ಕಿರುತೆರೆ ನಟಿ ದೀಪಿಕಾ ದಾಸ್ ಅವರು ಯಾವುದೇ ಸ್ಟಾರ್ ಹೀರೋಯಿನ್ ಗೂ ಕಡಿಮೆ ಇರದಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಈಕೆ ಸ್ಟಾರ್ ಹೀರೋಯಿನ್ ರೀತಿಯ ಆಟಿಟ್ಯೂಡ್ ಹೊಂದಿದ್ದಾರೆ ಎಂದೇ ಹೇಳಬಹುದು. ಅದೇನೋ ಗೊತ್ತಿಲ್ಲ ಜನರಿಗೆ ದೀಪಿಕಾ ದಾಸ್ ಎಂದರೆ ಒಂದು ರೀತಿಯ ವಿಶೇಷ ಆಕರ್ಷಣೆ. ಇದಕ್ಕೆ ಆಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಷ್ಟು ದಿನಗಳು ಕಾರಣ ಆಗಿರಬಹುದು.
ಬಿಗ್ ಬಾಸ್ ಮನೆಯಲ್ಲಿ ನೇರನುಡಿ, ಖಡಕ್ ಆದ ವ್ಯಕ್ತಿತ್ವ ಮತ್ತು ಪ್ರಬುದ್ಧತೆಯ ಮಾತುಗಳಿಂದ ಆಕೆ ಒಬ್ಬ ಲೇಡೀಸ್ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ ಎನಿಸುವ ರೀತಿ ಜನರ ಮನಸಲ್ಲಿ ಬಿಂಬಿತವಾಗಿದ್ದಾರೆ. ಜೊತೆಗೆ ಅದಕ್ಕೂ ಮುಂಚೆ ಆಕೆ ಅಭಿನಯಿಸಿದ್ದ ನಾಗಿಣಿ ಧಾರಾವಾಹಿಯು ಕೂಡ ಇವರಿಗೆ ಈ ರೀತಿಯ ಒಂದು ಚಾರ್ಮ್ ಬರಲು ಕಾರಣವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ದೀಪಿಕಾ ದಾಸ್ ಅವರು ತಮ್ಮ ದಿನನಿತ್ಯದ ಚಟುವಟಿಕೆಗಳು ಮತ್ತು ವಿಶೇಷ ವಿಷಯಗಳು ಹಾಗೂ ಹೊಸ ಹೊಸ ಫೋಟೋ ಶೂಟ್ಗಳನ್ನು ಇನ್ನು ಮುಂತಾದ ವಿಚಾರಗಳನ್ನು ಇದರಲ್ಲಿ ಹಂಚಿಕೊಡುತ್ತಾರೆ. ಸದ್ಯಕ್ಕೆ ಇನ್ಸ್ಟಾಗ್ರಾಮ್ ಅಲ್ಲಿ ಒಂದು ದುಃಖದ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಅವರ ಮನೆಯ ಬೆಕ್ಕು ಶಾಡೋ ಕಾಣೆ ಆಗಿದೆಯಂತೆ. ದೀಪಿಕಾ ದಾಸ್ ಅವರು ಪೆಟ್ ಪ್ರಿಯೆ.
ಈಗಾಗಲೇ ಹಲವು ಸಂದರ್ಶನಗಳಲ್ಲಿ ಮತ್ತು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಾಗಲ್ಲ ಅವರು ಈ ರೀತಿ ತಮ್ಮ ಮುದ್ದು ಪೆಟ್ಗಳ ಬಗ್ಗೆ ಮಾತನಾಡಿದ್ದಾರೆ. ಅವರ ಮನೆಯಲ್ಲಿ ಚಿಕ್ಕ ವಯಸ್ಸಿನಿಂದಲೂ ಕೂಡ ನಾಯಿಗಳನ್ನು ಮತ್ತು ಬೆಕ್ಕುಗಳನ್ನು ಸಾಕುತ್ತಿದ್ದ ಕಾರಣ ಈಗಲೂ ಅವರಿಗೆ ಅದು ಅಭ್ಯಾಸ ಆಗಿಬಿಟ್ಟಿದೆ. ಅವರು ಎಂದು ಅದನ್ನು ಪ್ರಾಣಿಗಳು ಎನ್ನುವ ರೀತಿ ಟ್ರೀಟ್ ಮಾಡೇ ಇಲ್ಲ ಎನ್ನುವುದನ್ನು ಸಹ ಅವರು ಹೇಳಿಕೊಂಡಿದ್ದಾರೆ.
ಈ ರೀತಿ ಪೆಟ್ ಗಳ ಬಗ್ಗೆ ಇಷ್ಟು ವಿಶೇಷ ಪ್ರೀತಿ ಮತ್ತು ಆಸಕ್ತಿ ಇಟ್ಟುಕೊಂಡಿರುವ ದೀಪಿಕಾ ದಾಸ್ ಅವರಿಗೆ ಈಗ ಅವರ ಮನೆಯ ಬೆಕ್ಕು ಕಾಣೆ ಆಗಿರುವುದು ತುಂಬಾ ನೋವುಂಟು ಮಾಡಿದೆ. ಕಪ್ಪು ಬಣ್ಣದ ಶಾಡೋ ಎನ್ನುವ ಈ ಬೆಕ್ಕಿನ ಫೋಟೋವನ್ನು ಹಾಕಿ ಫೆಬ್ರವರಿ 18 ರಿಂದ ನಮ್ಮ ಬೆಕ್ಕು ಕಾಣೆ ಆಗಿದೆ, ವಿಶ್ವೇಶ್ವರಯ್ಯ ಲೇಔಟ್ ಮೂರನೇ ಬ್ಲಾಕ್ ಉಲ್ಲಾಳ ಇಲ್ಲಿಂದ ಕಾಣೆ ಆಗಿದೆ. ಯಾರಿಗೆ ಆದರೂ ನಮ್ಮ ಬೆಕ್ಕು ಸಿಕ್ಕಲ್ಲಿ ದಯವಿಟ್ಟು ನಮಗೆ ತಲುಪಿಸಿ ನಿಮಗೆ 10000 ರಿಂದ 15000 ವರೆಗೆ ಬಹುಮಾನ ಕೂಡ ಕೊಡುತ್ತೇನೆ ಎಂದು ಬೆಕ್ಕು ಕಾಣೆಯಾದ ಬಗ್ಗೆ ಪ್ರಕಟಣೆ ಹಾಕಿದ್ದಾರೆ.
ಇದೇ ರೀತಿ ಕಳೆದ ತಿಂಗಳು ನಟಿ ಸುಧಾರಾಣಿ ಅವರು ಸಹ ತಮ್ಮ ಪ್ರೀತಿಯ ಶ್ವಾನ ಗಂಗಮ್ಮ ಕಳೆದು ಹೋಗಿರುವ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಮತ್ತೆ ಅದನ್ನು ಮನೆಗೆ ಹುಡುಕಿ ತರುವುದಕ್ಕೆ ಅನುಕೂಲ ಆಗಿತ್ತು. ಈಗಲೂ ಸಹ ಅದೇ ರೀತಿ ಅನುಕೂಲವಾಗಿ ದೀಪಿಕ ದಾಸ್ ಅವರಿಗೆ ಬಹಳ ಬೇಗ ಬೆಕ್ಕು ಸಿಗುವಂತಾಗಲಿ ಎಂದು ನಾವು ಹರಸೋಣ.