ನಿಮ್ಮೆಲ್ಲರಿಗೂ ತಿಳಿದಿರುವಂತೆ ದೊಡ್ಡ ಮನೆ ಅಂದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾದರಿ ಮನೆ ಅಂತಾನೆ ಹೇಳಬಹುದು ಸರಳತೆ ಸಜ್ಜನಿಕತೆ ಮಾನವೀಯತೆ ಸರಳ ಜೀವನ ನಡೆಸುವುದು ಮತ್ತೊಬ್ಬರಿಗೆ ಸಹಾಯ ಮಾಡುವುದು ಇವೆಲ್ಲವೂ ಕೂಡ ಡಾಕ್ಟರ್ ರಾಜಕುಮಾರ್ ಅವರಿಂದ ಬಳುವಳಿಯಾಗಿಯೇ ಮೂರು ಜನ ಮಕ್ಕಳಿಗೆ ಬಂದಿದೆ. ಚಿತ್ರರಂಗದಲ್ಲಿ ಉತ್ತಮವಾದ ಕುಟುಂಬ ಹಾಗೂ ಉತ್ತಮವಾದ ವ್ಯಕ್ತಿಗಳು ಅಂದರೆ ಅದು ಡಾಕ್ಟರ್ ರಾಜಕುಮಾರ್ ಕುಟುಂಬ ಅಂತಾನೆ ಹೇಳಬಹುದು. ಈ ಕಾರಣಕ್ಕಾಗಿ ಬಹಳಷ್ಟು ಜನ ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ನೋಡಿ ಕಲಿಯಬೇಕು ಅಂತ ಅದೆಷ್ಟೋ ಬಾರಿ ಹೇಳಿದ್ದಾರೆ.
ಈಗಲೂ ಕೂಡ ದೊಡ್ಡ ಮನೆಯ ಬಗ್ಗೆ ಪ್ರತಿಯೊಬ್ಬ ಕಲಾವಿದರು ಕೂಡ ಮಾತನಾಡುತ್ತಾರೆ ಅಷ್ಟು ಘನತೆ ಗೌರವ ಹಾಗೂ ಹೆಸರನ್ನು ಉಳಿಸಿಕೊಂಡು ಬಂದ ಕುಟುಂಬ ಅಂದರೆ ದೊಡ್ಮನೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕೂಡ ತಮ್ಮ ಮೂರು ಜನ ಮಕ್ಕಳ ವಿಚಾರದಲ್ಲಿ ಒಮ್ಮೆ ಬೇಸರವನ್ನು ವ್ಯಕ್ತಪಡಿಸಿದ್ದರು ಎಂಬ ವಿಚಾರ ಹೊರ ಬಿದ್ದಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ರಾಜಕುಮಾರ್ ಅವರು ಯಾವುದೇ ರೀತಿಯಾದಂತಹ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ ಸರಳವಾಗಿಯೇ ತನ್ನ ಮಕ್ಕಳು ಬೆಳೆಯಬೇಕು ಎಂಬ ಆಸೆ ಕನಸನ್ನು ಹೊಂದಿದ್ದರು ಅದರಂತೆ ಅಪ್ಪು ಆಗಿರಬಹುದು ರಾಗಣ್ಣ ಆಗಿರಬಹುದು ಶಿವಣ್ಣ ಆಗಿರಬಹುದು ಎಲ್ಲಿಯೂ ಕೂಡ ಕಿಂಚಿತ್ತು ಅಹಂಕಾರವನ್ನು ತೋರಿಸದೆ ಸರಳತೆಯಿಂದ ಬದುಕನ್ನು ಕಟ್ಟಿಕೊಂಡಂತಹ ವ್ಯಕ್ತಿಗಳು.
ಈ ರೀತಿ ಇದ್ದರು ಕೂಡ ಅಣ್ಣವ್ರು ಯಾಕೆ ಬೇಸರ ವ್ಯಕ್ತಪಡಿಸಿದರು ಎಂಬುದನ್ನು ನೋಡುವುದಾದರೆ ಅಸಲಿಗೆ ಡಾ. ರಾಜಕುಮಾರ್ ಅವರಿಗೆ ಮೂರು ಜನ ಮಕ್ಕಳು ಕೂಡ ಚಿತ್ರರಂಗಕ್ಕೆ ಬರುವುದು ಸ್ವಲ್ಪವೂ ಕೂಡ ಇಷ್ಟವಿರಲಿಲ್ಲವಂತೆ. ಹೌದು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಪ್ರಕಾರ ತಮ್ಮ ಮೂರು ಜನ ಮಕ್ಕಳು ಉದ್ಯಮಿಗಳು ಆಗಬೇಕು ಎಂಬ ಆಸೆ ಕನಸನ್ನು ಹೊಂದಿದ್ದರಂತೆ. ಆದರೆ ಈ ಆಸೆ ಅವರ ಕೊನೆಯ ದಿನದವರೆಗೂ ಕೂಡ ಈಡೇರಲೇ ಇಲ್ಲವಂತೆ. ಹೌದು ಶಿವಣ್ಣ ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕ್ರಿಕೆಟ್ ಅಂದರೆ ಬಹಳ ಪ್ರೀತಿ ಮತ್ತು ಒಲವು ಕ್ರಿಕೆಟ್ನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಅಂದುಕೊಂಡಿದ್ದರಂತೆ ಆದರೂ ಕೂಡ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡಲಿ ಎಂಬ ಕಾರಣಕ್ಕಾಗಿ ಅವರನ್ನು ಮದ್ರಾಸ್ನಲ್ಲಿ ಇಂಜಿನಿಯರಿಂಗ್ ಗೆ ಸೇರಿಸುತ್ತಾರೆ.
ವಿದ್ಯಾಭ್ಯಾಸ ಮುಗಿದ ತಕ್ಷಣ ಅವರು ಉದ್ಯಮಿಯ ಆಗುವುದಿಲ್ಲ ಬದಲಿಗೆ ನಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲ ಮಗ ಏನೋ ಸಿನಿಮಾ ರಂಗಕ್ಕೆ ಹೋದ ಆದರೆ ಇನ್ನೂ ಇಬ್ಬರು ಗಂಡು ಮಕ್ಕಳು ಇದ್ದಾರೆ ಇವರಲ್ಲಿ ಯಾರಾದರೂ ಒಬ್ಬರು ನಮ್ಮ ಆಸೆಯನ್ನು ನೆರವೇರಿಸುತ್ತಾರೆ ಅಂತ ಅಂದುಕೊಂಡಿದ್ದರಂತೆ. ಆದರೆ ರಾಘಣ್ಣ ಅವರು ಎಂಬಿಬಿಎಸ್ ಪದವಿ ಮಾಡುತ್ತಿರುವಾಗಲೇ ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ ತಾವು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಂತೆ. ಆದರೆ ಪಾರ್ವತಮ್ಮ ಅವರಿಗೆ ರಾಘವೇಂದ್ರ ರಾಜಕುಮಾರ್ ದೊಡ್ಡ ನಿರ್ದೇಶಕನಾಗಿ ಹೊರ ಹೊಮ್ಮಬೇಕು ಎಂಬ ಆಸೆ ಇತ್ತಂತೆ ಈ ಆಸೆಯೂ ಕೂಡ ಕನಸಾಗಿಯೇ ಉಳಿಯುತ್ತದೆ.
ಇನ್ನು ಕೊನೆಯದಾಗಿ ಅಪ್ಪು ಆದರೂ ಬಿಸಿನೆಸ್ ಮಾಡಲಿ ಎಂಬ ಯೋಚನೆ ಇತ್ತಂತೆ ಪ್ರಾರಂಭದ ದಿನದಲ್ಲಿ ಅಪ್ಪು ಅವರು ಕೂಡ ಅಣ್ಣಾವ್ರ ಆಸೆಯನ್ನು ಈಡೇರಿಸುವಂತಹ ಕೆಲಸವನ್ನೇ ಮಾಡಿದ್ದಾರಂತೆ. ಹೌದು ಅಪ್ಪು ಅವರು ಕನಕಪುರ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಗ್ರಾನೆಟ್ ಬಿಸಿನೆಸ್ ಪ್ರಾರಂಭ ಮಾಡಿದ್ದರಂತೆ. ಒಂದೆರಡು ವರ್ಷ ಆ ಬಿಸಿನೆಸ್ ನಲ್ಲಿ ನಿರತರಾಗಿದ್ದಾರಂತೆ ಆದರೆ ಕೆಲವು ಕಾರಣಾಂತರಗಳಿಂದ ಆ ಒಂದು ಬಿಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿತ್ತಂತೆ. ತದನಂತರ ಇವರು ಕೂಡ ಅಪ್ಪು ಸಿನಿಮಾದ ಮೂಲಕ 2002 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಅಲ್ಲಿಗೆ ಮೂರು ಮಕ್ಕಳು ಕೂಡ ತಂದೆಯಂತೆಯೇ ಚಿತ್ರರಂಗದಲ್ಲಿ ನಟಿಸಲು ಮುಂದಾಗುತ್ತಾರೆ.
ಈ ಕಾರಣದಿಂದಾಗಿಯೇ ವೇದಿಕೆಯಲ್ಲಿ ಮಾತನಾಡುವಾಗ ಒಮ್ಮೆ ಅಣ್ಣವ್ರು ನನ್ನ ಮೂರು ಜನ ಮಕ್ಕಳನ್ನು ನಾನು ಉದ್ಯಮಿಯನ್ನಾಗಿ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಕಲಾದೇವತೆ ಮೂರು ಜನ ಮಕ್ಕಳಿಗೂ ಕೂಡ ಒಲಿದಿದ್ದಾಳೆ ನಾನು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ ಎಲ್ಲವೂ ದೈವ ಇಚ್ಛೆಯಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಅಣ್ಣಾವ್ರ ಈ ಮಾತನ್ನು ನಾವೆಲ್ಲರೂ ಮೆಚ್ಚಲೇ ಬೇಕು ಏಕೆಂದರೆ ನಟನ ಮಗನು ನಟನೆ ಆಗಬೇಕು, ನಟಿಯ ಮಗಳು ನಟಿಯಾಗಬೇಕು ಎಂದು ಕೆಲವು ಜನ ಆಸೆ ಕನಸನ್ನು ಹೊತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನದಲ್ಲಿ ಸ್ಯಾಂಡಲ್ವುಡ್ ಗೆ ಸಾಕಷ್ಟು ನಟ ನಟಿಯರ ಮಕ್ಕಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಣ್ಣಾವ್ರು ಮಾತ್ರ ಕಿಂಚಿತ್ತು ಕೂಡ ತಮ್ಮ ಮಕ್ಕಳು ನಟರಾಗಬೇಕು ಎಂಬ ಆಸೆಯನ್ನು ಹೊಂದಿರಲಿಲ್ಲವಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.