Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನನ್ನ ಸಿನಿಮಾ ನೋಡ್ದೆ ಇದ್ರೂ ಪರವಾಗಿಲ್ಲ ಅಣ್ಣನ ಕೊನೆ ಸಿನಿಮಾನಾ ದಯವಿಟ್ಟು ನೋಡಿ ಎಂದು ರಿಕ್ವೆಸ್ಟ್ ಮಾಡಿ ವೇದಿಕೆ ಮೇಲೆ ಕಣ್ಣಿರಿಟ್ಟ ನಟ ಧ್ರುವ ಸರ್ಜಾ.

Posted on January 16, 2023 By Kannada Trend News No Comments on ನನ್ನ ಸಿನಿಮಾ ನೋಡ್ದೆ ಇದ್ರೂ ಪರವಾಗಿಲ್ಲ ಅಣ್ಣನ ಕೊನೆ ಸಿನಿಮಾನಾ ದಯವಿಟ್ಟು ನೋಡಿ ಎಂದು ರಿಕ್ವೆಸ್ಟ್ ಮಾಡಿ ವೇದಿಕೆ ಮೇಲೆ ಕಣ್ಣಿರಿಟ್ಟ ನಟ ಧ್ರುವ ಸರ್ಜಾ.

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಶಿವನಂತೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಕೊಟ್ಟು ಅವರ ನಂತರದ ಮತ್ತೊಬ್ಬ ಹ್ಯಾಟ್ರಿಕ್ ಹೀರೋ ಎನಿಸಿಕೊಂಡವರು. ಕನ್ನಡ ಚಲನಚಿತ್ರರಂಗದಲ್ಲಿ ಒಂದು ದಶಕದಿಂದ ಸಕ್ರಿಯರಾಗಿರುವ ಇವರು ಮಾಡಿರುವುದು ಬೆರಳಣಿಕೆ ಅಷ್ಟೇ ಸಿನಿಮಾ ಆದರೂ ಕೂಡ ತಮ್ಮದೇ ಆದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಧ್ರುವ ಸರ್ಜಾ ಅವರ ಸಿನಿಮಾ ಬಗ್ಗೆ ಕನ್ನಡಿಗರಿಗೆ ಬಹಳ ಕ್ರೇಜ್ ಇದ್ದು ಅವರು ಎಷ್ಟೇ ಸಮಯ ತೆಗೆದುಕೊಂಡು ಸಿನಿಮಾ ಮಾಡಿದರು ಕೂಡ ಅದನ್ನು ಬ್ಲಾಕ್ ಬ್ಲಾಸ್ಟರ್ ಸಿನಿಮವನ್ನಾಗಿಸುತ್ತಾರೆ. ಧ್ರುವ ಸರ್ಜಾ ಅವರು ಅದ್ಧೂರಿ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದರು. ನಂತರ ಬಹದ್ದೂರ್ ಭರ್ಜರಿ ಪೊಗರು ಸಿನಿಮಾಗಳನ್ನು ಕೊಟ್ಟ ಇವರು ಈಗ ಮಾರ್ಟಿನ್ ಮತ್ತು ಕೇಡಿ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅವರ ಕುಟುಂಬ ನಾನಾ ನೋವುಗಳನ್ನು ಕಂಡಿದೆ. ಈಗ ಇದೆಲ್ಲವನ್ನು ಅರಗಿಸಿಕೊಂಡು ವಾತ್ಸವವನ್ನು ಒಪ್ಪಿಕೊಂಡು ನಿತ್ಯ ಬದುಕಿನತ್ತ ಗಮನ ಕೊಟ್ಟಿತ್ತಿದೆ. ಅವರ ಮನೆಗೆ ಈ ವರ್ಷ ಮಹಾಲಕ್ಷ್ಮಿಯ ಆಗಮನವಾಗಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ಧ್ರುವ ದಂಪತಿಗೆ ಅಕ್ಟೋಬರ್ 2ರಂದು ಹೆಣ್ಣು ಮಗುವಾಗಿದೆ. ಈಗ ಧ್ರುವ ಅವರು ಯಾವುದೇ ವೇದಿಕೆ ಮೇಲೆ ಹೋದರು ಯಾವುದೇ ಸಂದರ್ಶನ ಎದುರಿಸಿದರೂ ಮಗಳ ಬಗ್ಗೆ ಮಾತನಾಡದೆ ಮಾತು ಮುಗಿಸುತ್ತಿಲ್ಲ.

ಹಾಗೆಯೇ ಕನಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಧ್ರುವ ಸರ್ಜಾ ಅವರು ವೇದಿಕೆ ಮೇಲೆ ಮಗಳ ಬಗ್ಗೆ ಹಾಗೂ ಅಣ್ಣನ ಸಿನಿಮಾ ಮತ್ತು ತಮ್ಮ ಸಿನಿಮಾದ ಕುರಿತು ಹಲವು ಮಾತುಗಳನ್ನು ಅಲ್ಲಿದ್ದ ಕನ್ನಡ ಸಿನಿಮಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಅವರು ಈ ಹಿಂದೆ ಕೂಡ ಕನಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು.

ಈ ಬಾರಿ ಅದೇ ಹಾದಿಯಲ್ಲಿ ಸೋಮನಹಳ್ಳಿಗೆ ಹೋಗಬೇಕಿದ್ದ ಅವರು ಶಿವಣ್ಣ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಎನ್ನುವ ವಿಷಯ ತಿಳಿದು ಕಾರ್ಯಕ್ರಮಕ್ಕೆ ಬಂದಿದ್ದಾಗಿ ಹೇಳಿ ವೇದಿಕೆ ಮೇಲೆ ಇದಕ್ಕೆ ಅವಕಾಶ ಮಾಡಿಕೊಟ್ಟ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಸಹೋದರರಿಗೂ ಧನ್ಯವಾದ ಹೇಳಿದ್ದಾರೆ. ಮತ್ತು ಅಲ್ಲಿ ನೆರೆದಿದ್ದ ಎಲ್ಲರನ್ನು ನನ್ನ ಅಕ್ಕತಂಗಿಯರು ಅಣ್ಣತಮ್ಮಂದಿರು ಹಾಗು ತಾಯಿ ಎಂದು ಹೇಳಿ ಮಾತು ಶುರು ಮಾಡಿದ ಅವರು.

ನಾವು ದಾರಿ ಬದಲಾಯಿಸಿಕೊಂಡು ಇಲ್ಲಿಗೆ ಬರುವುದಕ್ಕೆ ಕಾರಣ ಶಿವಣ್ಣ ಅವರೇ ಎಂದು ಅವರೆದುರೇ ಹೇಳಿ ಎಲ್ಲರನ್ನೂ ಶಿವಣ್ಣನ ವೇದ ಸಿನಿಮಾವನ್ನು ನೋಡಿದಿರಾ ಎಂದು ಕೇಳಿದ್ದಾರೆ. ಆ ಸಿನಿಮಾ ನೋಡಿ ಹೆಣ್ಣು ಮಕ್ಕಳ ಗೌರವ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ಸಹಾ ಮರೆತಿಲ್ಲ. ಈ ವರ್ಷ ಸಂಕ್ರಾಂತಿ ನನಗೆ ಬಹಳ ಸ್ಪೆಷಲ್ ಯಾಕೆಂದರೆ ಕನಕೋತ್ಸವದಲ್ಲಿ ಭಾಗಿ ಆಗಿರುವುದು ಮತ್ತು ನನ್ನ ಮುದ್ದು ಮಗಳ ಜೊತೆ ಮೊದಲ ಸಂಕ್ರಾಂತಿ ಆಚರಿಸುತ್ತಿರುವುದು.

ಹೆಣ್ಣು ಮಕ್ಕಳು ಎಂದ ಮೇಲೆ ಅನೇಕ ಆಚರಣೆಗಳು ಶಾಸ್ತ್ರಗಳು ಇರುತ್ತವೆ. ಹಾಗಾಗಿ ಅವಳ ಜೊತೆ ಸಮಯ ಕಳೆಯುವುದರಲ್ಲಿ ಬ್ಯುಸಿ ಆಗಿಬಿಟ್ಟಿದ್ದೇನೆ. ಈ ತಿಂಗಳ ಅಂತ್ಯದಲ್ಲಿ ನನ್ನ ಮಾರ್ಟಿನ್ ಸಿನಿಮಾ ಟೀಸರ್ ಬಿಡುಗಡೆ ಆಗುತ್ತಿದೆ ನಂತರ ಕೇಡಿ ಬರುತ್ತಿದೆ. ನಿಮ್ಮ ಎಲ್ಲರ ಆಶೀರ್ವಾದ ಇರಲಿ ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ನನ್ನ ಅಣ್ಣ ಚಿರುವಿನ ರಾಜಮಾರ್ತಾಂಡ ಸಿನಿಮಾ ಬರುತ್ತಿದೆ ದಯವಿಟ್ಟು ಎಲ್ಲರೂ ಅವನ ಸಿನಿಮಾವನ್ನು ನೋಡಿ ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾರೆ.

Entertainment Tags:Chiru, Dhruva Sarja
WhatsApp Group Join Now
Telegram Group Join Now

Post navigation

Previous Post: ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದ ಹಾಗೇ, ಬ್ರೇಕಪ್ ಮಾಡಿಕೊಂಡ ಲವ್ ಬರ್ಡ್ಸ್, ಇವರಿಬ್ಬರೂ ದೂರಗುವುದಕ್ಕೆ ನಿಜವಾದ ಕಾರಣವೇನು ಗೊತ್ತ.?
Next Post: ಡಿ-ಬಾಸ್ ನಾ ನೋಡಿ ಕಲಿಬೇಕು, ಹೆಣ್ಣು ಮಕ್ಕಳಿಗೆ ಎಷ್ಟು ಗೌರವ ಕೊಡ್ತಾರೆ, ಅವ್ರನ್ನ ಹೇಗೆ ಸೇಫ್ ಮಾಡ್ತಾರೆ ಅಂತ. ನಾನು ಅದನ್ನ ಕಣ್ಣಾರೆ ಕಂಡಿದ್ದೆನೆ ಎಂದ ನಟಿ ರಚಿತಾ ರಾಮ್.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore