Home Entertainment “ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

“ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

0
“ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

ಶ್ವೇತಾ ಚಂಗಪ್ಪ ಕ್ಯೂಟ್ ವಿಡಿಯೋ

ಕೊಡಗಿನ ಚೆಲುವೆ ಶ್ವೇತ ಚಂಗಪ್ಪ ಕರ್ನಾಟಕದಾದ್ಯಂತ ಸೀರಿಯಲ್ ಕಲಾವಿದೆ ಆಗಿ ಪರಿಚಿತರು. ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಎನ್ನುವ ಮೆಘಾ ದಾರವಾಹಿಯಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿನ ಕಾಲ ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಇವರನ್ನು ಮಜಾ ಟಾಕೀಸ್ ಬರುವವರೆಗೂ ಜನ ಅದೇ ಕಾದಂಬರಿ ಹೆಸರಿನಿಂದಲೇ ಗುರುತಿಸುತ್ತಿದ್ದರು.

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಎರಡನೇ ಸೀಸನ್ನಲ್ಲಿ ಕೂಡ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಇವರು ಅಂತಿಮ ದಿನದವರೆಗೂ ಮನೆಯಲ್ಲಿ ಇದ್ದುಕೊಂಡು ಟಫ್ ಫೈಟ್ ಕೊಟ್ಟ ಗಟ್ಟಿಗಿತ್ತಿ. ಕಡೆಯ ಮೂರನೇ ಸ್ಪರ್ಧೆಯಾಗಿ ಗೆಲುವನ್ನು ಕೂದಲ ಅಂತರದಲ್ಲಿ ಕಳೆದುಕೊಂಡ ಇವರು ನಂತರ ಬಂದ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ತಂಡವನ್ನು ಸೇರಿಕೊಂಡರು.

ಮಜಾ ಟಾಕೀಸ್ ಅಲ್ಲಿ ಸೃಜನ್ ಅವರ ಸಪ್ನೋಕಿ ರಾಣಿ ಆಗಿ ಪತ್ನಿಯಂತೆ ಅಭಿನಯ ಮಾಡಿದ ಇವರ ಹಾಸ್ಯದ ಮೋಡಿಗೆ ಜನ ಆಶ್ಚರ್ಯ ಚಕಿತರಾದರು. ಧಾರಾವಾಹಿಗಳಲ್ಲಿ ಕಣ್ಣೀರಿನ ನಾಯಕಿ ಆಗಿದ್ದ ಶ್ವೇತ ಚಂಗಪ್ಪ ಅವರು ಹಾಸ್ಯಕ್ಕೂ ಕೂಡ ಅಷ್ಟೇ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ತಿಳಿದಿದ್ದು ಮಜಾ ಟಾಕೀಸ್ ಇಂದ.

ಶ್ವೇತ ಚಂಗಪ್ಪ ಅವರು ಬಹುಮುಖ ಪ್ರತಿಭೆ ಆಕ್ಟಿಂಗ್, ರಿಯಾಲಿಟಿ ಶೋಗಳ ಹೋಸ್ಟಿಂಗ್, ಮತ್ತು ಸ್ವಂತ ಉದ್ದಿಮೆ ಹಾಗೇ ತನ್ನದೇ ಯೌಟ್ಯೂಬ್ ಚಾನೆಲ್ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಇವರು ಸದ್ಯಕ್ಕೆ ಮತ್ತೊಮ್ಮೆ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗೆ ಆಂಕರ್ ಆಗಿದ್ದಾರೆ. ಈ ಹಿಂದೆ ಇದೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಾಲಕ್ಕೊಂದು ಸಲಾಮ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಕೊಟ್ಟಿದ್ದರು.

ಬಹಳ ವರ್ಷಗಳ ನಂತರ ಮತ್ತೆ ನಿರೂಪಣೆಗೆ ಇಳಿದಿರುವ ಇವರು ಈ ಬಾರಿ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಆಂಕರ್ ಆಗಿದ್ದಾರೆ. ತನ್ನ ನಗು ಹಾಗೂ ಮಾತಿನ ಚಾತುರ್ಯದಿಂದ ಅದ್ಭುತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಇವರಿಗೆ ಕಿರುತೆರೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲಿನಿಂದಲೂ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಸಕ್ರಿಯವಾಗಿದ್ದಾರೆ.

ತನ್ನ ಸೋಶಿಯಲ್ ಮೀಡಿಯಾ ಅಭಿಮಾನಿಗಳನ್ನು ಫಾಲೋವರ್ ಗಳನ್ನು ರಂಜಿಸುವ ಸಲುವಾಗಿ ಆಗಾಗ ರೀಲ್ಸ್ ಗಳನ್ನು ಮಾಡಿ ಅಪ್ಲೋಡ್ ಕೂಡ ಮಾಡುತ್ತಿರುತ್ತಾರೆ. ಇದೀಗ ಶ್ವೇತಾ ಚಂಗಪ್ಪ ಅವರು ನೋಡುತ್ತಿದ್ದಾಗೆ ಕಳೆದು ಹೋದೆ ರಾಮ ರಾಮ ಎಂದು ಹಾಡಿಗೆ ಕುಣಿದು ರೀಲ್ಸ್ ಮಾಡಿದ್ದಾರೆ. ಈ ಹಾಡು ಈಗಷ್ಟೇ ಬಿಡುಗಡೆ ಆಗಿರುವ ಡಾರ್ಲಿಂಗ್ ಕೃಷ್ಣ ಮತ್ತು ನಿಷ್ವಿಕ ನಾಯ್ಡು ಹಾಗೂ ಮೇಘ ಶೆಟ್ಟಿ ಅವರು ಅಭಿನಯಿಸಿರುವ ದಿಲ್ ಪಸಂದ್ ಚಿತ್ರದಾಗಿದ್ದು.

ಈ ಚಿತ್ರದಲ್ಲಿ ನಿಶ್ವಿಕ ನಾಯ್ಡು ಅವರು ಬಹಳ ಅದ್ಭುತವಾಗಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಯಾವ ಊರ ಚೆಲುವಾನೋ, ಹೊತ್ಕೊಂಡು ಹೋಗಲು ಬಂದಾನೋ ನೋಡುತ್ತಿದ್ದಂತೆ ಕಳೆದು ಹೋದನಲ್ಲ ರಾಮ ರಾಮ ಎಂದು ಸ್ಟೆಪ್ ಹಾಕಿರುವ ನಿಶ್ವಿಕ ನಾಯ್ಡು ಅವರ ನೃತ್ಯ ಮತ್ತು ಈ ಹಾಡಿನ ಕ್ಯಾಚಿ ಲಿರಿಕ್ಸ್ ಎಲ್ಲರಿಗೂ ಇಷ್ಟ ಆಗಿದ್ದು ಸದ್ಯಕ್ಕೆ ಟ್ರೆಂಡಿಂಗ್ ಅಲ್ಲಿ ಇರುವ ರೀಲ್ಸ್ ಹಾಡುಗಳಲ್ಲಿ ಇದು ಕೂಡ ಒಂದು.

ಇದೇ ಹಾಡನ್ನು ಆಯ್ದುಕೊಂಡು ಶ್ವೇತ ಚೆಂಗಪ್ಪ ಕೂಡ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಜೀ ಕನ್ನಡ ವಾಹಿನಿಯು ತನ್ನ instagram ಖಾತೆಯಲ್ಲಿ ಹಂಚಿಕೊಂಡಿದೆ ಹಾಗೂ ಶ್ವೇತ ಚಂಗಪ್ಪ ಅವರನ್ನು ಟ್ಯಾಗ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಕಾಮೆಂಟ್ಗಳಲ್ಲಿ ಶ್ವೇತ ಚಂಗಪ್ಪ ಅವರ ಬ್ಯೂಟಿ ಹಾಗೂ ಸ್ಟೆಪ್ಗಳನ್ನು ಹಾಡಿ ಹೊಗಳುತ್ತಿದ್ದಾರೆ.

LEAVE A REPLY

Please enter your comment!
Please enter your name here