Sunday, June 4, 2023
HomeEntertainmentದರ್ಶನ್ 56ನೇ ಸಿನಿಮಾಗೆ ನಟಿಯಾಗಿದ್ದ ಮಾಲಶ್ರೀ ಮಗಳು ರಾಧನಾ ಡಿ-ಬಾಸ್ ಗೆ ಕೈ ಕೊಟ್ಟು ಇದೀಗ...

ದರ್ಶನ್ 56ನೇ ಸಿನಿಮಾಗೆ ನಟಿಯಾಗಿದ್ದ ಮಾಲಶ್ರೀ ಮಗಳು ರಾಧನಾ ಡಿ-ಬಾಸ್ ಗೆ ಕೈ ಕೊಟ್ಟು ಇದೀಗ ಧೃವ ಸರ್ಜಾ ಸಿನಿಮಾಗೆ ನಟಿಯಾಗುತ್ತಿದ್ದಾರೆ ಯಾಕೆ ಗೊತ್ತ.?

 

ಮಾಲಾಶ್ರೀ ಅವರ ಬದುಕು ಸಿನಿಮಾಗಾಗಿ ಮುಡಿಪಾಗಿಟ್ಟಿತ್ತು ಎಂದು ಹೇಳಬಹುದು. ಯಾಕೆಂದರೆ ಒಂದು ದಶಕದಲ್ಲಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ನಾಯಕಿ ಮಾತ್ರ ಅಲ್ಲದೆ ನಾಯಕರಂತೆ ಮಿಂಚಿದವರು. ಖಡಕ್ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ, ಹೆಣ್ಣು ಮಕ್ಕಳಿಗಾಗುವ ಅನ್ಯಾಯದ ವಿರುದ್ಧ ತಿರುಗಿ ಬೀಳುವ ಗಟ್ಟಿಗಿತ್ತಿ ಪಾತ್ರದಲ್ಲಿ ಮತ್ತು ಬೆಳ್ಳಿ ಕಾಲುಂಗುರ ಸಿನಿಮಾದಂತಹ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ಹೀಗೆ ನಾನಾ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕನಸಿನ ರಾಣಿ ಇವರು.

ಇವರ ಕೈ ಹಿಡಿದಿದ್ದು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕ ಎನ್ನುವ ಖ್ಯಾತಿಗೆ ಒಳಗಾಗಿದ್ದ ನಿರ್ಮಾಪಕ ಕೋಟಿ ರಾಮ್ ಅವರ ಜೊತೆ. ಕೋಟಿರಾಮ್ ಅವರು ಕೂಡ ಕನ್ನಡದ ಅದೆಷ್ಟು ನಾಯಕರುಗಳಿಗೆ ಹಣ ಹೂಡಿ ಅವರೆಲ್ಲ ಸೂಪರ್ ಸ್ಟಾರ್ಗಳು ಆಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಅವರ ನಿರ್ಮಾಣದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಬೆಸ್ಟ್ ಸಿನಿಮಾಗಳು ಕೊಡುಗೆಯಾಗಿ ಬಂದಿವೆ. ಇದೀಗ ಇವರಿಬ್ಬರ ಮುದ್ದಿನ ಮಗಳು ರಾಧನ ರಾಮ್ ಕೂಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಅಖಾಡಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಇಚ್ಛೆಯಿಂದ ಮುಂಬೈ ಅಲ್ಲಿ ಹೋಗಿ ಅನೇಕ ಕೋಚಿಂಗ್ ಗಳನ್ನು ಕೂಡ ತೆಗೆದುಕೊಂಡು ತಯಾರಾಗಿ ಬಂದಿರುವ ರಾಧನ ರಾಮ್ ಅವರ ಮೊದಲ ಸಿನಿಮಾವು ಕನ್ನಡದ ಸ್ಟಾರ್ ನಟನೊಂದಿಗೆ ಎನ್ನುವುದು ಎಲ್ಲರಿಗೂ ತಿಳಿದಿದೆ.

ನಮ್ಮೆಲ್ಲರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಸಿನಿಮಾವಾದ ಡಿ-56 ಎನ್ನುವ ಸಿನಿಮಾದಲ್ಲಿ ರಾಧನ ರಾಮ್ ಅವರು ಡಿ ಬಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಈಗಾಗಲೇ ಡಿ-56 ಸಿನಿಮಾ ತಂಡದಿಂದ ಅಧಿಕೃತವಾಗಿ ತಿಳಿಸಿ ಆಗಿದೆ. ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಮೂಲಕ ರಾಧನಾರಾಮ್ ನಾಯಕಿ ಆಗಿ ಲಾಂಚ್ ಅಗಲಿದ್ದಾರೆ.

ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದ್ದು ಕ್ರಾಂತಿ ಸಿನಿಮಾ ಮುಗಿದ ಬಳಿಕ ಈ ಸಿನಿಮಾದ ಶೂಟಿಂಗ್ ಶುರುವಾಗಬೇಕಿದೆ. ಇದೇ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟನೊಂದಿಗೆ ಅಭಿನಯಿಸುವ ಅದೃಷ್ಟವನ್ನು ತನ್ನ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ರಾಧನ ಪಡೆದುಕೊಂಡಿದ್ದಾರೆ. ಅದು ಕೂಡ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಸಕ್ಸಸ್ ಪಡೆದ ಸ್ಟಾರ್ ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರೊಂದಿಗೆ.

ಧ್ರುವ ಸರ್ಜಾ ಅವರು ತಮ್ಮದೇ ಆದ ವಿಭಿನ್ನ ಬಗೆಯ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದ್ಧೂರಿ, ಬಹದ್ದೂರ್, ಭರ್ಜರಿ, ಪೊಗರು ಅಂತಹ ಚಿತ್ರಗಳನ್ನು ಕೊಟ್ಟಿರುವ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ನಿರೀಕ್ಷೆ ಇದೆ. ಈಗಾಗಲೇ ಸದ್ದಿಲ್ಲದೆ ಪ್ರೇಮ್ ಅವರ ನಿರ್ದೇಶನದಲ್ಲಿ ಧ್ರುವ ನಟಿಸುತ್ತಿರುವ ಕೇಡಿ ಎನ್ನುವ ಚಿತ್ರದ ಮುಹೂರ್ತವು ನಡೆದಿದ್ದು ಅದರ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಿ ಎಲ್ಲರಿಗೂ ವಿಷಯ ತಿಳಿಸಲಾಗಿದೆ.

ಇದು ಸುದ್ದಿಯಾಗುತ್ತಿದ್ದಂತೆ ಸಿನಿಮಾ ನಾಯಕಿ ಯಾರು ಎನ್ನುವ ವಿಷಯ ಎಲ್ಲೆಡೆ ಚರ್ಚೆ ಆಗುತ್ತಿತ್ತು, ಗಾಂಧಿನಗರದ ಮೂಲಗಳ ಪ್ರಕಾರ ರಾಧನ ರಾಮ್ ಅವರು ಈ ಸಿನಿಮಾಗೆ ನಾಯಕಿ ಆಗಿರಲಿದ್ದಾರಂತೆ. ಜೋಗಿ ಪ್ರೇಮ್ ಅವರ ತಂಡವು ಈಗಾಗಲೇ ಈ ಸಿನಿಮಾ ಗೆ ಅವರನ್ನು ಅಪ್ರೋಚ್ ಮಾಡಿ ಮಾಲಶ್ರೀ ಅವರನ್ನು ಹಾಗೂ ಅವರ ಮಗಳು ರಾಧನ ರಾಮ್ ಅವರನ್ನು ಒಪ್ಪಿಸಿದ್ದಾರಂತೆ. ಹೀಗೆ ತನ್ನ ಮೊದಲ ಎರಡು ಸಿನಿಮಾಗಳಿಗೂ ಸ್ಟಾರ್ ನಟರಿಗೆ ನಾಯಕಿ ಆಗುವ ಅದೃಷ್ಟ ಪಡೆದುಕೊಂಡ ಲಕ್ಕಿ ಗರ್ಲ್ ರಾಧನಾ ರಾಮ್ ಆಗಿದ್ದಾರೆ.