Friday, June 9, 2023
HomeEntertainmentಪಕ್ಕಾ ಹಳ್ಳಿ ಸೊಗಡಲ್ಲಿ ಪುಟ್ಟಲಕ್ಷ್ಮಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ, ಲಂಗ ದಾವಣಿ ತೊಟ್ಟು ಚಂದು ಜೊತೆ...

ಪಕ್ಕಾ ಹಳ್ಳಿ ಸೊಗಡಲ್ಲಿ ಪುಟ್ಟಲಕ್ಷ್ಮಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ, ಲಂಗ ದಾವಣಿ ತೊಟ್ಟು ಚಂದು ಜೊತೆ ಮಾಡಿದ ಈ ಡ್ಯಾನ್ಸ್ ನೋಡಲು 2 ಕಣ್ಣು ಸಾಲದು.

ಕನ್ನಡ ಕಿರುತೆರೆಯ ಜನಪ್ರಿಯ ತಾರಾ ಜೋಡಿಗಳಲ್ಲಿ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಅವರ ಜೋಡಿ ಕೂಡ ಒಂದು, ಸ್ಮಾಲ್ ಸ್ಕ್ರೀನ್ ನ ಕ್ಯೂಟೆಸ್ಟ್ ಕಪಲ್ ಗಳಾಗಿ ಇವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 5 ರಿಂದ ಶುರುವಾದ ಇವರ ಗೆಳೆತನ ನಂತರ ಅನೇಕ ವೇದಿಕೆಗಳಲ್ಲಿ ಜೋಡಿಯಾಗಿ ಕಾಣುವಂತೆ ಮಾಡಿತ್ತು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆ ಬಳಿಕ ಇವರಿಬ್ಬರೂ ಪ್ರೇಮ ವಿವಾಹ ಆಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ರಾಜ ರಾಣಿ ಎನ್ನುವ ಜೋಡಿಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸದ್ಯಕ್ಕೆ ಕನ್ನಡದ ಕಿರುತೆರೆಯ ಅಭಿಮಾನಿಗಳು ಇವರಿಬ್ಬರನ್ನು ತಮ್ಮ ಮನೆ ಮಕ್ಕಳಂತೆ ಪ್ರೀತಿಸುತ್ತಾರೆ. ಇಬ್ಬರಿಗೂ ಸಹ ತಮ್ಮದೇ ಆದ ಅಪಾರ ಅಭಿಮಾನಿ ಬಳಗವಿದ್ದು ಸದಾ ಅವರನ್ನು ರಂಜಿಸುವಲ್ಲಿ ಬಿಝಿ ಆಗಿರುತ್ತಾರೆ.

ಚಂದನ್ ಶೆಟ್ಟಿ ಅವರು ಕನ್ನಡದ ಫೇಮಸ್ ರಾಪರ್ ಇವರು ಮಾಡುವ ರಾಪ್ ಸಾಂಗ್ ಗಳು ಈಗಿನ ಯುವ ಜನತೆಗೆ ಬಹಳ ಇಷ್ಟ, ಇವರು ಮಾಡಿದ ಬಹುತೇಕ ಎಲ್ಲಾ ಹಾಡುಗಳು ಕೂಡ ಹಿಟ್ ಆಗಿದೆ. ಸಿನಿಮಾಗಳಲ್ಲೂ ಕೂಡ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಚಂದನ್ ಶೆಟ್ಟಿ ಅವರು ಕನ್ನಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಗಿದ್ದಾರೆ.

ನಿವೇದಿತ ಗೌಡ ಅವರು ಕೂಡ ಒಂದಾದ ಮೇಲೆ ಒಂದರಂತೆ ಸತತವಾಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತ್ತೀಚಿಗೆ ಅಷ್ಟೇ ಗಿಚ್ಚ ಗಿಲಿಗಿಲಿ ಕಾರ್ಯಕ್ರಮವು ಮುಗಿದಿದೆ. ಮಿಸಸ್ ಇಂಡಿಯಾ ಕಾಂಪಿಟೇಶನ್ ಅಲ್ಲಿ ಕೂಡ ಭಾಗವಹಿಸಿ ಬಂದಿರುವ ನಿವಿ ಅವರಿಗೆ ನಾಯಕಿಯಾಗಿ ನಟಿಸಲು ಅವಕಾಶ ಬರುತ್ತಿದೆಯಂತೆ. ಇದರಲ್ಲಿ ಈಗಾಗಲೇ ಇಷ್ಟವಾದ ಸಬ್ಜೆಕ್ಟ್ ಒಂದು ಆಯ್ದುಕೊಂಡು ಅದರ ತಯಾರಿಯಲ್ಲಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಕಂಟೆಂಟ್ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.

ನಿವೇದಿತ ಗೌಡ ಅವರನ್ನು ಸೋಶಿಯಲ್ ಮೀಡಿಯಾ ಹುಡುಗಿ ಎಂದರೆ ತಪ್ಪಾಗಲಾರದು ಕಾರಣ ಎಂದು. ಇವರು ಈ ಮಟ್ಟಕ್ಕೆ ಸೆಲೆಬ್ರಿಟಿ ಎಂದು ಕರೆಸಿಕೊಳ್ಳಲು ಸೋಶಿಯಲ್ ಮೀಡಿಯಾವೇ ಕಾರಣ. ಸೋಶಿಯಲ್ ಮೀಡಿಯಾಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಹಂಚಿಕೊಳ್ಳುತ್ತಿದ್ದ ಇವರು ನಂತರ ಸಿಕ್ಕ ಅವಕಾಶಗಳನ್ನು ಅದೃಷ್ಟವಾಗಿ ಬದಲಾಯಿಸಿಕೊಂಡು ಇಂದು ಬೇರೆ ಹಂತಕ್ಕೆ ಬೆಳೆದಿದ್ದಾರೆ.

ಈಗಲೂ ಕೂಡ ಎಷ್ಟೇ ಬಿಸಿ ಇದ್ದರೂ ವಿಡಿಯೋಗಳನ್ನು ಮಾಡಿ ಅಥವಾ ಫೋಟೋಶೂಟ್ ಮಾಡಿಸಿ ನಿವೇದಿತ ಗೌಡ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಚ್ಚಿಕೊಳ್ಳುತ್ತಾರೆ. ಅವರು ಇತ್ತೀಚೆಗಷ್ಟೇ ಪತಿಯೊಂದಿಗೆ ಕಿಸ್ಸಿಂಗ್ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಜೊತೆಗೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ಇವರು ಅಲ್ಲೂ ಕೂಡ ಹೊಸತನವನ್ನು ತಂದು ಅಭಿಮಾನಿಗಳನ್ನು ಸೆಳೆಯುತ್ತಾರೆ.

ಇದೀಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸೇರಿ ಹೊಸ ವಿಡಿಯೋ ಒಂದನ್ನು ಮಾಡಿದ್ದು ಅದನ್ನು ಕೂಡ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪುಟ್ಟಲಕ್ಷ್ಮಿ ಒನ್ ಮಿನಿಟ್ ಮ್ಯೂಸಿಕ್ ಎನ್ನುವ ಟ್ಯಾಗ್ಲೈನ್ ಜೊತೆ ಚಂದನ್ ಶೆಟ್ಟಿ ಅವರು ಪುಟ್ಟಲಕ್ಷ್ಮಿ ಅಂತಿರುವ ನಿವೇದಿತ ಗೌಡ ಅವರ ಜೊತೆ ಹಳ್ಳಿ ಉಡುಗೆಯಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ.

ಇದು ಪಕ್ಕ ಹಳ್ಳಿ ಸೊಗಡಿನ ಹಾಡಾಗಿದ್ದು ಇದರಲ್ಲಿ ನಿವಿ ಲಂಗ ದಾವಣಿ ತೊಟ್ಟು ಕಾಣಿಸಿಕೊಂಡಿದ್ದರೆ, ಚಂದನ್ ಶೆಟ್ಟಿ ಕೂಡ ಹಳ್ಳಿ ಹುಡುಗನ ಪ್ಯಾಂಟು ಅಂಗಿ ಹಾಕಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಮನೆ, ಹಳ್ಳಿ ಹುಡುಗರು ಹಾಗೂ ಹಳ್ಳಿ ವಾತಾವರಣ ಈ ಹಾಡಿನಲ್ಲಿ ತುಂಬಿದ್ಧು ಈಗ ಹಾಡಿನ ಸಣ್ಣ ತುಂಡು ರಿಲೀಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಪೂರ್ತಿ ಹಾಡನ್ನು ರಿಲೀಸ್ ಮಾಡುವಂತೆ ಮನವಿ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.