Home Cinema Updates ನನ್ಗೇನ್ ನಾಯಿ ಕಚ್ಚಿದ್ಯಾ.? ಕ್ರಾಂತಿ ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಸಿಡಿದೆದ್ದ ಡಿ-ಬಾಸ್. ಅಷ್ಟಕ್ಕೂ ದರ್ಶನ್ ಈ ಪರಿ ಕೋಪ ಮಾಡಿಕೊಳ್ಳಲು ಕಾರಣವೇನು ಗೊತ್ತ.?

ನನ್ಗೇನ್ ನಾಯಿ ಕಚ್ಚಿದ್ಯಾ.? ಕ್ರಾಂತಿ ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಸಿಡಿದೆದ್ದ ಡಿ-ಬಾಸ್. ಅಷ್ಟಕ್ಕೂ ದರ್ಶನ್ ಈ ಪರಿ ಕೋಪ ಮಾಡಿಕೊಳ್ಳಲು ಕಾರಣವೇನು ಗೊತ್ತ.?

0
ನನ್ಗೇನ್ ನಾಯಿ ಕಚ್ಚಿದ್ಯಾ.? ಕ್ರಾಂತಿ ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಸಿಡಿದೆದ್ದ ಡಿ-ಬಾಸ್. ಅಷ್ಟಕ್ಕೂ ದರ್ಶನ್ ಈ ಪರಿ ಕೋಪ ಮಾಡಿಕೊಳ್ಳಲು ಕಾರಣವೇನು ಗೊತ್ತ.?

ಬರೋಬ್ಬರಿ 22 ತಿಂಗಳ ನಂತರ ದರ್ಶನ್ (Darshan) ಅವರ ಸಿನಿಮಾ ತೆರೆ ಮೇಲೆ ಬಂದಿತ್ತು. ಸಿನಿಮಾ ಶುರುವಾದ ದಿನದಿಂದಲೂ ಕೂಡ ಸಾಕಷ್ಟು ವಿ’ವಾ’ದ, ಸಂ’ಘ’ರ್ಷ, ಅಡೆತಡೆಗಳನ್ನು ಎದುರಿಸಿತ್ತು. ಕೊನೆಗೂ ಅಂದುಕೊಂಡಂತೆ ಜನವರಿ 26ರಂದು ಸಿನಿಮಾ ರಿಲೀಸ್ ಆಯ್ತು. ದರ್ಶನ್ ಅಭಿಮಾನಿಗಳ ಪಾಲಿಗಂತೂ ತಡೆಯಲಾರದಷ್ಟು ಸಂಭ್ರಮ. ಜೊತೆಗೆ ಕನ್ನಡ ಶಾಲೆ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಸಂದೇಶ ಹೊತ್ತು ತಂದ ಸಿನಿಮಾ ಆದಕಾರಣ ಸಾಮಾಜಿಕ ಕಳಕಳಿ ಇರುವ ಚಿತ್ರ ಎಂದೇ ಕ್ರಾಂತಿ (Kranti) ಬಿಂಬಿತವಾಗಿತ್ತು.

ಚಿತ್ರ ರಿಲೀಸ್ ಆಗುವ ಎರಡು ತಿಂಗಳ ಹಿಂದಿನಿಂದಲೇ ಚಿತ್ರತಂಡ ಕೊಟ್ಟ ಸಂದರ್ಶನಗಳು ಮತ್ತು ಮಾಡಿದ ಪ್ರಚಾರ ವರ್ಕ್ ಆದ ಕಾರಣ ಹೆಚ್ಚಿನ ಜನರಿಗೆ ಸಿನಿಮಾ ಕುರಿತು ಕುತೂಹಲವು ಹೆಚ್ಚಾಗಿತ್ತು, ವಿಷಯವು ತಲುಪಿತ್ತು. ಒಂದರ್ಥದಲ್ಲಿ ಸಿನಿಮಾ ಗೆದ್ದಿತ್ತು ಎಂದು ಹೇಳಬಹುದು. ಇನ್ನು ಗಳಿಕೆ (Collection) ವಿಚಾರದಲ್ಲಿ ಹೇಳುವುದಾದರೆ ಸಿನಿಮಾ ಈಗಾಗಲೇ 109 ಕೋಟಿ ಗಳಿಸಿದೆ ಎನ್ನುವ ಲೆಕ್ಕಾಚಾರವನ್ನು ಚಿತ್ರ ತಂಡ ಕೊಟ್ಟು ಅದರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಮಾಡುತ್ತಿದೆ.

ದರ್ಶನ್ ಅವರು ಮೊದಲಿನಿಂದಲೂ ತಮ್ಮ ಸಿನಿಮಾ ಗೆದ್ದಾಗ ಈ ರೀತಿ ಒಂದು ಸೆಲೆಬ್ರೇಶನ್ ಮಾಡುತ್ತಾರೆ. ಅಂತಿಯೇ ಈ ಸಿನಿಮಾಗೂ ಕೂಡ ಎಲ್ಲಾ ಸೆಲೆಬ್ರಿಟಿಗಳನ್ನು ಕಳಿಸಿ ಸಂತೋಷ ಕೂಟ ನಡೆಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಬರುತ್ತಿದೆ. ಸ್ವತಃ ಚಿತ್ರ ತಂಡ ಸ್ಪಷ್ಟನೆ ಕೊಟ್ಟರು ಒಪ್ಪದ ಮಂದಿ ನೆಗೆಟಿವ್ ಕಾಮೆಂಟ್ ಮಾಡಿ ಇದೆಲ್ಲ ಸುಳ್ಳು ಎನ್ನುತ್ತಿದ್ದಾರೆ. ಈಗ ಈ ಸಂಭ್ರಮದಲ್ಲಿ ದರ್ಶನ್ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದು ಈ ರೀತಿ ಕಲೆಕ್ಷನ್ವಿಚಾರದಲ್ಲಿ ಜನರು ಹೇಳುತ್ತಿರುವ ನೆಗೆಟಿವ್ ಕಾಮೆಂಟ್ಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಒಂದು ಸಿನಿಮಾ ಗೆಲ್ಲುತ್ತದಾ ಅಥವಾ ಸೋಲುತ್ತದಾ ಎನ್ನುವುದು ಮೊದಲ ದಿನದ ಶೋ ಅಲ್ಲೇ ಗೊತ್ತಾಗಿ ಬಿಡುತ್ತದೆ. ಕುದುರೆ ಗೆಲ್ಲುತ್ತದಾ ಇಲ್ಲ ಬಿದ್ದು ಹೋಗುತ್ತದಾ ಎನ್ನುವುದು ಆಗಲೇ ಡಿಸೈಡ್ ಆಗುತ್ತದೆ. ಏನೋ ಸ್ವಲ್ಪ ಕುಂಟುತ್ತಾ ಇದ್ದರೆ ಸರಿ ಮಾಡಬಹುದು ಎನ್ನುವ ವಿಶ್ವಾಸ ಇರುತ್ತದೆ. ಆದರೆ ಅದು ಸತ್ತು ಹೋದರೆ ಸಮಯ ವ್ಯರ್ಥ ಅಲ್ಲವಾ? ನನ್ನ ಸಿನಿಮಾದ ಉದಾಹರಣೆ ಹೇಳುವುದಾದರೆ ನನ್ನ 25ನೇ ಸಿನಿಮಾ ಆಗಿದ್ದ ಭೂಪತಿ ಸಿನಿಮಾ ಮ್ಯಾಟನಿ ಶೋ ಅಲ್ಲೇ ಬಿದ್ದು ಹೋಯಿತು. ಅಂದು ನಾನು ಯಾವ ಸೆಲೆಬ್ರೇಶನ್ ಕೂಡ ಮಾಡಲಿಲ್ವಲ್ಲ ಮತ್ತು ನಾನು ಅಂದು ಏನನ್ನು ಸಹ ಹೇಳಲಿಲ್ಲವಲ್ಲ ಆದರೆ ಸಿನಿಮಾ ಗೆದ್ದಾಗ ಅದನ್ನು ಸೆಲೆಬ್ರೇಟ್ ಮಾಡಲೇಬೇಕು.

ಈಗ ಇವರು ಇಷ್ಟೆಲ್ಲ ಅರೇಂಜ್ ಮಾಡಿದಾಗ ಒಂದು ಪಕ್ಷ ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ ಅಥವಾ ಸೋತಿದೆ ಎಂದಿದ್ದರೆ ನಾನೇ ಹೇಳುತ್ತಿದ್ದೇನೆ. ಈ ರೂಮ್ ರೆಂಟ್ ಇಷ್ಟೆಲ್ಲ ಆರ್ಟಿಸ್ಟ್ ಗಳನ್ನು ಕರೆಸುವ ಖರ್ಚು ಇದೆಲ್ಲಾ ಒಬ್ಬರಿಗೆ ಹೊರೆ ಮಾಡಲು ನನಗೆ ಇಷ್ಟ ಇಲ್ಲ. ಮೊದಲಿಗೆ ನಾನೇ ಇಲ್ಲಿ ಬರುತ್ತಿಲ್ಲ. ಇಲ್ಲಿ ಬಂದು ಈ ರೀತಿ ಮಾತನಾಡುವುದಕ್ಕೆ ನನಗೇನು ಹುಚ್ಚು ನಾಯಿ ಕಚ್ಚಿದೆಯಾ ಆದರೆ ಸಿನಿಮಾ ನೋಡಿ ಒಂದಷ್ಟು ಜನ ಒಳ್ಳೆ ಮಾತುಗಳನ್ನ ಆಡುತ್ತಿದ್ದಾರೆ.

ಎಷ್ಟೋ ವರ್ಷಗಳಿಂದ ಸಿನಿಮಾ ನೋಡದ ಫ್ಯಾಮಿಲಿಗಳು ಬಂದು ಒಳ್ಳೆ ವಿವ್ಯೂ ಕೊಡುತ್ತಿದ್ದಾರೆ. ಅವರಿಗೆಲ್ಲಾ ಗೌರವ ಕೊಡಲೇಬೇಕು ಅಂತವರಿಗೆಲ್ಲ ಧನ್ಯವಾದ ಹೇಳುತ್ತೇನೆ. ವಿವ್ಯೂ ನಾವೇನು ಮನೆಯಲ್ಲಿ ಕೂತ್ಕೊಂಡು ಬರೆದಿಲ್ಲಾ ಅಲ್ವಾ ಎಂದು ನೆಗೆಟಿವ್ ವಿಮರ್ಶೆ ಕೊಡುವವರಿಗೆ ದರ್ಶನ್ ಖಡಕ್ ಮಾತುಗಳಿಂದ ಟಾಂಗ್ ನೀಡಿದ್ದಾರೆ. ಕೆಲವು ನಿಟ್ಟಿಗರು ಕ್ರಾಂತಿ ಸಿನಿಮಾ 109 ಕೋಟಿ ಕಲೆಕ್ಷನ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.

ಈ ಮಾತಿನಿಂದ ಮನನೊಂದಂತಹ ದರ್ಶನ್ ಅವರು ಖಡಕ್ಕಾಗಿ ನಮಗೇನು ನಾಯಿ ಕಚ್ಚಿದೆಯಾ ಈ ರೀತಿ ಬಂದು ಸಕ್ಸಸ್ ಪಾರ್ಟಿ ಮಾಡುವುದಕ್ಕೆ ಎಂದು ಹೇಳಿದ್ದಾರೆ. ಅದೇನೆ ಆಗಲಿ ಸದ್ಯಕ್ಕಂತೂ ಯಾವುದೇ ಮೀಡಿಯಾ ಸಪ್ಪೋರ್ಟ್ ಇಲ್ಲದೆ ಏಕಾಂಗಿಯಾಗಿ ಹೋರಾಟ ಮಾಡಿ ದರ್ಶನ್ ಕ್ರಾಂತಿ ಸಿನಿಮಾವನ್ನು ಗೆಲ್ಲಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

LEAVE A REPLY

Please enter your comment!
Please enter your name here