Friday, June 9, 2023
HomeEntertainmentಬಿಗ್ ಬಾಸ್ ನಿಂದ ಹೊರ ಬರುತ್ತಿದ್ದ ಹಾಗೇ, ಬ್ರೇಕಪ್ ಮಾಡಿಕೊಂಡ ಲವ್ ಬರ್ಡ್ಸ್, ಇವರಿಬ್ಬರೂ ದೂರಗುವುದಕ್ಕೆ...

ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದ ಹಾಗೇ, ಬ್ರೇಕಪ್ ಮಾಡಿಕೊಂಡ ಲವ್ ಬರ್ಡ್ಸ್, ಇವರಿಬ್ಬರೂ ದೂರಗುವುದಕ್ಕೆ ನಿಜವಾದ ಕಾರಣವೇನು ಗೊತ್ತ.?

 

 

ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಗಳಾಗಿದ್ದ ಜಶ್ವಂತ್ ಮತ್ತು ನಂದಿನಿ ಅವರು ಸಮಾನ ಮನಸ್ಕರು, ಸಮಾನ ಆಸಕ್ತರು ಇಬ್ಬರಿಗೂ ಡ್ಯಾನ್ಸ್ ಎಂದರೆ ಕ್ರೇಜ್ ಇದೇ ಕಾರಣ ಇವರಿಬ್ಬರನ್ನು ಒಂದು ಮಾಡಿ ಪ್ರೇಮಿಗಳನ್ನಾಗಿಸಿತ್ತು. ಇವರಿಬ್ಬರು ರೋಡಿಸ್ ಎನ್ನುವ ರಿಯಾಲಿಟಿ ಶೋ ಅಲ್ಲಿ ಕೂಡ ಭಾಗವಹಿಸಿದ್ದರು. ರೋಡಿಸ್ 18ರಲ್ಲಿ ನಂದಿನಿ ವಿನ್ನರ್ ಆಗಿದ್ದರೆ ಜಶ್ವಂತ್ ರನ್ನರ್ ಅಪ್ ಆಗಿದ್ದರು.

ಇವರಿಬ್ಬರು ಈ ಬಾರಿಯ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ಗಳಾಗಿ ಮನೆ ಸೇರಿದ್ದರು, ಓಟಿಟಿಯಲ್ಲಿ ಮೊದಲು ಇವರಿಬ್ಬರನ್ನು ಒಂದೇ ಎಂದು ಪರಿಗಣಿಸಿ ಮನೆಯೊಳಗೆ ಬಿಟ್ಟಿತ್ತಾದರೂ ನಂತರ ಪ್ರತ್ಯೇಕವಾಗಿ ಆಟ ಆಡಲು ಘೋಷಿಸಲಾಗಿತ್ತು. ಆರಂಭದ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು ಜಶ್ವಂತ್ ಹಾಗೂ ನಂದಿನಿ ಅವರು ಮನೆ ಒಳಗೂ ಸಹ ಖುಷಿ ಖುಷಿಯಿಂದ ಜೋಡಿ ಹಕ್ಕಿಗಳಂತೆ ಇದ್ದರು.

ಆದರೆ ಕೆಲ ದಿನಗಳ ಬಳಿಕ ಜಶ್ವಂತ್ ಅವರು ಸಾನಿಯಾ ಕಡೆ ಆಕರ್ಷಿತರಾದರು. ಆ ಸಮಯದಲ್ಲಿ ನಂದಿನಿ ಸಹ ಬಹಳ ಮಾನಸಿಕವಾಗಿ ಕಷ್ಟ ಪಟ್ಟರು. ಅದು ಇವರಿಬ್ಬರ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ತಿಳಿಯುತ್ತಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿರುವಾಗ ಅವರಿಬ್ಬರೂ ಆ ಬಗ್ಗೆ ಏನು ಮಾತನಾಡಿರಲಿಲ್ಲ.

ಆದರೆ ಈಗ ಬಿಗ್ ಬಾಸ್ ಇಂದ ಹೊರಬಂದು ಇಷ್ಟು ದಿನಗಳು ಕಳೆದರೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ, ಒಟ್ಟಿಗೆ ಫೋಟೋ ತೆಗೆದುಕೊಂಡಿಲ್ಲ, ಒಬ್ಬರ ಬಗ್ಗೆ ಒಬ್ಬರು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಮಾತನಾಡಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಬಿರುಕು ಮೂಡಿದೆ ಎಂದೇ ಎಲ್ಲರೂ ಮಾತನಾಡುತ್ತಿದ್ದರು. ಈಗ ಅದಕ್ಕೆ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕುವ ಮೂಲಕ ನಂದಿನಿ ಅವರ ಸ್ಪಷ್ಟಣೆ ನೀಡಿದ್ದಾರೆ.

ನಂದಿನಿ ಅವರು ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿರುವ ಅವರ ಬರಹದ ಅರ್ಥ ಈ ರೀತಿ ಇದೆ. ನಾನು ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ದುಃಖಿತಳಾಗಿಲ್ಲ. ನಾನು ನನ್ನನ್ನು ಪ್ರೀತಿಸುವ ಸ್ನೇಹಿತರು, ಕುಟುಂಬಸ್ಥರು, ನನ್ನ ಕೆರಿಯರ್, ನನ್ನ ಆಸಕ್ತಿಗಳು, ನನ್ನ ಆರೋಗ್ಯ, ನನ್ನ ಸಾಕು ಪ್ರಾಣಿಗಳು, ನನ್ನ ಪರಿಸರ ಇವುಗಳ ಜೊತೆ ಬಹಳ ಸಂತೋಷವಾಗಿದ್ದೇನೆ.

ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸಿಹಿಯಾದ ಹೃದಯ ಮತ್ತೆ ನನ್ನ ಬಳಿ ಇದೆ. ಈಗ ಏನು ಇದೆಯೋ ಅದರಲ್ಲೇ ಖುಷಿಯಾಗಿದ್ದೇನೆ. ನಾವು ಯಾವಾಗಲೂ ನಮ್ಮನ್ನು ಪ್ರೀತಿಸುವವರು ಚೆನ್ನಾಗಿರಲಿ ಎಂದೆ ಆಸೆ ಪಡುತ್ತೇವೆ. ಅದನ್ನು ಅವರ ಪಕ್ಕದಲ್ಲಿ ಇದ್ದುಕೊಂಡು ಮಾಡಬಹುದು, ದೂರದಲ್ಲಿದ್ದರೂ ಮಾಡಬಹುದು. ನಾನು ಯಾವಾಗಲೂ ಅವರು ಇಷ್ಟ ಬಂದದ್ದನ್ನು ಎಲ್ಲರೂ ಮಾಡಬೇಕು ಎಂದು ಹೇಳುವವಳು ನಾನು.

ಮೊದಲು ಅವರ ಪ್ರಪೋಸಲ್ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ ಆದರೆ ಒಮ್ಮೆ ಪ್ರೀತಿ ಒಪ್ಪಿಕೊಂಡ ಮೇಲೆ ಮತ್ತೆ ಕೈಚೆಲ್ಲಲಿಲ್ಲ. ಆದರೆ ಈಗ ಜಶ್ವಂತ್ ಅದರ ಬಗ್ಗೆ ಸ್ವಲ್ಪ ಸ್ಪೇಸ್ ಕೇಳುತ್ತಿದ್ದಾರೆ ನಾನು ಅದನ್ನು ಗೌರವ ಮಾಡಬೇಕು. ಈಗ ಇದಕ್ಕಾಗಿ ಎಲ್ಲರೂ ಜಶ್ವಂತ್ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಅದರ ಅಗತ್ಯ ಇಲ್ಲ ಎನಿಸುತ್ತದೆ.

ಯಾಕೆಂದರೆ ಅದು ಅವರ ಇಚ್ಛೆ ಅವರ ಅಭಿಪ್ರಾಯ, ಅವನು ಅವರ ಸಾಧನೆ ಮೂಲಕ ಇದೆಲ್ಲಕ್ಕೂ ಉತ್ತರಿಸುತ್ತಾನೆ ಎಂದು ಭಾವಿಸುತ್ತೇನೆ ಆ ದಿನಕ್ಕಾಗಿ ಕಾಯುತ್ತೇನೆ. ನಾವಿಬ್ಬರು ಜೊತೆಯಾಗಿ ಇದ್ದ ದಿನಗಳು ಬಹಳ ಖುಷಿಯಾಗಿ ಇದ್ದೆವು ಒಬ್ಬರಿಗೊಬ್ಬರು ಶಕ್ತಿಯಾಗಿದ್ದೆವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆವು ಆದರೆ ಈಗ ಬದುಕು ಮುಂದೆ ಸಾಗಲೇಬೇಕು ಎಂಬಿತ್ಯಾದಿ ವಿಷಯಗಳನ್ನು ಬರೆದುಕೊಂಡು ಇಬ್ಬರು ಬೇರೆ ಆಗಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.