Home Entertainment 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

0
300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ಲಕ್ಷ್ಮಣ್ ವಿ.ಧಿ.ವ.ಶ ಕಂಬನಿ ಮಿಡಿದ ಚಿತ್ರರಂಗ.

 

ಸ್ಯಾಂಡಲ್ ವುಡ್ ಗೆ ಬಡಿದ ಮತ್ತೊಂದು ಬರಸಿಡಿಲು, ಹೆಸರಾಂತ ಖಳನಾಯಕ ಇನ್ನಿಲ್ಲ ಕಳೆದೆರಡು ವರ್ಷಗಳಿಂದ ಕನ್ನಡ ಚಲನಚಿತ್ರ ರಂಗ ಹಲವಾರು ಯುವ ಪ್ರತಿಭೆಗಳನ್ನು ಹಾಗೂ ಸ್ಟಾರ್ ನಟರನ್ನು ಮತ್ತು ಹಿರಿಯ ಕಲಾವಿದರನ್ನು ಕಳೆದುಕೊಂಡಿದೆ. ಆ ನೋವು ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಬಂದಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯ ಹಿರಿಯ ಹೆಸರಾಂತ ಖಳನಾಯಕ ನಟ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ.

ಸಾಂಗ್ಲಿಯಾನ, ಸೂರ್ಯವಂಶ, ಮಲ್ಲ, ಯಜಮಾನ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿ ಮಿಂಚಿ ಮೆರೆದಿದ್ದ ಲಕ್ಷ್ಮಣ್ ಎನ್ನುವ ಹಿರಿಯ ಕಲಾವಿದರು ಇಂದು ಬೆಳಗಿನ ಜಾವ ನಾಲ್ಕು ಗಂಟೆಯಲ್ಲಿ ಅವರ ಮೂಡಲ ಪಾಳ್ಯದ ಮನೆಯಲ್ಲಿ ಹೃದಯಘಾತದ ಕಾರಣದಿಂದ ಕೊನೆ ಉಸಿರೆಳೆದಿದ್ದಾರೆ. ಇವರ ಸಾ.ವಿ.ಗೆ ಕನ್ನಡ ಚಲನಚಿತ್ರರಂಗದ ಅನೇಕ ಕಲಾವಿದರುಗಳು ಸಂತಾಪ ಸೂಚಿಸಿದ್ದಾರೆ.

ಮೃ.ತ.ರ ಪಾರ್ಥವ ಶರೀರವನ್ನು ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕಾಗಿ ಏರ್ಪಡಿಸಿದ್ದು ನಂತರ ಮುಂದಿನ ಕಾರ್ಯಗಳನ್ನು ಮಾಡಲಾಗುವುದು. ಲಕ್ಷ್ಮಣ್ ಅವರು ಹಲವು ದಶಕಗಳ ಕಾಲ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರದಲ್ಲಿ ನಟಿಸುವ ಮೂಲಕ ಸಕ್ರಿಯರಾಗಿದ್ದರು. ಕನ್ನಡದಲ್ಲಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಚ್ಚು ಬಣ್ಣ ಹಚ್ಚಿದ್ದು ಖಳನಾಯಕನ ಪಾತ್ರದಲ್ಲಿಯೇ ಎನ್ನುವುದು ಬಹಳ ವಿಶೇಷ.

ಪೊಲೀಸ್ ಗೆಟಪ್ ಗಳಿಗೂ ಹೆಚ್ಚು ಒಪ್ಪುತ್ತಿದ್ದ ಇವರು ಆ ಪಾತ್ರಕ್ಕೂ ನ್ಯಾಯ ಧಕ್ಕಿಸಿ ಅಭಿನಯಿಸುತ್ತಿದ್ದರು. ಇವರ ಖಳನಾಯಕ ಪಾತ್ರ ಜನ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರಿತ್ತು ಹಾಗಾಗಿ ಸಾರ್ವಜನಿಕವಾಗಿ ಇವರನ್ನು ಕಂಡಾಗ ಜನರು ಇವರನ್ನು ಕಂಡು ಹೆದರುತ್ತಿದ್ದರಂತೆ, ಈ ರೀತಿ ಅನೇಕ ಉದಾಹರಣೆಗಳನ್ನು ಅವರು ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆರ್ಮಿ ಆಫೀಸರ್ ಮಗನಾಗಿ ಹುಟ್ಟಿದ ಇವರು ನಡೆಸಿದ್ದು ಮಾತ್ರ ಬಲು ಕಷ್ಟದ ಜೀವನ.

ಎಸ್ ಎಸ್ ಎಲ್ ಸಿ ವರೆಗೆ ಮಾತ್ರ ವಿದ್ಯಾಭ್ಯಾಸ ನಡೆಸಿ ನಂತರ ಕಾರ್ಖಾನೆ ಒಂದರಲ್ಲಿ ಕಡಿಮೆ ಸಂಬಳಕ್ಕೆ ಕೂಲಿಗೆ ಸೇರಿದ್ದ ಇವರನ್ನು ಬಣ್ಣದ ಪ್ರಪಂಚ ಆಕರ್ಷಿಸಿತ್ತು. ನಂತರ ಇವರೇ ಒಂದು ಇತಿಹಾಸವನ್ನು ಸೃಷ್ಟಿಸಿ ಬಿಟ್ಟರು. ಶಂಕರ್ ನಾಗ್, ಅಂಬರೀಶ್ ಕಾಲದಿಂದಲೂ ಕೂಡ ಬಣ್ಣ ಹಚ್ಚಿ ನಟಿಸಿ ವಿಷ್ಣುವರ್ಧನ್, ರವಿಚಂದ್ರನ್, ರಾಜಕುಮಾರ್, ರಜನಿಕಾಂತ್, ಉಪೇಂದ್ರ, ದರ್ಶನ್ ಮುಂತಾದ ಅನೇಕ ಸೂಪರ್ ಸ್ಟಾರ್ಗಳಿಗೆ ಅವರ ಸಮನಾಗಿ ಖಳನಾಯಕ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದ ಆಸ್ತಿ ಆಗಿದ್ದರು.

ಕನ್ನಡ ಸಿನಿಮಾಗಳ ಹೆಸರು ಉಳಿಸುವ ಸಲುವಾಗಿ ತಮ್ಮ ಕೈಲಾದ ಸೇವೆ ಮಾಡಿದ್ದರು. ಈಗ ಒಂದೆರಡು ಸಿನಿಮಾಗಳಾ ಒಂದೆರಡು ಸೀನ್ ಗಳಲ್ಲಿ ಕಾಣಿಸಿಕೊಂಡರೂ ಕೂಡ ಹೆಚ್ಚು ಪ್ರಭಾವ ಬೀರುವ ಮಂದಿಯ ಮುಂದೆ ಎಲೆ ಮರೆಕಾಯಿಯಂತೆ ಸರಳವಾಗಿ ಇದ್ದು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು. 74 ವರ್ಷ ವಯಸ್ಸಾಗಿದ್ದ ಲಕ್ಷ್ಮಣ್ ಅವರು ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನೆನ್ನೆ ಅಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಇಸಿಜಿ ಎಲ್ಲಾ ಮಾಡಿಸಿ ಮತ್ತೆ ಮನೆಗೆ ಕರೆತರಲಾಗಿತ್ತು. ಆದರೆ ಇಂದು ಮುಂಜಾನೆ ಅವರ ಸಾ.ವಿ.ನ ಸುದ್ದಿ ಎಲ್ಲರಿಗೂ ಬರ ಸಿಡಿಲಿನಂತೆ ಅಪ್ಪಳಿಸಿದೆ. ಕನ್ನಡ ಚಲನಚಿತ್ರ ರಂಗಕ್ಕೂ ಸಹ ಇದು ತುಂಬಲಾಗದ ನಷ್ಟವಾಗಿದೆ. ಇವರ ಆತ್ಮ ಚಿರಶಾಂತಿ ಕಾಯ್ದುಕೊಳ್ಳಲಿ, ಇವರಿಗೆ ಸದ್ಗತಿ ದೊರೆಯಲಿ. ಕುಟುಂಬಸ್ಥರು ಹಾಗೂ ಆತ್ಮೀಯರಿಗೆ ಇವರ ಸಾವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಕೇಳಿಕೊಳ್ಳೋಣ.

 

LEAVE A REPLY

Please enter your comment!
Please enter your name here