ಕ್ರಾಂತಿಲಿ ಅಪ್ಪು ಪೋಟೋ ಹಾಕಿ ಟ್ರಿಬ್ಯೂಟ್ ಕೊಡ್ದೆ ಇದ್ರೆ ಏನಂತೆ. ಅಪ್ಪು ಹುಟ್ದಬ್ಬಕ್ಕೆ ಕಬ್ಜಾ ಸಿನಿಮಾನೇ ರಿಲೀಸ್ ಮಾಡ್ತರಂತೆ ಕಿಚ್ಚ&ಉಪ್ಪಿ.

 

ಕಳೆದ ಒಂದುವರೆ ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ಒಂದು ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿದೆ. ಅದೇನೆಂದರೆ ಸಿನಿಮಾ ಕುರಿತಾದ ಯಾವುದೇ ಕಾರ್ಯಕ್ರಮ ಆದರೂ ಕೂಡ ಮೊದಲು ಅಲ್ಲಿ ಪುನೀತ್ ರಾಜಕುಮಾರ್ (Puneeth Raj kumar) ಅವರ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಾರ್ಯಕ್ರಮ ಶುರು ಮಾಡುವುದು ಮತ್ತು ಯಾವುದೇ ಸಿನಿಮಾ ರಿಲೀಸ್ ಆದರೂ ಕೂಡ ಮೊದಲಿಗೆ ಅಲ್ಲಿ ಅಪ್ಪು ಫೋಟೋ ಹಾಕಿ ಅವರಿಗೆ ಟ್ರಿಬ್ಯೂಟ್ (tribute) ಸಲ್ಲಿಸುವುದು.

ಸಣ್ಣ ಸಿನಿಮಾ ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಸ್ಟಾರ್ ಸಿನಿಮಾ ಅಥವಾ ಹೊಸಬರ ಸಿನಿಮಾ ಇತ್ಯಾದಿ ಯಾವುದೇ ವ್ಯತ್ಯಾಸ ಇಲ್ಲದೆ ಎಲ್ಲಾ ಸಿನಿಮಾ ಆರಂಭದಲ್ಲಿ ಹಾಗೂ ಎಲ್ಲಾ ಸಿನಿಮಾ ಕಾರ್ಯಕ್ರಮಗಳಲ್ಲೂ ಇದೇ ರೀತಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಕ್ರಾಂತಿ (Kranthi) ಸಿನಿಮಾದಲ್ಲಿ ಅಪ್ಪು ಫೋಟೋ ಹಾಕಿಲ್ಲ ಹಾಗಾಗಿ ಮೊದಲೇ ದಚ್ಚು-ಅಪ್ಪು ಫ್ಯಾನ್ ನಡೆಯುತ್ತಿದ್ದ ಫ್ಥಾನ್ಸ್ ವಾ’ರ್ ಗೆ ಇದು ಇನ್ನಷ್ಟು ತುಪ್ಪ ಸುರಿದ ರೀತಿ ಆಯಿತು.

ಸಿನಿಮಾ ರಿಲೀಸ್ ಆಗಿ ಮೊದಲ ಶೋ ಲೇ ಇದು ತಿಳಿದು, ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗಿ ಈ ಕಾಂಟ್ರವರ್ಸಿ ಇಬ್ಬರ ಅಭಿಮಾನಿಗಳ ನಡುವಿನ ಕೆಸರೆರಚಾಟವನ್ನು ಜಾಸ್ತಿ ಮಾಡಿತು. ಅಪ್ಪು ಅಭಿಮಾನಿಗಳು ನಮ್ಮ ಬಾಸ್ ಗೆ ನಮನ ಸಲ್ಲಿಸಿಲ್ಲ ಹಾಗಾಗಿ ನಾವು ಸಿನಿಮಾ ನೋಡುವುದೇ ಇಲ್ಲ ಎನ್ನುವ ಮಟ್ಟಕ್ಕೂ ಕೂಡ ಹೋಗಿದ್ದರು, ಇದೊಂದು ದೊಡ್ಡ ಸುದ್ದಿ ಆಗಿತ್ತು. ಆದರೆ ಈಗ ಅಪ್ಪು ಅಭಿಮಾನಿಗಳಿಗೆ ಸಂಸದ ಸುದ್ದಿಗೆ ಹಾಗೂ ಸಮಾಧಾನದ ಸುದ್ದಿ ಸಿಗುತ್ತಿದೆ. ಅದೇನೆಂದರೆ ಒಂದು ಸಿನಿಮಾದಲ್ಲಿ ಅಪ್ಪು ಫೋಟೋ ಹಾಕಿ ಟ್ರಿಬ್ಯೂಟ್ ಸಲ್ಲಿಸದಿದ್ದರೆ ಏನಾಯಿತು ಒಂದು ಸಿನಿಮಾವನ್ನೇ ಅಪ್ಪುಗಾಗಿ ಅರ್ಪಣೆ ಮಾಡಲಾಗುತ್ತಿದೆ.

ಅದು ಯಾವುದೆಂದರೆ ರಿಯಲ್ ಸ್ಟಾರ್ ಉಪೇಂದ್ರ (Real star Upendra) ಹಾಗೂ ಕಿಚ್ಚ ಸುದೀಪ್ (Kichcha Sudeep) ಅವರ ಅಭಿನಯದ ಕಬ್ಜಾ (Kabza) ಸಿನಿಮಾ. ಕಬ್ಜಾ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು ಆದರೆ ನಿರ್ದೇಶಕರಾದ ಆರ್ ಚಂದ್ರು (director R.Chandru) ಅವರು ಇದನ್ನು ಅಪ್ಪು ಅವರಿಗೆ ಅರ್ಪಣೆ ಮಾಡುವ ಕಾರಣ ಅಪ್ಪು ಹುಟ್ಟು ಹಬ್ಬದ ದಿನಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದ ಕೆಲ ಅಂಶಗಳನ್ನು ಅಪ್ಪು ಅವರಿಗೆ ಹೇಳಲಾಗಿತ್ತಂತೆ ಆಗ ಎಲ್ಲರಿಗಿಂತ ಅಪ್ಪು ಅವರೇ ಸಿನಿಮಾಗಾಗಿ ಬಹಳ ಸಪೋರ್ಟ್ ಮಾಡಿ ಮಾತನಾಡಿದರಂತೆ ಹಾಗೂ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದರಂತೆ.

ಹಾಗೇ ಅಂತಹ ಪುಣ್ಯಾತ್ಮನ ಹುಟ್ಟು ಹಬ್ಬ ದಿನ ಸಿನಿಮಾ ರಿಲೀಸ್ ಮಾಡಬೇಕು ಹಾಗಾಗಿ ಕಾಯುತಿದ್ದೇನೆ ಅಂದೇ ರಿಲೀಸ್ ಮಾಡುತ್ತೇನೆ ಎಂದು ಆರ್ ಚಂದ್ರು ಅವರು ಇತ್ತೀಚಿಗೆ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ್ದಾರೆ. ಅಪ್ಪು ಅಭಿಮಾನಿಗಳು ಆ ದಿನದ ಅಪ್ಪು ಜಾತ್ರೆ ಜೊತೆ ಸಿನಿಮಾ ನೋಡುವ ನಿರ್ಧಾರ ಮಾಡಿದ್ದಾರೆ. ಕ್ರಾಂತಿ ಸಿನಿಮಾ ನಂತರ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಕಬ್ಜಾ. ಸಿನಿಮಾಗಾಗಿ ಹಲವು ವರ್ಷಗಳಿಂದ ತೆರೆ ಹಿಂದೆ ತಯಾರಿ ನಡೆಯುತ್ತಿದೆ. ಅಂತಿಮವಾಗಿ ಈ ವರ್ಷ ಪ್ರೇಕ್ಷಕ ಪ್ರಭುಗಳಿಗೆ ತೆರೆ ಮೇಲೆ ಪ್ರದರ್ಶನ ಸಿಗಲಿದೆ.

ಈಗಾಗಲೇ ಮುಕುಂದ ಮುರಾರಿ ಸಿನಿಮಾದಲ್ಲಿ ಕಮಾಲ್ ಮಾಡಿರುವ ಉಪ್ಪಿ-ಕಿಚ್ಚ ಜೋಡಿ ಮತ್ತೊಮ್ಮೆ ಕಬ್ಜಾ ಸಿನಿಮಾದಿಂದ ಒಂದಾಗುತ್ತಿದ್ದಾರೆ. ಸಿನಿಮಾ ಕಥೆ ಡಿಫ್ರೆಂಟ್ ಆಗಿದೆ ಎನ್ನುವ ಕಾರಣ, ಈಗಾಗಲೇ ರಿಲೀಸ್ ಮಾಡಿರುವ ಪೋಸ್ಟರ್ಗಳಲ್ಲಿ ಹುಟ್ಟು ಹಾಕಿರುವ ಕುತೂಹಲದ ಕಾರಣದಿಂದಾಗಿ ಎಲ್ಲರೂ ಮಾರ್ಚ್ 17 ಯಾವಾಗ ಬರುತ್ತದೆ ಎಂದು ಕ್ಷಣಗಣನೆ ಮಾಡುತ್ತಿದ್ದಾರೆ. ಕಬ್ಜಾ ತಂಡಕ್ಕೆ ಶುಭವಾಗಲಿ ಎಂದು ಹರಸೋಣ. ಉಪ್ಪಿ ಅವರು ತೆಗೆದುಕೊಂಡು ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Leave a Comment

WhatsApp Group Join Now
Telegram Group Join Now