ಮೆಜಸ್ಟಿಕ್, ಕರಿಯ, ಕಲಾಸಿಪಾಳ್ಯದಿಂದ ಕ್ರಾಂತಿವರೆಗೆ 25 ವರ್ಷದ ಸಿನಿ ಜರ್ನಿ
ಚಾಲೆಂಜಿಂಗ್ ಸ್ಟಾರ್ ಎಂದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ದರ್ಶನ್ ಅವರು ಈಗಲೂ ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಯಜಮಾನ. ಬಾಕ್ಸ್ ಆಫೀಸ್ ಸುಲ್ತಾನ ಎನ್ನುವ ಟೈಟಲ್ ಪಡೆದಿದ್ದರೂ ಕೂಡ ಅಭಿಮಾನಿಗಳ ಪಾಲಿಗಂತು ಪ್ರೀತಿಯ ದಚ್ಚು ದರ್ಶನ್ ಅವರು 55 ಸಿನಿಮಾಗಳನ್ನು ಮಾಡಿ ತಮ್ಮ ಸಿನಿ ಜರ್ನಿಯ 25ನೇ ವಸಂತದಲ್ಲಿದ್ದಾರೆ.
ಈ ಸಮಯಕ್ಕೆ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಜನವರಿ 26 ಕ್ಕೆ ಬಿಡುಗಡೆ ಆಗಿ ಹೊಸ ಬಗೆಯ ಕ್ರಾಂತಿ ಮಾಡಲು ತಯಾರಾಗಿದೆ. ಇದರ ಸಲುವಾಗಿ ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ದರ್ಶನ್ ಅವರು ಸಹ ಫೇಮಸ್ ಯುಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ಕೊಡುವ ಮೂಲಕ ಸಿನಿಮಾ ಕುರಿತು ಮತ್ತು ಸಿನಿಮೇತರ ವಿಷಯದ ಕುರಿತು ತಮ್ಮನ್ನು ಕೇಳುತ್ತಿರುವ ಪ್ರಶ್ನೆಗಳಿಗೆಲ್ಲ ನೇರವಾಗಿ ಉತ್ತರಿಸುತ್ತಿದ್ದಾರೆ.
ಡೆಕ್ಕನ್ ಹೆರಾಲ್ಡ್ ಎನ್ನುವ ಯೂಟ್ಯೂಬ್ ಚಾನೆಲ್ ದರ್ಶನ್ ಅವರ ಇಂಟರ್ವ್ಯೂ ಮಾಡಿದ್ದು ದರ್ಶನ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮುಖ್ಯವಾಗಿ ಮೊದಲಿಗೆ ಕ್ರಾಂತಿ ಸಿನಿಮಾ ಬಗ್ಗೆ ಕೇಳಿದಾಗ ಕ್ರಾಂತಿ ಸಿನಿಮಾವು ಶಿಕ್ಷಣ ವ್ಯವಸ್ಥೆಯ ವ್ಯತ್ಯಾಸವನ್ನು ಅದರಲ್ಲೂ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಈಗಿನ ವಿದ್ಯಾಭ್ಯಾಸದ ಕುರಿತು ಬೆಳಕು ಚೆಲ್ಲುವ ಪ್ರಾಜೆಕ್ಟ್ ಆಗಿತ್ತು ಸಿನಿಮಾ ಮನೋರಂಜನೆ ಜೊತೆ ಸಂದೇಶ ಸಾರುವ ಸಿನಿಮಾ ಆಗಿದೆ.
ಯಜಮಾನ ಟೀಮ್ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು ಯಜಮಾನ ಸಿನಿಮಾದಂತೆ ಇದರಲ್ಲೂ ಸಹ ಸಂದೇಶವನ್ನು ಕಮರ್ಷಿಯಲ್ ಆಗಿ ರವಾನಿಸಿದ್ದೇವೆ ಎಂದು ದರ್ಶನ್ ಉತ್ತರಿಸಿದ್ದಾರೆ. ಇನ್ನು ದರ್ಶನ್ ಅವರ ಸಿನಿ ಜರ್ನಿ ಬಗ್ಗೆ ಸಂದರ್ಶಕರು ಪ್ರಶ್ನೆ ಕೇಳಿ ಕರಿಯ, ಕಲಾಸಿಪಾಳ್ಯ ಸಿನಿಮಾದಿಂದ ಹಿಡಿದು ಕ್ರಾಂತಿ ಸಿನಿಮಾದವರೆಗೆ ನಿಮ್ಮ ಜರ್ನಿಯಲ್ಲಿ ಆದ ಬದಲಾವಣೆ ಏನು ಎಂದು ಕೇಳಿದ್ದಾರೆ.
ಅದಕ್ಕೆ ದರ್ಶನ್ ಅವರು ನಾನಂತೂ ಏನು ಬದಲಾಗಿಲ್ಲ ನಾನು ಆಗ ಹೇಗಿದ್ದೇನೋ ಈಗಲೂ ಹಾಗೆ ಇದ್ದೇನೆ ಆದರೆ ಸಿನಿಮಾಗಳು ಬದಲಾಗಿವೆ ಅಷ್ಟೇ. ನಾನು ಮೊದಲ ಸಿನಿಮಾ ಮಾಡಿದ್ದಾಗ 39 ರಿಂದ 40 ಲಕ್ಷದ ಒಳಗೆ ಮೆಜೆಸ್ಟಿಕ್ ಮುಗಿದಿತ್ತು. ಅದು ನನ್ನ ಮೊದಲನೇ ಅವಕಾಶ ಸಂಭಾವನೆ ಇಲ್ಲದೆ ಕೆಲಸ ಮಾಡಿದ್ದೆ. ಆನಂತರ ನಿನಗೋಸ್ಕರ, ನೀನಂದ್ರೆ ಇಷ್ಟ ಸಿನಿಮಾಗಳಿಗಾಗಿ 10 ರಿಂದ 12,000 ಪಡೆದಿರಬಹುದು.
ಕರಿಯ ಎನ್ನುವ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕೊಟ್ಟಾಗ ನಾನು 5000 ರ ರೂಗಳ ಹೀರೊ ಆಗಿದ್ದೆ ಮತ್ತು ಕೆಲವೊಮ್ಮೆ ಒಂದು ಲಕ್ಷ ತೆಗೆದುಕೊಂಡು 9 ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರಬಹುದು, ಸಿನಿಮಾಗಳು ಕೂಡ ಈಗ ಕನ್ನಡ ಸಿನಿಮಾಗಳ ಜೊತೆ ಮಾತ್ರ ಅಲ್ಲದೆ ಬೇರೆ ಸಿನಿಮಾಗಳ ಜೊತೆ ಕಾಂಪಿಟೇಶನ್ ಮಾಡಬೇಕಾಗಿರುವುದರಿಂದ ಅವುಗಳು ಅಷ್ಟೇ ದೊಡ್ಡ ಬಜೆಟ್ಗಳಲ್ಲಿ ತಯಾರಾಗುತ್ತಿವೆ, ಬದಲಾವಣೆ ಆಗಿರುವುದು ಈ ವಿಚಾರದಲ್ಲಿ ಅಷ್ಟೇ ಎಂದು ಹೇಳಿದ್ದಾರೆ.
ಮುಂದುವರೆದು ಆಕ್ಟಿಂಗ್ ಬಗ್ಗೆ ಕೇಳಿದಾಗ ನನಗೆ ಸ್ಟಾರ್ ಹೀರೋ ಆಗಿ ಅಭಿನಯಿಸುವುದು ಸ್ವಲ್ಪ ಸರಳ ಆದರೆ ಹಿಸ್ಟಾರಿಕಲ್ ಅಥವಾ ಮೈತಾಲಜಿಕಲ್ ಪಾತ್ರಗಳಲ್ಲಿ ನಟಿಸುವಾಗ ಸ್ವಲ್ಪ ಕಷ್ಟ ಎನಿಸುತ್ತದೆ ಯಾಕೆಂದರೆ ಈಗಾಗಲೇ ಅದೊಂದು ಪಾತ್ರವಾಗಿದೆ ಯಾರೋ ಆ ರೀತಿ ಇದ್ದು ಹೋಗಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದಾಗ ನಾನು ಇನ್ನಷ್ಟು ಹೆಚ್ಚು ತಯಾರಿಯಲ್ಲಿ ತೊಡಗಿಕೊಳ್ಳುತ್ತೇನೆ.
ಆ ಪಾತ್ರದ ಬಗ್ಗೆ ತಿಳಿದುಕೊಂಡು ಕಲ್ಪಿಸಿಕೊಂಡು ಜವಾಬ್ದಾರಿಯುತವಾಗಿ ಮಾಡುತ್ತೇನೆ. ಆದರೆ ಹೀರೋ ಆದಾಗ ನಾನು ಏನು ಬೇಕಾದರೂ ಮಾಡಿದರು ಅದೊಂದು ಸ್ಟೈಲ್ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಇವರು ಆಡಿದ ಪ್ರತಿ ಮಾತುಗಳು ಕೂಡ ನೇರವಾಗಿದ್ದು, ಅಷ್ಟೇ ಸತ್ಯವಾಗಿದೆ ಅವುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.