ನಿಶ್ವಿಕಾ ನಾಯ್ಡುಗೆ ಮೀಡಿಯಾ ಮುಂದೆನೇ ಕಿಸ್ ಕೊಟ್ಬಿಟ್ರು ನಟಿ ಮೇಘಾ ಶೆಟ್ಟಿ ವೈರಲ್ ವಿಡಿಯೋ ನೋಡಿ ಎಲ್ರೂ ಶಾ-ಕ್

 

ಕನ್ನಡದಲ್ಲೊಂದು ಮಾತಿದೆ ಎರಡು ಜಡೆಗಳು ಕೂಡುವುದಿಲ್ಲ ಎಂದು. ಮನೆ ಒಳಗಿನ ಸಂಬಂಧಗಳಲ್ಲಾಗಲಿ ಅಥವಾ ಮನೆ ಹೊರಗಿನ ಪ್ರಪಂಚದಲ್ಲೇ ಆಗಲಿ ಎಲ್ಲಾದರೂ ಇಬ್ಬರು ಮಹಿಳೆಯರು ಒಟ್ಟಿಗೆ ಇದ್ದಾಗ ಅಲ್ಲಿ ಹೊಂದಾಣಿಕೆ ಅವರಿಬ್ಬರಲ್ಲಿ ಕಂಡುಬರುವುದಿಲ್ಲ. ಸಿನಿಮಾ ವಿಚಾರದಲ್ಲೂ ಕೂಡ ಇಬ್ಬರು ನಾಯಕಿಯರು ಒಂದೇ ಸಿನಿಮಾದಲ್ಲಿ ಇದ್ದಾಗ ಅವರಿಬ್ಬರು ಶೂಟಿಂಗ್ ಸೆಟ್ ಅಲ್ಲಿ ಅಥವಾ ಡಬ್ಬಿಂಗ್ ಮಾಡುವಾಗ ಕಿತ್ತಾಡಿಕೊಂಡು ಸುದ್ದಿಯಾಗಿರುವ ಅನೇಕ ಉದಾಹರಣೆಗಳು ಇವೆ.

ಆದರೆ ಅದಕ್ಕೆಲ್ಲ ಅನ್ವರ್ಥಕವಾಗಿ ನಡೆದುಕೊಳ್ಳುತ್ತಿದೆ ದಿಲ್ ಪಸಂದ್ ಸಿನಿಮಾದ ಟೀಮ್. ದಿಲ್ ಪಸಂದ್ ಕನ್ನಡದ ಒಂದು ಅದ್ಭುತ ಎಂಟರ್ ಟೈನಿಂಗ್ ಸಿನಿಮಾ ಆಗಿದ್ದು ಇದೇ ನವೆಂಬರ್ 11ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿದ್ದು, ಈ ನಾಯಕನಿಗೆ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ ಮತ್ತು ನಿಷ್ವಿಕ ನಾಯ್ಡು ಅವರಿಬ್ಬರು ನಾಯಕಿಯರಾಗಿದ್ದಾರೆ.

ಕಿರುತೆರೆ ಜನರಿಗೆ ಅನು ಆಗಿ ಪರಿಚಿತರಾಗಿರುವ ಮೇಘ ಶೆಟ್ಟಿ ಅವರ ಮೊದಲ ಕನ್ನಡ ಸಿನಿಮಾ ಇದಾಗಿದ್ದು ಈ ಸಿನಿಮಾದಲ್ಲಿ ಮಿಂಚು ಎನ್ನುವ ಅಪ್ಪಟ ಹಳ್ಳಿ ಟ್ರೆಡಿಷನಲ್ ಕುಟುಂಬದ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿಶ್ಚಿಕ ನಾಯ್ಡು ಅವರು ಸಖತ್ ಬೋಲ್ಡ್ ಹಾಗೂ ಸ್ಟ್ರಾಂಗ್ ವಿಮೆನ್ ಆಗಿ ಸದಾ ನಗು ನಗುತ್ತಿರುವ ಕೃಷ್ಣನ ಕಾಡುವ ನಾಯಕಿಯಾಗಿದ್ದಾರೆ. ಸಿನಿಮಾದ ಪ್ರೀಮಿಯಂ ಶೋ ಅನ್ನು ಇಬ್ಬರು ಒಟ್ಟಿಗೆ ನೋಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಈ ಸಿನಿಮಾ ಬಗ್ಗೆ ಮಾತನಾಡುವಾಗ ಮೇಘ ಶೆಟ್ಟಿ ಅವರು ಮೊದಲಿಗೆ ಮಾತನಾಡಿ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಎಲ್ಲರೂ ಕೂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಒಂದು ಇನ್ನೋಸೆಂಟ್ ಹುಡುಗಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ, ನಿಶ್ಚಿಕ ನಾಯ್ಡು ಅವರ ಪಾತ್ರ ನನಗಿಂತ ಬಹಳ ಎಂಟರ್ಟೈನಿಂಗ್ ಆಗಿದೆ.

ಡಬ್ಬಿಂಗ್ ಸಮಯದಲ್ಲಿ ನಾವು ಸಿನಿಮಾವನ್ನು ನೋಡಲು ಆಗಲಿಲ್ಲ ಹಾಗಾಗಿ ಇಂದು ಸಿನಿಮಾವನ್ನು ಆಡಿಯನ್ಸ್ ಆಗಿ ಎಂಜಾಯ್ ಮಾಡಿದ್ದೇವೆ. ಸಿನಿಮಾವನ್ನು ಎಲ್ಲರೂ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ನಮ್ಮ ತಂಡಕ್ಕೆ ಶುಭವಾಗಲಿ ಎಂದು ಹೇಳುತ್ತಾ ಕ್ಯಾಮರ ಮುಂದೆಯೇ ಪಕ್ಕದಲ್ಲಿದ್ದ ಕೋ ಆರ್ಟಿಸ್ಟ್ ನಿಶ್ಚಿಕ ನಾಯ್ಡು ಅವರಿಗೆ ಮುತ್ತನಿಟ್ಟಿದ್ದಾರೆ.

ನಿಶ್ಚಿಕ ನಾಯ್ಡು ಅವರು ಸಿನಿಮಾದಲ್ಲಿ ಬಹಳ ತರ್ಲೆ ಹುಡುಗಿ ಆಗಿದ್ದರೂ ಅವರ ಖುಷಿಯ ಹಿಂದಿರುವ ನೋವಿನ ಕಥೆಯೇ ದಿಲ್ ಪಸಂದ್ ಚಿತ್ರದ ಟ್ವಿಸ್ಟ್ ಆಗಿದೆಯಂತೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರು ಡಾರ್ಲಿಂಗ್ ಕೃಷ್ಣ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಗಿರಿ, ಅಚ್ಯುತ್ ಕುಮಾರ್ ಸೇರಿದಂತೆ ಉಳಿದ ಕಲಾವಿದರು ಕೂಡ ಅತ್ಯುತ್ತಮವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಜೊತೆಗೆ ಅಜಯ್ ರಾವ್ ಅವರು ಸ್ಪೆಷಲ್ ಪಾತ್ರವೊಂದನ್ನು ನಿಭಾಯಿಸಿದ್ದು ಕೆಲವೇ ನಿಮಿಷಗಳು ಸಿನಿಮಾದಲ್ಲಿ ಕಾಣಿಸಿಕೊಂಡರು ನೆನಪಿರುವಂತಹ ಪಾತ್ರ ಮಾಡಿದ್ದಾರಂತೆ. ಶಿವ ತೇಜಸ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಶುಭವಾಗಲಿ. ಈಗ ನಮ್ಮ ಕನ್ನಡದ ಸಿನಿಮಾಗಳು ದೇಶದಾದ್ಯಂತ ಮತ್ತು ದೇಶದ ಗಡಿಯನ್ನು ಕೂಡ ದಾಟಿ ಹೆಸರು ಮಾಡುತ್ತಿವೆ. ದಿಲ್ ಪಸಂದ್ ಚಿತ್ರ ಕೂಡ ಇದೇ ರೀತಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳಲಿ. ಒಂದು ಒಳ್ಳೆಯ ಗಟ್ಟಿ ಕಥೆಯನ್ನು ಹೊಂದಿರುವ ಈ ಸಿನಿಮಾ ತಂಡಕ್ಕೆ ಒಳಿತಾಗಲಿ ಎಂದು ಹಾರೈಸೋಣ. ಈ ವಿಚಾರ ಇಷ್ಟ ಆಗಿದ್ರೆ ತಪ್ಪದೆ ಲೈಕ್ ಕೊಟ್ಟು ಶೇರ್ ಮಾಡಿ

Leave a Comment

WhatsApp Group Join Now
Telegram Group Join Now