Friday, June 9, 2023
HomeEntertainmentಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ...

ಬಹಳ ಕಷ್ಟ ಪಟ್ಟು ಆ ಸಿನಿಮಾ ಹಕ್ಕು ತಂದಿದೆ ಸುದೀಪ್ ಕೊನೆ ಸಮಯದಲ್ಲಿ ಕೈಕೊಟ್ಟು ನನ್ಗೆ ಮೋಸ ಮಾಡ್ಬಿಟ್ರು ಎಂದು ಮಾಧ್ಯಮದ ಮುಂದೆ ಕಣ್ಣಿರಿಟ್ಟ ನಿರ್ದೇಶಕ ಯೋಗಿ ದ್ವಾರಕೀಶ್

 

ನಾನು ಆ ಸಿನಿಮಾ ರೈಟಿಸ್ ತಂದಿದ್ದೆ ಸುದೀಪ್ ಗಾಗಿ ಆದರೆ ಆತ ಮಾಡಲ್ಲ ಎಂದು ಬಿಟ್ಟ ಇದರಿಂದ ನಾನು ಬೆಂಕಿಗೆ ಬಿದ್ದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂದು ಯೋಗಿ ದ್ವಾರಕೀಶ್. ಕನ್ನಡ ಸಿನಿಮಾ ರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರ ಪುತ್ರ ಯೋಗಿ ದ್ವಾರಕೀಶ್ ಕೂಡ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಬಿ ಗಣಪತಿ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನಕ್ಕೆ ಭಾಗಿಯಾಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ ಏಳು ಬೀಳುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮೊದಲು ನಿಂದಲೂ ಇದ್ದದ್ದನ್ನು ಇದ್ದ ಹಾಗೆ ನೇರನುಡಿಯಿಂದ ಮಾತನಾಡುವ ಯೋಗಿ ಅವರು ಇಂದು ಅವರ ಈ ಪರಿಸ್ಥಿತಿಗೆ ಕಾರಣ ಏನು ಎನ್ನುವುದನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಅವರು ಅವರ ಸೋತ ಸಿನಿಮಾಗಳ ಉದಾಹರಣೆಯೊಂದಿಗೆ ತಮ್ಮ ಈಗಿನ ಪರಿಸ್ಥಿತಿಗೆ ಕಾರಣ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ದ್ವಾರಕೀಶ್ ಅವರು ಮತ್ತು ಯೋಗಿ ದ್ವಾರಕೇಶ್ ಅವರು ಹಲವಾರು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಯೋಗಿ ದ್ವಾರಕೀಶ್ ಅವರಿಗೆ ರಿಮೇಕ್ ಸಿನಿಮಾಗಳನ್ನು ಮಾಡುವುದು ಇಷ್ಟ ಇರಲಿಲ್ಲವಂತೆ. ಆದರೆ ಕೆಲವೊಮ್ಮೆ ಜೊತೆಯಲ್ಲಿದ್ದವರ ಒತ್ತಾಯದ ಮೇರೆಗೆ ಅಥವಾ ಭರವಸೆಯೊಂದಿಗೆ ಆ ಸಾಹಸಕ್ಕೆ ಕೈ ಹಾಕಿದ್ದಾರಂತೆ.

ಅದರಿಂದಲೇ ಅವರು ಎಂದು ಕೈಸುಟ್ಟಕೊಳ್ಳಬೇಕಾಗಿಯಿತು ಎನ್ನುವುದನ್ನು ಅಮ್ಮ ಐ ಲವ್ ಯು ಸಿನಿಮಾ ಉದಾಹರಣೆಯೊಂದಿಗೆ ಹೇಳಿದ್ದಾರೆ. ಅಮ್ಮ ಐ ಲವ್ ಯು ಸಿನಿಮಾವನ್ನು ನೋಡಿದ ನನ್ನ ಸ್ನೇಹಿತರು ಈ ಸಿನಿಮಾವನ್ನು ನೀನು ಕನ್ನಡದಲ್ಲಿ ಮಾಡು ಎಂದು ಸಲಹೆ ಕೊಟ್ಟರು. ಆ ಸಿನಿಮಾ ರಿಲೀಸ್ ಆದ ದಿನವೇ ಕನ್ನಡದಲ್ಲೂ ಆ ಸಿನಿಮಾ ಮಾಡುವ ನಿರ್ಧಾರ ಮಾಡಿ ರೈಟ್ಸ್ ಖರೀದಿಸಿ ಬಿಟ್ಟೆ ಆದರೆ ಆ ಸಿನಿಮಾ ಕಥೆ ನೋಡುವಾಗ ನನ್ನ ತಲೆಯಲ್ಲಿ ಇದ್ದಿದ್ದು ಸುದೀಪ್.

ನಾನು ಸುದೀಪ್ ಅವರ ಬಳಿ ಹೋಗಿ ಈ ಕಥೆ ಹೇಳಿದಾಗ ಸುದೀಪ್ ಅವರು ಅದನ್ನು ಮಾಡುವುದಿಲ್ಲ ಎಂದು ಬಿಟ್ಟರು. ಅದು ಅವರ ಆಯ್ಕೆ ಆದರೆ ಆ ಬಳಿಕ ಚಿರು ಅವರ ಬಳಿ ಹೋದೆ. ಚಿರು ಅವರು ಆ ಪಾತ್ರ ನನ್ನ ಕೆಪ್ಯಾಸಿಟಿಗೆ ಅಲ್ಲ ಎಂದು ಹೇಳಿದರು. ಯಶ್ ಅವರ ಬಳಿ ಕೂಡ ಹೋದಾಗ ನಾನು ಮಾಸ್ಟರ್ ಪೀಸ್ ಆದ ಬಳಿಕ ಇಂತಹ ಸಿನಿಮಾಗಳನ್ನು ಮಾಡುವುದು ಕಷ್ಟ ಆದರೆ ರಕ್ಷಿತ್ ಅವರಿಗೆ ಆ ಕಳೆಯಿದೆ ಎಂದು ಅವರ ಬಳಿ ಕಳುಹಿಸಿದರಂತೆ.

ರಕ್ಷಿತ್ ಅವರು ಯೋಗಿ ಅವರಂತೆ ರಿಮೇಕ್ ಸಿನಿಮಾಗಳನ್ನು ಒಪ್ಪಿಕೊಳ್ಳದ ಕಾರಣ ನಾನಾ ಕಲಾವಿದರ ಬಳಿ ಹೋಗಿ ಕೊನೆಗೆ ಅದು ಚಿರು ಅವರ ಬಳಿಯೇ ಬರುತ್ತದೆ. ಚಿರು ಹಾಗೂ ಯೋಗಿಯವರು ಮಾತಾಡಿಕೊಂಡಿದ್ದರು ಸಿನಿಮಾವನ್ನು ಮಾಡೋಣ ರೈಟ್ ಹಾಳಾಗಬಾರದು ಎಂದು ನಿರ್ಧಾರ ಮಾಡಿದರಂತೆ. ಆದರೆ ಆ ಸಿನಿಮಾ ಕನ್ನಡದಲ್ಲಿ ಅಷ್ಟೊಂದು ಯಶಸ್ಸು ಕಾಣಲಿಲ್ಲ ನಂತರ ಆಯುಷ್ಮಾನ್ಭವ ಸಿನಿಮಾ ವಿಚಾರದಲ್ಲೂ ಇದೇ ರೀತಿ ಆಯಿತು.

ಈ ಬಾರಿ ಶಿವಣ್ಣ ನಾನು ಮತ್ತಿತರರು ಸೇರಿಕೊಂಡು ನಿರ್ಧಾರ ಮಾಡಿದೆವು. ಎಲ್ಲವೂ ಸರಿ ಇತ್ತು ಆದರೆ ಅಷ್ಟರಲ್ಲಿ ಕನ್ನಡದಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಯ್ತು. ಕೆಜಿಎಫ್ ಇಂದ ಕನ್ನಡದ ಟ್ರೆಂಡ್ ಬದಲಾಯಿತು ಈಗ ಜನ ಸ್ಟ್ರೈಟ್ ಸಿನಿಮಾಗಳನ್ನು ಕೇಳುತ್ತಾರೆ. ರಿಮೇಕ್ ಸಿನಿಮಾಗಳು ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಕಮೆಂಟ್ಸ್ ಗಳು ಬಂದು ಅರ್ಧ ಹೋಪ್ ಅಲ್ಲೇ ಕಳೆದುಕೊಳ್ಳುತ್ತಾರೆ.

ಹೀಗಾಗಿ ಈಗ ಕಂಟೆಂಟ್ ಒರಿಯೆಂಟೆಡ್, ಪ್ಯಾನ್ ಇಂಡಿಯಾ ಟ್ರೆಂಡ್ ಇರುವುದರಿಂದ ನನ್ನ ರಿಮೇಕ್ ಸಿನಿಮಾಗಳು ಸೋತು ಫಿನಾನ್ಷಿಯಲಿ ನಾನು ಸೋಲಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಅವರ ಈ ಇಂಟರ್ವ್ಯೂ ಅಲ್ಲಿ ಇನ್ನು ಅನೇಕ ವಿಷಯಗಳ ಕುರಿತು ಓಪನ್ ಆಗಿ ಮಾತನಾಡಿದ್ದಾರೆ ಅವುಗಳನ್ನು ಕೇಳಲು ಈ ವಿಡಿಯೋವನ್ನು ನೋಡಿ.