Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainment"ಮಿಸ್ ಯೂ ಸಾನ್ಯ" ಎಂದು ತಲೆಗೆ ಬಟ್ಟೆ ಕಟ್ಟಿಕೊಂಡು ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ...

“ಮಿಸ್ ಯೂ ಸಾನ್ಯ” ಎಂದು ತಲೆಗೆ ಬಟ್ಟೆ ಕಟ್ಟಿಕೊಂಡು ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ರೂಪೇಶ್ ಶೆಟ್ಟಿ,

ಈ ವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾರು ಊಹಿಸಲಾರದಂತ ಸ್ಪರ್ಧಿ ಮನೆಯಿಂದ ಹೋರಾ ಬಂದಿದ್ದಾರೆ. ಪುಟ್ಟಗೌರಿ ಆಗಿ ಕನ್ನಡಿಗರ ಮನ ಸೆಳೆದಿದ್ದ ಸಾನಿಯಾ ಅಯ್ಯರ್ ಅವರು ಆರನೇ ವಾರಕ್ಕೆ ತಮ್ಮ ಆಟ ಮುಗಿಸಿದ್ದಾರೆ. ಅವರು ಬಹಳ ಲವಲವಿಕೆಯಿಂದ ಮನೆ ಒಳಗೆ ಕಾಣಿಸಿಕೊಳ್ಳುತ್ತಿದ್ದರು ಎಲ್ಲಾ ಚಟುವಟಿಕೆಗಳನ್ನು ಕೂಡ ತಮ್ಮನ್ನು ತೊಡಗಿಸಿಕೊಂಡು ಮನೆ ತುಂಬಾ ಓಡಾಡಿಕೊಂಡು ಇರುತ್ತಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅಲ್ಲದೆ ಇವರು ಬಳಸುತ್ತಿದ್ದ ಕನ್ನಡ ಭಾಷೆಯ ಸ್ಪಷ್ಟತೆ ಎಲ್ಲರಿಗೂ ಇಷ್ಟವಾಗಿ ಅಪ್ಪಟ ಕನ್ನಡತಿ ಎಂದು ಇವರನ್ನು ಒಪ್ಪಿಕೊಂಡಿದ್ದರು. ಈಗ ಇವರು ಎಲಿಮಿನೇಟ್ ಆಗಿ ಹೊರ ಬಿದ್ದಿರುವುದು ಸಾನಿಯಾ ಅಭಿಮಾನಿಗಳು ಸೇರಿದಂತೆ ಬಿಗ್ ಬಾಸ್ ಪ್ರೇಕ್ಷಕರಿಗೂ ಕೂಡ ಶಾಕ್ ಆಗಿದೆ. ಅಲ್ಲದೆ ಮನೆ ಒಳಗೆ ಇರುವ ಸದಸ್ಯರು ಕೂಡ ಇಷ್ಟು ಬೇಗ ಸಾನಿಯಾ ಹೊರ ಹೋಗುತ್ತಾರೆ ಎಂದು ಊಹಿಸಿರಲಿಲ್ಲ ಅನಿಸುತ್ತದೆ.

ಇದೀಗ ಸಾನಿಯಾ ನೆನೆದು ಮನೆ ಒಳಗಿನ ಒಬ್ಬ ಸ್ಪರ್ಧಿ ದಿನ ಕಣ್ಣೀರು ಇಡುತ್ತಿದ್ದಾರೆ. ಇದು ಬೇರಾರು ಅಲ್ಲ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಸೀಸನ್ 9 ಆರಂಭ ಆಗುವ ಮುನ್ನ ನಡೆಸಿದ ಓ ಟಿ ಟಿ ಬಿಗ್ ಬಾಸ್ ಕಾರ್ಯಕ್ರಮದ ದಿನದಿಂದಲೂ ಕೂಡ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ಅವರು ಉತ್ತಮ ಸ್ನೇಹಿತರಾಗಿದ್ದರು.

ಪ್ರತಿಯೊಂದು ವಿಷಯದಲ್ಲೂ ಕೂಡ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಇಷ್ಟು ದಿನ ಜೊತೆಯಾಗಿದ್ದರು. ಕೆಲವೊಮ್ಮೆ ಬೇರೆ ಬೇರೆ ತಂಡಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ತೀರ ಇವರಿಬ್ಬರ ನಡುವೆ ಮನಸ್ತಾಪ ಬಂದಿದ್ದು ಬಹಳ ಕಡಿಮೆ. ಆದರೆ ಕಡೆ ವಾರದಲ್ಲಿ ಮಾತ್ರ ಮನೆ ಮಂದಿ ಎಲ್ಲಾ ನೋಡುವಂತೆ ಇವರು ಕಿತ್ತಾಡಿಕೊಂಡಿದ್ದರು. ಕೆಲವೊಮ್ಮೆ ಸ್ನೇಹಕ್ಕೂ ಮೀರಿದ ಅತಿಯಾದ ವರ್ತನೆಯಿಂದ ಸುದೀಪ್ ಅವರ ಟೀಕೆಗೂ ಗುರಿಯಾಗಿದ್ದ ಇವರು ಪ್ರೇಕ್ಷಕರ ದೃಷ್ಟಿಯಲ್ಲಿ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಾಗಿದ್ದರು.

ಇದೀಗ ಸಾನಿಯಾ ಅವರು ಹೊರ ಬಿದ್ದಿರುವುದರಿಂದ ಮನೆ ಒಳಗೆ ರೂಪೇಶ್ ಶೆಟ್ಟಿ ಒಂಟಿಯಾಗಿದ್ದಾರೆ. ಸಾನಿಯಾ ಹೊರ ಹೋಗುವ ಸಂದರ್ಭದಲ್ಲಿ ಕೂಡ ಅಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗಿಂತ ರೂಪೇಶ್ ಶೆಟ್ಟಿ ಅವರೇ ಹೆಚ್ಚು ಕಣ್ಣೀರಿಟ್ಟಿದ್ದು ಅದರಲ್ಲೂ ಸಾನಿಯ ಅವರ ಮಡಿಲಿನಲ್ಲಿ ಮಲಗಿ ಮಗುವಿನಂತೆ ಬಿಕ್ಕಿಬಿಕ್ಕಿ ಅತ್ತಿದ್ದರು. ಸಾನಿಯಾ ಹೊರ ಬಿದ್ದ ಮರು ದಿನದಿಂದಲೇ ರೂಪೇಶ್ ಶೆಟ್ಟಿ ಸಾನಿಯಾ ಅವರನ್ನು ಮನೆ ಒಳಗೆ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ಪ್ರತಿ ಬಾರಿ ಊಟಕ್ಕೆ ಹೋಗುವಾಗ ಕಣ್ಣೀರಿಡುತ್ತಲೇ ಊಟ ಮಾಡುತ್ತಿದ್ದಾರೆ. ಕಾರಣ ಇಷ್ಟು ದಿನಗಳ ವರೆಗೆ ಸಾನಿಯಾ ಅವರು ಊಟದ ಸಮಯದಲ್ಲಿ ರೂಪೇಶ್ ಶೆಟ್ಟಿ ಅವರಿಗಾಗಿ ಕಾಯುತ್ತಿದ್ದರು ಮತ್ತು ಇಬ್ಬರು ಕೂಡ ಒಟ್ಟಿಗೆ ಊಟ ಮಾಡುತ್ತಿದ್ದರು. ಎಷ್ಟೋ ಬಾರಿ ನಾನು ಅವಳನ್ನು ನೆಗ್ಲೆಕ್ಟ್ ಮಾಡಿದ್ದೆ. ಆದರೆ ಈಗ ಅವರ ಬೆಲೆ ತಿಳಿಯುತ್ತಿದೆ ಎಂದು ಕಣ್ಣೀರಿಡುತ್ತಿದ್ದಾರೆ.

ಮನೆಯ ಇತರ ಸ್ಪರ್ಧಿಗಳು ಇವರನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು ಕೂಡ ರೂಪೇಶ್ ಶೆಟ್ಟಿ ಅವರು ಮಾತ್ರ ಮಿಸ್ ಯು ಸಾನಿಯಾ ಎಂದು ಹಣೆ ಪಟ್ಟಿಯನ್ನು ಕಟ್ಟಿಕೊಂಡು ಮನೆ ತುಂಬಾ ಓಡಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ಮನೆಯಿಂದ ಸಾನಿಯಾ ಅವರು ಹೊರಹೋದ ಮೇಲೆ ಅವರು ಬದಲಾಗಿ ಬಿಡುತ್ತಾರೆ ಎನ್ನುವ ಭಯ ಕಾಡುತ್ತಿದೆಯಂತೆ ಆದರೆ ಇತ್ತ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ರಿಪ್ಲೇ ಮಾಡಿರುವ ಸಾನಿಯಾ ಅವರು ನಾನು ಎಂದೂ ಬದಲಾಗುವುದಿಲ್ಲ ರೂಪಿ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ