Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ

Posted on December 21, 2022 By Kannada Trend News No Comments on ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ
ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ

ನಟ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ಹಾಡನ್ನು ಚಿತ್ರದುರ್ಗದ ಹೊಸಪೇಟೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಅಂದುಕೊಂಡಿದ್ದರು. ಅದರಂತೆ ಭಾನುವಾರ ಸಂಜೆ 7:00ಗೆ ಈ ಒಂದು ಹಾಡನ್ನು ಅಭಿಮಾನಿಗಳ ಕೈನಿಂದಲೇ ರಿಲೀಸ್ ಮಾಡಬೇಕು ಅಂತ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದರೆ ಹಾಡು ಬಿಡುಗಡೆ ಮಾಡುವುದಕ್ಕಿಂತ ಮುನ್ನವೇ ಡಿ ಬಾಸ್ನ ಮೇಲೆ ಅಭಿಮಾನಿಯೊಬ್ಬರು ಚಪ್ಪಲಿಯನ್ನು ಎಸೆದಿದ್ದಾರೆ ನಿಜಕ್ಕೂ ಇದು ದುರ್ಘಟನೆ ಅಂತ ಹೇಳಬಹುದು.

ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಇದು ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಯಾಕೆಂದರೆ ಇಲ್ಲಿಯವರೆಗೂ ಯಾವ ನಟನ ಮೇಲೂ ಕೂಡ ಈ ರೀತಿಯ ಚಪ್ಪಲಿಯ ಎಸೆತ ಆಗಿರಲಿಲ್ಲ. ಆದರೆ ಸ್ಟಾರ್ ವಾರ್ ಎಂಬ ಕಾರಣದಿಂದಾಗಿ ನಟ ದರ್ಶನ್ ಮೇಲೆ ಈ ರೀತಿಯ ಕೃತ್ಯವನ್ನು ಎಸೆಗಿದ್ದಿದ್ದಾರೆ. ಇನ್ನು ನಟ ದರ್ಶನ್ ಮೇಲೆ ಈ ರೀತಿಯಾದಂತಹ ಹ.ಲ್ಲೆ ನಡೆದಿರುವಂತಹ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

ದರ್ಶನ್ ಅಭಿಮಾನಿಗಳು ಈ ಒಂದು ಕೃತ್ಯವನ್ನು ಖಂಡಿಸಿ ಉ.ಗ್ರ ಹೋರಾಟವನ್ನು ಮಾಡುತ್ತಿದ್ದಾರೆ ಇನ್ನು ಸೋಶಿಯಲ್ ಮೀಡಿಯಾದಲ್ಲಂತೂ ಹೇಳುವ ಹಾಗೆ ಇಲ್ಲ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಚೋದನಾತ್ಮಕ ಪೋಸ್ಟರ್ ಗಳನ್ನು ಹಾಕುವುದರ ಮೂಲಕ ಈ ಒಂದು ಪ್ರಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಗಳ ಮನಸ್ಸಿನಲ್ಲಿಯೂ ಕೂಡ ಇದೊಂದು ರೀತಿಯಾದಂತಹ ದ್ವೇಷದ ಮನೋಭಾವನೆಯನ್ನು ಹುಟ್ಟು ಹಾಕುತ್ತಿದೆ.

ಕೆಲವು ಮೂಲಗಳ ಪ್ರಕಾರ ಇದನ್ನು ಅಪ್ಪು ಅಭಿಮಾನಿಗಳು ಮಾಡಿದ್ದಾರೆ ಅಂತ ಹೇಳಿದರೆ ಇನ್ನೂ ಕೆಲವು ಮೂಲಗಳು ಇದು ರಾಜಕೀಯ ಕಾರಣದಿಂದ ಆಗಿದೆ ಎಂದು ಹೇಳುತ್ತಿದ್ದಾರೆ. ಈ ಕೃತ್ಯವನ್ನು ಯಾವ ಅಭಿಮಾನಿ ಮಾಡಿದ್ದರೋ ಏನೋ ತಿಳಿದಿಲ್ಲ ಆದರೂ ಕೂಡ ಈ ರೀತಿ ಮಾಡಿದ್ದು ತಪ್ಪು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯಾ ಅವರು ಎಲ್ಲ ನಟರಿಗೂ ಕೂಡ ಬುದ್ಧಿವಾದ ಹೇಳಿದ್ದಾರೆ.

ನಿಮ್ಮ ನಿಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ಅವರಿಗೆ ತಿಳುವಳಿಕೆಯನ್ನು ಮಾಡಿ ಮನವರಿಕೆಯನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನೇ ನಂಬರ್ ಒನ್ ಸ್ಟಾರ್ ಎಂಬ ಅಹಂಕಾರ ಬಿಟ್ಟು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಎಂದು ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ. ಅಷ್ಟಕ್ಕೂ ರಮ್ಯ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ.

“ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್ ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು.

ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದುಕಷ್ಟವಾಗಿದ್ದರೆ ಹಲವರಿಗೆ ಮೈ ತುಂಬಾಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತ ಬಂದಿರಬಹುದು, ಹಲವರು ಇದ್ದುದ್ದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಿಟ್ಟು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ ಅಷ್ಟೇ ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲು ಅಸಾಧ್ಯ.

ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ ೧ ಮತ್ತು ಈ ಸ್ಥಾನ ನನಗೆ ಮಾತ್ರ ದಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ

ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು. ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗ್ತಿದೆ.

ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ ಇರುವ ಹೆಗ್ಗಳಿಕೆ. ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ

ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳವಳಿಕೆ ಹೇಳಿ ಅವರನ್ನು ಸುಸಂಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು. ಕನ್ನಡ ಚಿತ್ರರಂಗ ಇವತ್ತು ದೇಶ ವಿದೇಶಗಳಲ್ಲಿ ದೊಡ್ಡ ಖ್ಯಾತಿಪಡೆದಿದೆ. IMDB ಉನ್ನತ ೧೦ ಚಿತ್ರಗಳ ಪಟ್ಟಿಯಲ್ಲಿ ೩ ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ. ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಪೂರ್ತಿ ಬೇಕಿದೆಯೇ?

ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಆಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನೆ ಮಾಡೋಣ. ಎಲ್ಲರಿಗು ಒಳಿತಾಗಲಿ ಎಂದು ಟ್ವಿಟ್ ಮಾಡಿದ್ದಾರೆ.

pic.twitter.com/DUrNXwELNe

— Ramya/Divya Spandana (@divyaspandana) December 20, 2022

Entertainment Tags:Darshan, Divya Spandhana, Kranti, Ramya
WhatsApp Group Join Now
Telegram Group Join Now

Post navigation

Previous Post: ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್, ಜೀವದ ಗೆಳೆಯನ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ.?
Next Post: ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore