Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೇಕಪ್ ನಿಂದ ವಿರೂಪಗೊಂಡ ಮುಖ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹ ನಿಂತು ಹೋಯ್ತು. ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಎಚ್ಚರ.!!

Posted on March 5, 2023 By Kannada Trend News No Comments on ಮೇಕಪ್ ನಿಂದ ವಿರೂಪಗೊಂಡ ಮುಖ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹ ನಿಂತು ಹೋಯ್ತು. ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಎಚ್ಚರ.!!

 

ಮನೆಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ಕೆ ಬಂದಿರುವವರ ಎದುರಲ್ಲಿ ತಾನು ಕೂಡ ಅಂದವಾಗಿ ಕಾಣಬೇಕು ಎಂಬುದು ಎಲ್ಲಾ ಮಹಿಳೆಯರ ಆಸೆ ಆಗಿರುತ್ತದೆ. ಹಸೆ ಮಣೆ ಏರುವ ದಿನದಂದು ಆಕರ್ಷಣೀಯವಾಗಿ ಕಾಣುವ ಹಂಬಲದಿಂದ ಮುಖವನ್ನು ಅಂದಗೊಳಿಸಿಕೊಳ್ಳಲು ಪಾರ್ಲರ್ ಗೆ ಹೋಗಿದ್ದ ಯುವತಿಯ ಮುಖ ವಿರೂಪವಾಗಿದೆ. ವರನ ಕೈ ಹಿಡಿಯಬೇಕಾಗಿದ್ದ ವಧು ದುರ್ಗತಿ ಎಂಬಾಕೆ ಮೇಕಪ್ ಮಾಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಹಾಸನದ ಅರಸೀಕೆರೆ ಗ್ರಾಮವು ಇಂತಹದೊಂದು ಘಟನೆಗೆ ಸಾಕ್ಷಿ ಆಗಿದೆ.

ಇತ್ತೀಚಿನ ಮದುವೆ ಮನೆಗಳಲ್ಲಿ, ಮಾಂಗಲ್ಯ ಧಾರಣಾಮಂಟಪ ಮತ್ತು ಅತಿಥಿಗಳು ಆಸೀನರಾಗುವ ಸ್ಥಳದ ಅಲಂಕಾರಕ್ಕೆ, ಹುಡುಗ ಹುಡುಗಿಯರ ವಿಭಿನ್ನ ರೀತಿಯ ಉಡುಗೆಗೆ ಮತ್ತು ಅಂದ ಚಂದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಹರೆಯದ ವಯಸ್ಸು ಪ್ರಾರಂಭ ಆದಾಗಿನಿಂದಲೂ ಹುಡುಗ ಅಥವಾ ಹುಡುಗಿಯರ ಮನಸ್ಸಿನಲ್ಲಿ ತಮ್ಮ ಮದುವೆಯ ಸಂಭ್ರಮದ ಕನಸು ಚಿಗುರುತ್ತದೆ. ಮದುವೆಯ ದಿನ ಎಲ್ಲರ ಕಣ್ಣನೋಟವು ವಧು-ವರರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅದಕ್ಕಾಗಿ ಮದುಮಗ ಮತ್ತು ಮದುಮಗಳು ತಾವು ತೆಳ್ಳಗೆ ಬೆಳ್ಳಗೆ ಕಾಣಬೇಕೆಂದು ಎಲ್ಲರೂ ಮೆಚ್ಚಿ ಹೊಗಳಬೇಕೆಂದು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ.

ಫೋಟೋ ವಿಡಿಯೋಗಳಿಲ್ಲದ ಮದುವೆಯೇ ಇಲ್ಲ. ನವ ಜೀವನದ ಆರಂಭಿಕ ದಿನದ ನೆನಪನ್ನು ಮುಂದೊಂದು ದಿನ ಮೇಲುಕು ಹಾಕುವಾಗ ತಾವು ಸುಂದರವಾಗಿಯೇ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಮದುವೆಯ ದಿನ ಹತ್ತಿರ ಬಂದಂತೆ ಮಿತವಾಗಿ ಆಹಾರವನ್ನು ತೆಗೆದುಕೊಳ್ಳುತ್ತಾ ಡಯಟ್ಗಳನ್ನು ಪ್ರಾರಂಭಿಸುತ್ತಾರೆ. ವ್ಯಾಯಾಮ, ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಕೈ ಕಾಲು ಮುಖದ ಮೇಲಿನ ಬೇಡದ ಕೂದಲುಗಳ ತೆಗೆಸಿಕೊಳ್ಳುವುದು, ಫೇಶಿಯಲ್ ಮಾಡಿಸಿಕೊಳ್ಳುವುದು, ಫೇಸ್ ಮಾಸ್ಕ್ ಬಳಸುವುದು, ಹೀಗೆ ಸೌಂದರ್ಯ ವರ್ಧಕಗಳ ಬಳಕೆಯು ಹೆಚ್ಚಾಗುತ್ತದೆ. ಯಾವುದೇ ಹೊಸ ವಸ್ತುಗಳನ್ನು ಅಥವಾ ಕಾಸ್ಮೆಟಿಕ್ ಗಳನ್ನು ಬಳಸುವಾಗ ಅದು ವ್ಯಕ್ತಿಯ ದೇಹಕ್ಕೆ ಸರಿ ಹೋಗುವುದೇ ಎಂಬುದರ ಕುರಿತಾಗಿಯೂ ಯೋಚಿಸಿಕೊಳ್ಳಬೇಕು. ಯಾಕೆಂದರೆ ಬಳಸಿರುವ ರಾಸಾಯನಿಕಗಳು ಕೆಲವರ ದೇಹಕ್ಕೆ ಬಗ್ಗದೆ ಅಲರ್ಜಿಗಳನ್ನು ಉಂಟು ಮಾಡಬಹುದು. ತಮ್ಮ ದೇಹವು ಬಳಸುತ್ತಿರುವ ಸೌಂದರ್ಯ ವರ್ಗಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಸ್ವಲ್ಪವೇ ಬಳಸಿ ತಿಳಿದುಕೊಳ್ಳಬೇಕು.
ಇಲ್ಲದಿದ್ದಲ್ಲಿ ಹಾನಿಯಾಗುವುದು ಖಂಡಿತ.


ಹಾಸನದ ಅರಸೀಕೆರೆಯಲ್ಲಿ ಮದುವೆಯಾಗಬೇಕಿದ್ದ ಮದುಮಗಳು ಬ್ಯೂಟಿ ಪಾರ್ಲರ್ಗೆ ಹೋಗಿ ತನ್ನ ವದನವನ್ನು ಹೆಚ್ಚು ಚಂದವಾಗಿಸಿಕೊಳ್ಳಲು ಹಂಬಲಿಸಿದ್ದಾಳೆ. ಬ್ಯೂಟಿ ಪಾರ್ಲರ್ ಗೆ ತೆರಳಿದ್ದಾಗ ಬ್ಯುಟಿಷಿಯನ್ನ ಸಲಹೆಯಂತೆ ಮೇಕಪ್ ಮಾಡುವ ಮೊದಲು ಸ್ಟೀಮ್ ಅನ್ನು ತೆಗೆದುಕೊಳ್ಳಲು ಹೋಗಿ ಮುಖವೇ ಊದಿಕೊಂಡಿದೆ. ಜೊತೆಯಲ್ಲಿ ಇಡೀ ಮುಖವು ಕಪ್ಪಗಾಗಿ ಸುಟ್ಟಿದೆಯಂತೆ. ವಿಷಯ ತಿಳಿದ ಮದುಮಗ ಹಾಗೂ ಆತನ ಕುಟುಂಬವು ಈ ರೀತಿಯಾಗಿ ಮೇಕಪ್ ನಿಂದ ಅವಾಂತರಕ್ಕೆ ಸಿಲುಕಿಕೊಂಡ ಹುಡುಗಿಯೊಂದಿಗೆ ವಿವಾಹವನ್ನೇ ನಿರಾಕರಿಸಿದ್ದಾರಂತೆ. ಈ ನಿರ್ಧಾರಕ್ಕೆ ವಧುವಿನ ಮನೆಯವರು ಕೂಡ ಕಂಗಾಲಾಗಿದ್ದಾರಂತೆ.

ಅಂದಿನ ದಿನ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ದುರ್ಗತಿಯು ತನ್ನ ಮುಖವನ್ನು ತಾನು ನೋಡಿಕೊಂಡಾಗ ಬೆಚ್ಚಾಗಿದ್ದು, ಮನನೊಂದು ತನ್ನ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಬ್ಯೂಟಿಷಿಯನ್ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಬ್ಯೂಟಿ ಪಾರ್ಲರ್ ನ ಮಾಲೀಕರಾದ ಗಂಗಾ ವಿರುದ್ಧ ಹೇಳಲು ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಅರಸಿಕೆರೆ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ತಿಳಿದ ಕೂಡಲೇ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರಂತೆ. ಅತಿಯಾದ ಅಥವಾ ಅನವಶ್ಯಕವಾಗಿ ಸೌಂದರ್ಯವರ್ಧಕಗಳನ್ನು ಬಳಸುವುದಕ್ಕಿಂತ ನೈಜತೆಯನ್ನು ಒಪ್ಪಿಕೊಂಡು ಮುನ್ನಡೆಯುವುದು ಒಳಿತು.

Public Vishya
WhatsApp Group Join Now
Telegram Group Join Now

Post navigation

Previous Post: ಈ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಕೆಲಸ ಪಕ್ಕಾ.! ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ ಈ ವಿಚಾರ ನೋಡಿ.
Next Post: ಮಾವನನ್ನು ವೃದ್ಧಶ್ರಾಮಕ್ಕೆ ಸೇರಿಸಲು ಸೊಸೆಯಂದಿರು ಮಾಡಿದ ಈ ಮಾಸ್ಟರ್ ಪ್ಲಾನ್ ಏನು ಅಂತ ಗೊತ್ತಾದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore