Friday, June 9, 2023
HomeEntertainmentದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್, ಜೀವದ ಗೆಳೆಯನ...

ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್, ಜೀವದ ಗೆಳೆಯನ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ.?

 

ಈ ಪತ್ರದ ಒಳಗೆ ಕಿಚ್ಚ ಬರೆದಿರುವ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಸತ್ಯವೆನಿಸುತ್ತದೆ.

ಮೊನ್ನೆಯಷ್ಟೇ, ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಕಿಡಿಗಿಡಿಯೊಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ ಆದರೂ ಕೂಡ ದರ್ಶನ್ ಅವರು “ಪರವಾಗಿ ಇಲ್ಲ ಬಿಡು ಚಿನ್ನ ಇಂತಹ ಸಾಕಷ್ಟು ಅವಮಾನವನ್ನು ನಾನು ಜೀವನದಲ್ಲಿ ಅನುಭವಿಸಿದ್ದೇನೆ ಎಂದು ಹೇಳುವ ಮೂಲಕ ದೊಡ್ಡತನವನ್ನು ತೋರಿಸಿದರು”. ಆದರೆ ನಿಜಕ್ಕೂ ಇದು ಒಂದು ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಇಲ್ಲಿಯವರೆಗೂ ಯಾವ ನಟನ ಮೇಲೆಯೂ ಕೂಡ ಇಂಥದ್ದೊಂದು ಕೃತ್ಯ ನಡೆದಿರಲಿಲ್ಲ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇರುವುದು ಸತ್ಯ ಆದರೆ ಈ ಸ್ಟಾರ್ ವಾರ್ ಎಂಬುವುದು ಮಿತಿಮೀರಿ ಹಲ್ಲೆ ಮೀರಿ ನಡೆಯುತ್ತಿರುವುದು ನಿಜಕ್ಕೂ ವಿಷಾದಕರ ವಿಚಾರವೇ. ಇನ್ನು ದರ್ಶನ್ ಅವರ ಮೇಲೆ ಈ ರೀತಿ ಚಪ್ಪಲಿ ಎಸೆದ ವಿಚಾರ ತಿಳಿಯುತ್ತಿದ್ದ ಹಾಗೆ ಸ್ಯಾಂಡಲ್ವುಡ್ ನ ಸಾಕಷ್ಟು ನಟ ನಟಿಯರು ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ‌. ಇನ್ನು ಒಂದು ಕಾಲದಲ್ಲಿ ದರ್ಶನ ಅವರ ಆತ್ಮೀಯ ಸ್ನೇಹಿತರಾಗಿದ್ದಂತಹ ಕಿಚ್ಚ ಸುದೀಪ್ ಅವರು ಕೂಡ ಈ ಒಂದು ಕೃತ್ಯವನ್ನು ಖಂಡಿಸಿ ಸುದೀರ್ಘ ಪತ್ರ ಒಂದನ್ನು ಬರೆದಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಈ ಪತ್ರದಲ್ಲಿ ಬರೆದದ್ದಾದರೂ ಏನು ಎಂಬುದನ್ನು ನೋಡುವುದಾದರೆ.

ದ್ವೇಷ ಎಲ್ಲದಕ್ಕೂ ಉತ್ತರವಲ್ಲ

ನಮ್ಮ ನೆಲ. ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು. ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು ಪರಿಹಾರವು ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ. ಮತ್ತು ಸಮಸ್ಯೆಯನ್ನು ಆಹ್ಲಾದಕರ, ಶಾಂತ ರೀತಿಯಲ್ಲಿ ಪರಿಹರಿಸಬಹುದು.

ದರ್ಶನ್ ಮೇಲೆ ಚಪ್ಪಲಿ ಎಸೆದ ವಿಡಿಯೊ ಬಗ್ಗೆ ಬರೆದಿರುವ ಕಿಚ್ಚ “ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.”

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ನಡುವೆ ಅಲ್ಲಿ ಸರಿ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೇನೋ ಎಂದಿರುವ ಕಿಚ್ಚ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ಪ್ರತಿಕ್ರಿಯೆಯನ್ನು ಪುನೀತ್ ಒಪ್ಪುತ್ತಿದ್ರಾ ಹಾಗೂ ಬೆಂಬಲಿಸುತ್ತಿದ್ರಾ? ಇದಕ್ಕೆ ಉತ್ತರ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೂ ಗೊತ್ತಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಎಸಗಿದ ಬೇಜವಾಬ್ದಾರಿ ಕೃತ್ಯದಿಂದ ಪುನೀತ್ ಅಭಿಮಾನಿಗಳಿಗಿರುವ ಘನತೆ ಹಾಗೂ ಗೌರವವನ್ನು ಹಾಳು ಮಾಡಬಾರದು.

“ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದವರು. ದರ್ಶನ್ ಬಗ್ಗೆ ನನಗಿರುವ ನಿಜವಾದ ಭಾವನೆಯ ಕುರಿತು ಹೇಳುವುದನ್ನು ನಮ್ಮಿಬ್ಬರ ನಡುವಿನ ವೈಮನಸ್ಸಿನಿಂದ ತಡೆಯಲಾಗುವುದಿಲ್ಲ. ಆತನಿಗೆ ಈ ರೀತಿ ಮಾಡುವುದು ಖಂಡಿತ ತಪ್ಪು ಹಾಗೂ ಅದು ನನಗೂ ಸಹ ನೋವನ್ನು ಉಂಟುಮಾಡಿದೆ.

“ಕನ್ನಡ ಚಿತ್ರರಂಗ ಹಾಗು ಕನ್ನಡಿಗರು ಒಳ್ಳೆತನಕ್ಕೆ ಹೆಸರುವಾಸಿ, ಇಂತಹ ಕೃತ್ಯಗಳಿಂದ ಕೆಟ್ಟ ಸಂದೇಶವನ್ನು ರವಾನಿಸಬಾರದು, ಯಾವುದಕ್ಕೂ ರೋಷಾವೇಶದ ಪ್ರತಿಕ್ರಿಯೆಯನ್ನು ನೀಡಬಾರದು, ಪ್ರತಿ ನಟರು ಮತ್ತು ಅಭಿಮಾನಿಗಳಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ತಿಳಿದಿದೆ ಹಾಗೂ ಇಬ್ಬರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ, ಆದರೆ ಪುನೀತ್ ಹಾಗೂ ದರ್ಶನ್ ಇಬ್ಬರ ಜತೆಗೂ ಆಪ್ತತೆ ಹೊಂದಿದ್ದ ಮತ್ತು ಅವರ ಜೀವನದಲ್ಲಿ ಒಳ್ಳೆ ಸ್ಥಾನವನ್ನು ಗಳಿಸಿದ್ದ ನಾನು ಮಾತನಾಡುವ ಸ್ವಾತಂತ್ರ್ಯ ಹೊಂದಿದ್ದು, ನನ್ನ ಭಾವನೆಗಳನ್ನು ಬರೆದಿದ್ದೇನೆ.

ಹೇಳಬೇಕಿದ್ದಕ್ಕಿಂತ ಹೆಚ್ಚು ಹೇಳಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಚಿತ್ರರಂಗದಲ್ಲಿ 27 ವರ್ಷದ ಪಯಣದಲ್ಲಿ ಒಂದು ವಿಷಯ ನನಗೆ ಅರ್ಥವಾಗಿದೆ. ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ” ಎಂದು ಕಿಚ್ಚ ಸುದೀಪ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ಕಿಚ್ಚ ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿದ್ದಾರೆ ಎಂಬುವುದು ತಿಳಿಯುತ್ತಿದೆ.