Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?

Posted on February 26, 2023 By Kannada Trend News No Comments on ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?

 

ಇಂಗ್ಲೀಷಿನಲ್ಲಿ ಪ್ರಸಿದ್ಧವಾದ ಒಂದು ಮಾತಿದೆ ಅದೇನೆಂದರೆ, ಇಫ್ ಯು ಕ್ಯಾರಿ ಯುವರ್ ಓವ್ನ್ ವಾಟರ್, ಯು ನೋ ದ ವ್ಯಾಲ್ಯೂ ಆಫ್ ಎವ್ರಿ ಡ್ರಾಪ್ಸ್ ಎಂದು ಕನ್ನಡದಲ್ಲಿ ಇದರ ಅರ್ಥವನ್ನು ಬೇರೆಯವರ ದುಡ್ಡಿನಲ್ಲಿ ಮಜಾ ಮಾಡುವುದು, ಅದನ್ನು ಸುಲಭವಾಗಿ ಬಿಟ್ಟುಕೊಡುವುದು ಬಹಳ ಈಝಿ ಆದರೆ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಪ್ರತಿಯೊಂದು ವಸ್ತುವಿನ ಬೆಲೆ ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಪರಿಶ್ರಮ ಹಾಕಿ ಪಡೆದ ವಸ್ತುವನ್ನು ಸಾಮಾನ್ಯವಾಗಿ ಯಾರು ಬಿಟ್ಟು ಕೊಡುವುದಿಲ್ಲ ಎಂದು.

ಇಂತಹ ಮನಸ್ಥಿತಿಯಿಂದ ಹೊರಬಂದು ತಾವು ಗಳಿಸಿದ್ದನ್ನು ತಮ್ಮ ಕೈಯಾರೆ ಸ್ವಚ್ಛ ಮನಸ್ಸಿಂದ ಮತ್ತೊಬ್ಬರಿಗೆ ಕೊಡುತ್ತಾರೆ ಎಂದರೆ ಅವರನ್ನು ಮಾನವ ಶ್ರೇಷ್ಠರು ಎನ್ನಬಹುದು. ಆ ಸಾಲಿಗೆ ತಮ್ಮ 175 ಎಕರೆ ಜಮೀನು ದಾನ ಮಾಡಿ ಕನ್ನಡದ ನಟ ಸುಮನ್ ಸೇರಿದ್ದಾರೆ. ಮಂಗಳೂರು ಮೂಲದವರಾದ ಸುಮನ್ ಅವರು ತಂದೆ ತಾಯಿ ಚೆನ್ನೈ ಅಲ್ಲಿದ್ದ ಕಾರಣ ಅವರು ಅಲ್ಲೇ ಬೆಳೆಯಬೇಕಾಗುತ್ತದೆ. ಆದರೆ ಆಗಾಗ ಮಂಗಳೂರಿನ ಅಜ್ಜಿ ಮನೆಗೆ ಬರುತ್ತಿದ್ದರಿಂದ ತುಂಬಾ ಸ್ಪಷ್ಟವಾಗಿ ತುಳು ಹಾಗೂ ಕನ್ನಡವನ್ನು ಮಾತನಾಡುತ್ತಾರೆ.

ಈಗ ಕನ್ನಡ,ತೆಲುಗು, ತಮಿಳು ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಇವರು 90ನೇ ದಶಕದಲ್ಲಿ ಹೆಸರಾಂತ ನಾಯಕನಟ ಆಗಿದ್ದರು. ಅವರ ಯಶಸ್ಸು ಯಾವ ಮಟ್ಟಕ್ಕೆ ಇತ್ತು ಎಂದರೆ ನಿರ್ಮಾಪಕರು, ನಿರ್ದೇಶಕರು ಅವರ ಮನೆ ಮುಂದೆ ಸಾಲು ನೀಡುತ್ತಿದ್ದರು. ಸಂಭಾವನೆ ಹಾಗೂ ಅವಕಾಶಗಳ ವಿಷಯದಲ್ಲೂ ರಜನಿಕಾಂತ್ ಮತ್ತು ಚಿರಂಜೀವಿ ಅವರನ್ನು ಮೀರಿಸುವಷ್ಟು ಎತ್ತರಕ್ಕೆ ಬೆಳೆದಿದ್ದರು. ಚಿರಂಜೀವಿ ಅವರಿಗೆ ಒಂದು ಲಕ್ಷ ಸಂಭವನೆ ಇದ್ದರೆ ಸುಮನ್ ಅವರಿಗೆ ಐದು ಲಕ್ಷ ಸಂಭಾವನೆ ಕೊಟ್ಟು ತಮ್ಮ ಸಿನಿಮಾಗಳಿಗೆ ಹಾಕಿಕೊಳ್ಳುತ್ತಿದ್ದರು.

ಹೀಗೆ ಹಲವು ವರ್ಷಗಳವರೆಗೆ ಹೀರೋ ಆಗಿ ರಾರಾಜಿಸಿದ ಇವರ ಬದುಕಿನಲ್ಲಿ ಇದ್ದಕ್ಕಿದ್ದಂತೆ ದುರ್ಘಟನೆ ಒಂದು ನಡೆದು ಹೋಗುತ್ತದೆ. ಆ ಘಟನೆಯಿಂದ ಅವರು ಜೈಲುವಾಸವನ್ನು ಕೂಡ ಅನುಭವಿಸಬೇಕಾಗುತ್ತದೆ. ಸುಮನ್ ಅವರ ಮೇಲೆ ಅವರ ಯಶಸ್ಸನ್ನು ಸಹಿಸದ ಕೆಲವರು ನೀ.ಲಿ ಚಿತ್ರ ತಯಾರಿಕೆ ಮಾಡುತ್ತಿದ್ದಾರೆ ಎನ್ನುವ ರೀತಿ ಕು.ತಂ.ತ್ರ ಮಾಡಿ ಜೈ.ಲಿ ಅಟ್ಟಿರುತ್ತಾರೆ. ನೀ.ಲಿ ಚಿತ್ರ ತಯಾರಿಕೆ ಅಡ್ಡದ ಮೇಲೆ ದಾಳಿ ಆದಾಗ ಸುಮನ್ ಅವರ ಕಾರು ಅಲ್ಲಿರುತ್ತದೆ. ಆದರೆ ಅಂದು ಅವರ ಸ್ನೇಹಿತ ಆ ಕಾರನ್ನು ತೆಗೆದುಕೊಂಡು ಹೋಗಿರುತ್ತಾರೆ.

ಬೇಕೆಂದಲೇ ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಹೀರೋಗಳು ಈ ರೀತಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು, ಅದರಲ್ಲಿ ರಜನಿಕಾಂತ್ ಮತ್ತು ಚಿರಂಜೀವಿ ಹೆಸರು ಕೇಳಿ ಬಂದಿತ್ತು. ಇದರಿಂದ ಡಾರ್ಕ್ ಸೆಲ್ ಶಿ.ಕ್ಷೆಯನ್ನು ಕೂಡ ಅನುಭವಿಸಿದವರು ಸುಮನ್. ನಂತರ ಒಂದೊಳ್ಳೆ ಲಾಯರ್ ಇಂದ ಆಚೆ ಬರುತ್ತಾರೆ. ಆದರೆ ಆಚೆ ಬಂದ ಇವರಿಗೆ ಮೊದಲ ರೀತಿ ಯಾವುದು ಇರುವುದಿಲ್ಲ. ಸಿನಿಮಾಗಳಲ್ಲಿ ನಾಯಕ ನಟ ಅಲ್ಲ ಸಹ ಪಾತ್ರಗಳಿಗೂ ಕೂಡ ಅವಕಾಶ ಸಿಗೋದಿಲ್ಲ. ಇನ್ನೊಂದೆಡೆ ಜನರು ಇವರನ್ನು ಅನುಮಾನದಿಂದ ನೋಡಲು ಶುರು ಮಾಡುತ್ತಾರೆ.

ಮಾಡದ ತಪ್ಪಿಗೆ ಈ ಎಲ್ಲಾ ಅವಮಾನಗಳಿಂದ ಸುಧಾರಿಸಿಕೊಳ್ಳಲು ಬಹಳ ವರ್ಷ ಬೇಕಾಗುತ್ತದೆ. ಇದೆಲ್ಲಕ್ಕಿಂತ ಸುಮನ್ ಅವರ ಬಗ್ಗೆ ಹೇಳಲೇಬೇಕಾದ ಒಂದು ವಿಷಯ ಏನೆಂದರೆ, ಅವರು ಚೆನ್ನಾಗಿದ್ದ ಸಮಯದಲ್ಲಿ ಹೈದರಾಬಾದ್ ಹೊರ ವಲಯದಲ್ಲಿ 175 ಎಕರೆ ಜಮೀನು ಖರೀದಿಸಿರುತ್ತಾರೆ. ಅಲ್ಲಿ ದೊಡ್ಡ ಸ್ಟುಡಿಯೋ ಕಟ್ಟಿ ಸಿನಿಮಾ ತಯಾರಿಕೆ ಮಾಡಬೇಕು ಎಂಬುದು ಅವರ ಕನಸಾಗಿರುತ್ತದೆ. ಆದರೆ ಯಾವಾಗ ಜೈಲಿಗೆ ಹೋಗಿ ಬರುವ ಪರಿಸ್ಥಿತಿ ಆಯ್ತು ಆಗ ಸಂಪೂರ್ಣವಾಗಿ ಎಲ್ಲದರ ಮೇಲೆ ಆಸಕ್ತಿಯನ್ನು ಅವರು ಕಳೆದುಕೊಳ್ಳುತ್ತಾರೆ.

ಕಾರ್ಗಿಲ್ ಯುದ್ಧದಿಂದ ಪ್ರಾ.ಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸಂಪೂರ್ಣವಾಗಿ 175 ಎಕರೆ ಜಮೀನನ್ನು ಕೂಡ ಸೈಟುಗಳನ್ನು ಮಾಡಿ ದಾನ ಮಾಡಿಬಿಡುತ್ತಾರೆ. ಸರಕಾರ ಕೂಡ ಮಾಡದ ಸಹಾಯವನ್ನು ಸುಮನ್ ಅವರು ಸೈನಿಕರ ಕುಟುಂಬಕ್ಕೆ ಮಾಡಿದ್ದಾರೆ. ಇವರು ಕನ್ನಡದ ಮೂಲದವರು ಎಂದು ಹೇಳಿಕೊಳ್ಳುವುದೇ ಹೆಮ್ಮೆ.

Viral News Tags:Actor Suman, Megastar chiranjeevi, Rajinikanth
WhatsApp Group Join Now
Telegram Group Join Now

Post navigation

Previous Post: ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?
Next Post: ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore