Sunday, May 28, 2023
HomeEntertainmentಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ...

ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಸದ್ಯಕ್ಕೆ ದೇಶದಾದ್ಯಂತ ರಾಖಿ ಬಾಯ್ ಆಗಿ ಕರೆಸಿಕೊಳ್ಳುತ್ತಿರುವ ಯಶ್ ಅವರ ಕ್ರೇಝ್ ಈಗ ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದೆ. ಕೆಜಿಎಫ್ ಸಿನಿಮಾ ಗಳ ಸಕ್ಸಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಹಾಕಿ ಮೆರೆಸುತ್ತಿದೆ. ಇವರ ಕೆಜಿಎಫ್ 2 ಸಿನಿಮಾ ಕಂಡ ಅಪೂರ್ವ ಯಶಸ್ಸಿನಿಂದ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಕೆಜಿಎಫ್ ಟೂ ಸಿನಿಮಾ ಆದ ಬಳಿಕ ಬ್ರೇಕ್  ತೆಗೆದುಕೊಂಡು ಫ್ಯಾಮಿಲಿ ಜೊತೆ ಬಿಝಿ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲೂ ಕೂಡ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹೇಳಿಕೊಂಡಿಲ್ಲ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಗಾಂಧಿನಗರದಲ್ಲಿ ಮಾತ್ರ ಇವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಈ ಸಾಲಿನಲ್ಲಿ ಯಶ್ ಅವರು ಬಾಲಿವುಡ್ ಸಿನಿಮಾ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ ಅನ್ನುವ ಸುದ್ದಿ ಕೂಡ ಸೇರಿದೆ. ಸಾಲು ಸಾಲು ಸೋಲನ್ನು ಕಂಡಿರುವ ಬಾಲಿವುಡ್ ಅಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಮಾತ್ರ  ಸ್ವಲ್ಪಮಟ್ಟಿಗೆ ಸದ್ದು ಮಾಡಿತ್ತು.  ಇದೇ ಬ್ರಹ್ಮಸ್ತ ಸಿನಿಮಾದ ಸೀಕ್ವೆಲ್ ಅಲ್ಲಿ ದೇವ್ ಪಾತ್ರದಲ್ಲಿ ನಟಿಸಲು ಯಶ್ ಅವರಿಗೆ ಆಫರ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇದರೊಂದಿಗೆ ಇತ್ತೀಚಿಗೆ ಯಶ್ ಅವರ ಸೋಶಿಯಲ್ ಮೀಡಿಯಾ ಖಾತೆಯಿಂದ ಅವರು ಹಾಲಿವುಡ್ ನಿರ್ದೇಶಕರ ಜೊತೆ ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಶೇರ್ ಆಗಿದ್ದವು. ಇದರಿಂದ ಯಶ್ ಅವರ ಮುಂದಿನ ಸಿನಿಮಾ ಹಾಲಿವುಡ್ ಸಿನಿಮಾ ಆಗಿರಲಿದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಈ ವಿಷಯದ ಬಗ್ಗೆ ಕೂಡ ಎಲ್ಲೂ ಕೂಡ ಸ್ಪಷ್ಟನೆ ಇಲ್ಲ.

ಸದ್ಯಕ್ಕೆ ಮುಂಬೈ ಅಲ್ಲಿ ಕಾಣಿಸಿಕೊಂಡಿರುವ ಯಶ್ ಅವರು ಈಗ ಹೊಸ ಹೇರ್ ಸ್ಟೈಲ್ ಅಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಲ್ಲಿನ ಮಾಧ್ಯಮದವರು ಯಶ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರಶ್ನೆ ಕೂಡ ಕೇಳಿದ್ದಾರೆ. ಅದಕ್ಕೆ ಯಶ್ ಉತ್ತರ ಹೀಗಿತ್ತು. ಕೆಜಿಎಫ್ ಟೂ ಸಿನಿಮಾಗೆ ನಾವು ಈಗಾಗಲೇ ಬಹಳಷ್ಟು ಸಮಯ ತೆಗೆದುಕೊಂಡಿದ್ದೇವೆ ಲಾಕ್ಡೌನ್ ಆದ ಮೇಲೆ ನನಗೆ ಸಮಯದ ಮೌಲ್ಯ ಮತ್ತಷ್ಟು ಗೊತ್ತಾಯಿತು.

ಹಾಗಾಗಿ ಆದಷ್ಟು ಬೇಗ ಮುಂದಿನ ಸಿನಿಮಾಗಳನ್ನು ತರಲಿದ್ದೇವೆ. ಸದ್ಯಕ್ಕೆ ಕೆಜಿಎಫ್ 3 ಸಿನಿಮಾ ಬಗ್ಗೆ ಯೋಚಿಸಿಲ್ಲ ಆದರೆ ಬೇರೆ ಪ್ರಾಜೆಕ್ಟ್ ಗಳ ಮಾತು ಕತೆ ನಡೆಯುತ್ತಿದೆ. ನಾನು ಈಗ ದೊಡ್ಡ ಮಟ್ಟದಲ್ಲಿ ಏನನ್ನಾದರೂ ಸಾಧಿಸಲು ಯೋಚಿಸುತ್ತಿದ್ದೇನೆ ಹಾಗಾಗಿ ಮುಂದಿನ ಸಿನಿಮಾ ಬಗ್ಗೆ  ಕೂಡ ಅದೇ ರೀತಿ ಯೋಚಿಸುತ್ತಿದ್ದೇನೆ, ಸದ್ಯಕ್ಕೆ ಸಿನಿಮಾಗೆ ಸಂಬಂಧಪಟ್ಟ ಸ್ಕ್ರಿಪ್ಟ್ ಹಾಗೂ ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಿದ್ದೇನೆ ಎಂದಿದ್ದಾರೆ.

ಯಶ್ ಅವರ ಹೇರ್ ಸ್ಟೈಲ್ ಪ್ರತಿ ಸಿನಿಮಾಗೂ ವಿಭಿನ್ನವಾಗಿರುತ್ತದೆ. ಅವರ ಹಿಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ರಾಜಹುಲಿ ಸಿನಿಮಾದಲ್ಲಿ ಗೂಗ್ಲಿ ಸಿನಿಮಾದಲ್ಲಿ ಗಜಕೇಸರಿ ಸಿನಿಮಾದಲ್ಲಿ ಮತ್ತು ಕೆಜಿಎಫ್ ಸಿನಿಮಾಗಳಲ್ಲಿ ಇವರ ಹೇರ್ ಸ್ಟೈಲ್ ಮತ್ತು ಗಡ್ಡ ಬಹಳ ಜನರ ಗಮನ ಸೆಳೆದಿತ್ತು.

ಪ್ರತಿ ಸಿನಿಮಾದಲ್ಲಿ ವಿಭಿನ್ನ ಗೆಟ್ ಅಪ್ ಅಲ್ಲಿ ಕಾಣಿಸಿಕೊಳ್ಳುವ ಯಶ್ ಅವರ ಈ ಅವತಾರ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಇದು ಯಾವ ಸಿನಿಮಾಕ್ಕಾಗಿ ಎನ್ನುವ ಗುಟ್ಟು ಬಿಟ್ಟು ಕೊಡದ ಯಶ್ ಅವರು ಸಿನಿಮಾ ತಯಾರಿಯಲ್ಲಿ ಮಾತ್ರ ನಿರಂತರವಾಗಿ ಶಿಸ್ತಿನಿಂದ ತೊಡಗಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟದಿಂದ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಲಿ ಎಂದು ಹಾರೈಸೋಣ.