾಗುತ್ತಿದೆ ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ.
ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿದ್ದು ಮುಕ್ತಾಯದ ಹಂತಕ್ಕೂ ಕೂಡ ಬಂದಿದೆ ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ 9 ಪ್ರಾರಂಭ ಮಾಡಬೇಕಿದೆ. ಆದಕಾರಣ ಕಡಿಮೆ ಟಿಆರ್‌ಪಿ ಗಳಿಸುವಂತಹ ಧಾರವಾಹಿಗಳನ್ನು ಮುಕ್ತಾಯ ಮಾಡಿ ಆ ಒಂದು ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಅಂತ ಇದೀಗ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದಂತಹ ಪರಮೇಶ್ ಗುಂಡಲ್ಕರ್ ಅವರು ತೀರ್ಮಾನ ಮಾಡಿದ್ದಾರಂತೆ. ಈ ಕಾರಣಕ್ಕಾಗಿ ನಾಲ್ಕು ಧಾರವಾಹಿಗಳು ಕೂಡ ಮುಕ್ತಾಯವಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಅಷ್ಟಕ್ಕೂ ಮುಕ್ತಾಯವಾಗುತ್ತಿರುವಂತಹ ಧಾರಾವಾಹಿಗಳು ಯಾವುದು ಎಂಬುದನ್ನು ನೋಡುವುದಾದರೆ ಮಂಗಳ ಗೌರಿ ಧಾರವಾಹಿ, ಎರಡನೆಯದಾಗಿ ನಮ್ಮನೆ ಯುವರಾಣಿ, ಮೂರನೇದಾಗಿ ನನ್ನರಸಿ ರಾದೆ, ನಾಲ್ಕನೆಯದಾಗಿ ಕನ್ಯಾಕುಮಾರಿ ಧಾರವಾಹಿ ಈ ನಾಲ್ಕು ಧಾರವಾಹಿಗಳು ಕೂಡ ಇದೀಗ ಟಿ ಆರ್ ಪಿ ಯಲ್ಲಿ ತುಂಬಾ ಕಡಿಮೆ ಮಟ್ಟದ ರಾಂಕಿಂಗ್ ಅನ್ನು ಪಡೆದುಕೊಂಡಿದೆ ಆದ ಕಾರಣ ಈ ಧಾರಾವಾಹಿಯನ್ನು ಮುಕ್ತಾಯಗೊಳಿಸಿ ಈ ಜಾಗಕ್ಕೆ ಬಿಗ್ ಬಾಸ್ ಸೀಸನ್ 9 ರಂದು ಪ್ರಸಾರ ಮಾಡಬೇಕು ಎಂಬ ನಿರ್ಧಾರವನ್ನು ಮಾಡಿದೆಯಂತೆ.
ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಧಾರವಾಹಿ ಅಭಿಮಾನಿಗಳು ಮುಕ್ತಾಯ ಮಾಡಬೇಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರಂತೆ ಇನ್ನು ಕೆಲವು ಬಿಗ್ ಬಾಸ್ ಅಭಿಮಾನಿಗಳು ಮಾತ್ರ ಪ್ರಸಾರವಾಗಲಿ ಅಂತ ಹೇಳುತ್ತಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಯಾವ ರೀತಿಯಾದಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನಿಮ್ಮ ಪ್ರಕಾರ ಧಾರವಾಹಿಗಳು ಮುಂದುವರಿಯಬೇಕಾ ಅಥವಾ ಆ ಜಾಗದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಬೇಕಾ ಎಂಬುದನ್ನು ತಿಳಿಸಿ.