Sunday, June 4, 2023
HomePublic Vishyaಈ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಕೆಲಸ ಪಕ್ಕಾ.! ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ...

ಈ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಕೆಲಸ ಪಕ್ಕಾ.! ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ ಈ ವಿಚಾರ ನೋಡಿ.

 

ಮಕ್ಕಳಿಗೆ ಉತ್ತಮ ಕೆಲಸ ಹಿಡಿಸುವ ಉದ್ದೇಶದಿಂದ ವಳ್ಳೆಯ ಶಿಕ್ಷಣವನ್ನು ಕೊಡಿಸಲು ಪಾಲಕರು ಹುಡುಕಾಡುತ್ತಿರುತ್ತಾರೆ. ಹೆಚ್ಚು ಅಂಕವನ್ನು ಗಳಿಸುವ ಭರದಲ್ಲಿ ಮಕ್ಕಳು ನೀತಿ ಶಿಕ್ಷಣವನ್ನು ಕಲಿಯುವುದು ಮರೆತಿರುತ್ತಾರೆ. ಇನ್ನು ಹೆಸರಾಂತ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ವತ್ತು ಕೊಡುವುದಿಲ್ಲ. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ತಿಳಿಸುವುದು ಅವಶ್ಯಕ. ಇಲ್ಲೊಂದು ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಉದ್ಯೋಗದೊಂದಿಗೆ ವ್ಯಕ್ತಿತ್ವವನ್ನು ನೀಡುವುದಾಗಿ ಭರವಸೆ ನೀಡಿದೆ.

ಇದೆ ಹೊಸಬೆಳಕು ಸಂಸ್ಥೆ. ಈ ಸಂಸ್ಥೆಯ ಉದ್ದೇಶವು ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವುದು. ಇಲ್ಲಿ ಡಿಗ್ರಿಯ ಜೊತೆಗೆ ಐಎಎಸ್, ಕೆಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತದಂತೆ. ಮಕ್ಕಳು ಕಲಿಯುವ ಸ್ಥಳದಲ್ಲಿಯೇ ಉಳಿದು ದಿನದ ಸಂಪೂರ್ಣ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಹಿಂದಿನ ಕಾಲದ ಗುರುಕುಲ ಪದ್ಧತಿಯ ಮಾದರಿಯಲ್ಲಿ ನಡೆಸಲಾಗುತ್ತಿದೆ ಸಾತ್ವಿಕ ಆಹಾರವನ್ನು ನೀಡಲಾಗುತ್ತದಂತೆ.

ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆಯಂತೆ. ಹೊಸಬೆಳಕು ಸಂಸ್ಥೆಯಲ್ಲಿ ಈಗಾಗಲೇ ಅನೇಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳು ಈ ಸಂಸ್ಥೆಯ ಬಗ್ಗೆ ಹೇಳುವುದೇನೆಂದರೆ ‘ನಮಗೆ ಇಲ್ಲಿಯ ಉದ್ದೇಶವು ತುಂಬಾ ಇಷ್ಟವಾಯಿತು. ಯೋಗ, ಧ್ಯಾನ, ಮೌನ, ಅಧ್ಯಯನ ಮತ್ತು ಸಾತ್ವಿಕ ಆಹಾರ ಎಂಬ ಐದು ಚಕ್ರದ ಮೇಲೆ ನಡಿಯುತ್ತಿದೆ. ಪ್ರತಿದಿನವು ಪ್ರಾರಂಭಗೊಳ್ಳುವುದು ಪ್ರತಿಜ್ಞಾ ವಿಧಿಯ ಮೂಲಕ. ಹಗಲಿರುಳು ಪ್ರಾಮಾಣಿಕವಾಗಿ ಐಎಎಸ್ ಪಾಸ್ ಆಗಲು ಶ್ರಮಿಸುತ್ತೇವೆ ಮತ್ತು ಆತ್ಮ ಶುದ್ಧಿಯಿಂದ ಮನವೀಯ ಮೌಲ್ಯಗಳನ್ನು ಕಲಿತು ರಾಮರಾಜ್ಯದ ಕನಸನ್ನು ನನಸು ಮಾಡುತ್ತೇವೆ ಎಂಬುದೆ ಪ್ರತಿಜ್ಷೆಯಾಗಿದೆ.

ಇಂತಹ ಒಳ್ಳೆಯ ಅವಕಾಶ ಕಳೆದುಕೊಂಡರೆ ಮತ್ತೊಮ್ಮೆ ಸಿಗುವುದಿಲ್ಲ. ಮೊದಲಿಗೆ ಕಷ್ಟ ಅನಿಸುತ್ತಿತ್ತು. ಆದರೆ ಬರುಬರುತ್ತಾ ನಮ್ಮ ಡಿಗ್ರೀ ಜೊತೆಗೆ ಐಎಎಸ್ ಪರೀಕ್ಷಾ ತಯಾರಿಯನ್ನು ಮಾಡಿಕೊಳ್ಳುವುದು ರೂಢಿಯಾಯಿತು’ ಎನ್ನುತ್ತಾರೆ. ವಿಜ್ಞಾನ ವಿಭಾಗದಿಂದ ಬಂದಿದ್ದರು ಸಮಾಜವನ್ನು ಓದುವುದು ಕಷ್ಟವೆನಿಸಲಿಲ್ಲಾ. ತುಂಬಾ ಮೊಬೈಲ್ ಬಳಸುತಿದ್ದ ನನಗೆ ಇಲ್ಲಿ ಓದುವ ಹವ್ಯಾಸವು ಬೆಳೆದು ಪುಸ್ತಕಗಳನ್ನು ಇಷ್ಟ ಪಡುವಂತಾಗಿದೆ ನಾನು ಇಲ್ಲಿಯ ಅನುಕರಣೆಗೆ ಹೊಂದಿಕೊಳ್ಳುತ್ತೇನೊ ಇಲ್ಲವೊ ಎಂಬ ಭಯ ಪಾಲಕರಲ್ಲಿ ಇತ್ತು. ಮುನ್ನೂರಾ ಐವತ್ತಕ್ಕು ಜಾಸ್ತಿ ದೂರವಿದೆ ನಮ್ಮನೆ.

ಲಂಚ ತೆಗೆದುಕೊಳ್ಳದೆ ಎಲ್ಲರಿಗೂ ಸಹಾಯಮಾಡುವಂತೆ ನಿಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಶಿಕ್ಷಕರೊಬ್ಬರು ಹೇಳಿದರು. ಆ ಮಾತಿಗೆ ನನ್ನ ಪೋಷಕರು ಮೆಚ್ಚಿ ಇಲ್ಲಿ ಓದಿಸಲು ಮುಂದಾದರು’ ಎನ್ನುತ್ತಾಳೆ ಇನ್ನೊಂದು ಹುಡುಗಿ. ಹೆಣ್ಣು ಮಕ್ಕಳ ವಸತಿ ಸೌಲಭ್ಯಗಳು ಚೆನ್ನಾಗಿಯೆ ಇವೆಯಂತೆ. ಒಮ್ಮೆ ಬಂದು ನೋಡಿದರೆ ಸಾಕು ಮಕ್ಕಳನ್ನು ಇಲ್ಲಿಯೇ ಓದಿಸಬೇಕು ಅನಿಸುತ್ತದೆ ಎಂಬುದು ಪಾಲಕರ ಅಭಿಪ್ರಾಯ.

ವಿದ್ಯಾವಂತರೂ ಕೂಡ ಭ್ರಷ್ಟಾಚಾರಗಳಲ್ಲಿ ಭಾಗಿಯಾಗುವುದು, ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ನೋಡಿದರೆ ಅರ್ಥವಾಗುವುದು ಅವರಲ್ಲಿ ವ್ಯಕ್ತಿತ್ವದ ಕೊರತೆ ಇದೆ ಎಂಬುದು. ಆದರೆ ಇಲ್ಲಿನ ಮಕ್ಕಳು ವಿದ್ಯೆಯಷ್ಟೇ ವತ್ತನ್ನು ವ್ಯಕ್ತಿತ್ವಕ್ಕೂ ನೀಡಿ ಬೆಳೆಯುತ್ತಿರುವುದು, ಎಲ್ಲರೂ ಈ ಶಿಕ್ಷಣ ಸಂಸ್ಥೆಯತ್ತ ತಿರುಗಿ ನೋಡುವಂತೆ ಮಾಡಿದೆ. ಅನೇಕ ಪಾಲಕರು ತಮ್ಮ ಮಕ್ಕಳ ದಿನಚರಿಯಲ್ಲಾದ ಬದಲಾವಣೆಯನ್ನು, ಶಿಸ್ತನ್ನು ಕಂಡು ಖುಷಿ ಪಟ್ಟಿದ್ದಾರಂತೆ.

ಇನ್ನೊಂದು ವಿಶೇಷವೆಂದರೆ ಮಕ್ಕಳು ಕೋಪವನ್ನು ನಿಯಂತ್ರಿಸಿಕೊಳ್ಳುವ ಮತ್ತು ತಾಳ್ಮೆಯಿಂದ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವ ಮನೋಭಾವವನ್ನು ಹೊಂದುತ್ತಿದ್ದಾರಂತೆ. ನಮ್ಮನ್ನು ನಾವು ಕಂಡುಕೊಳ್ಳಲು ಉತ್ತಮ ವೇದಿಕೆ ಎಂದು ಇಲ್ಲಿನ ಮಕ್ಕಳು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ವಿಳಾಸ ಇಂತಿದೆ : ಹೊಸಬೆಳಕು IAS ತಪಸ್ಸು.. #9, 2nd ಕ್ರಾಸ್, ಕುರುಬರ ಹಳ್ಳಿ ಮೇನ್ ರೋಡ್, ಬೆಂಗಳೂರು.