Home Entertainment ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

0
ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

 

ಸಾಮಾಜಿಕ ಜಾಲತಾಣ ಎನ್ನುವುದು ಈಗ ಎಲ್ಲರ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಶಾಲಾ ಮಕ್ಕಳಿಂದ, ಯುವಕರು, ವೃದ್ಧರು ಹೀಗೆ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ದಾಸರುಗಳೇ ಎಂದೂ ಹೇಳಬಹುದು. ಸೋಶಿಯಲ್ ಮೀಡಿಯಾ ಈಗ ಜಗತ್ತಿನ ಎಲ್ಲರನ್ನೂ ಒಂದೇ ಎಳೆಯಲಿ ಬೆಸೆದಿರುವ ಒಂದು ಬೆಸುಗೆ ಎಂದು ಹೇಳಬಹುದು.

ಲಕ್ಷಗಟ್ಟಲೆ ಮೈಲಿ ದೂರದಲ್ಲಿರುವವರನ್ನು ಕೂಡ ಬೆರಳ ತುದಿಯ ಮೊಬೈಲ್ ಮೂಲಕ ಸಂಪರ್ಕಿಸಿ ಸಂವಹನ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಆಪ್ ಗಳು ಬಹಳ ಅನುಕೂಲಕರ ಆಗಿವೆ. ಅದರಲ್ಲೂ ಫೇಸ್ಬುಕ್, ಯೂಟ್ಯೂಬ್ ಇತ್ತೀಚಿಗೆ instagram ವೇದಿಕೆಗಳಲ್ಲಿ ತಮ್ಮದೂ ಸಹ ಒಂದು ಅಕೌಂಟ್ ಕ್ರಿಯೇಟ್ ಮಾಡಿ ದಿನಕ್ಕೆ ಹತ್ತಾರು ಬಾರಿ ಇಣುಕಿ ನೋಡುವುದು ಜನಸಾಮಾನ್ಯರ ಅಭ್ಯಾಸ.

ಇನ್ನು ಸೆಲೆಬ್ರಿಟಿಗಳ ಪಾಲಿಗಂತು ತಮ್ಮ ಫ್ಯಾನ್ಗಳ ಜೊತೆಗೆ ನೇರವಾಗಿ ಸಂಪರ್ಕಿಸಲು ಇದೊಂದು ಉತ್ತಮ ವೇದಿಕೆ ಆಗಿದೆ. ಹಾಗಾಗಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ರೀತಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ತಮ್ಮ ಅಕೌಂಟ್ ಕ್ರಿಯೇಟ್ ಮಾಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಳಿಗೆ ಬಹಳ ಬೇಡಿಕೆ ಇರುತ್ತದೆ.

ಜೊತೆಗೆ ಅವರು ಅಪ್ಲೋಡ್ ಮಾಡಿದ ಕೆಲ ಕ್ಷಣಗಳಲ್ಲಿ ದಾಖಲೆ ಗಟ್ಟಲೆ ವೀಕ್ಷಣೆ, ಲೈಕ್ಸ್ ಮತ್ತು ಶೇರ್ ಕೂಡ ಆಗಿ ವೈರಲ್ ಆಗುತ್ತದೆ. ಅವರ ಅಭಿಮಾನಿಗಳು ಸೇರಿದಂತೆ ಅನೇಕ ಮಂದಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕೂಡ ಆಗುತ್ತದೆ. ಈ ರೀತಿ ಫಾಲೋವರ್ಸ್ ಗಳನ್ನು ಹೊಂದುವುದೇ ಒಂದು ಪ್ರತಿಷ್ಠೆ ಆದರೆ ಅವರು ಹಾಕಿರುವ ಫೋಟೋಗಳಿಗೆ ಫೋಟೋ ಹಾಕಿದ ಅತಿ ಕಡಿಮೆ ಸಮಯದಲ್ಲಿ ಯಾರು ಅತಿ ಹೆಚ್ಚು ಲೈಕ್ಸ್ ಗಳಿಸುತ್ತಾರೆ ಎನ್ನುವುದು ಕೂಡ ಒಂದು ಸ್ಪರ್ಧೆ ಆಗಿದೆ.

ಇತ್ತೀಚಿಗಷ್ಟೇ ಕಳೆದ ವಾರ ಕಾಲಿವುಡ್ ದಳಪತಿ ವಿಜಯ್ ಅವರು instagram ಪ್ರವೇಶ ಪಡೆದಿದ್ದಾರೆ. ಅವರು ಇನ್ಸ್ಟಾಗ್ರಾಮ್ ಗೆ ಬಂದ ದಿನದಿಂದಲೂ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚತ್ತಲೇ ಇದೆ. ಜೊತೆಗೆ ಅವರು ಅಪ್ಲೈ ಮಾಡಿದ ಒಂದು ಫೋಟೋ 104 ಸೆಕೆಂಡ್ ಒಳಗಡೆ ಒಂದು ಮಿಲಿಯನ್ ಲೈಕ್ಸ್ ಪಡೆಡುವ ಮೂಲಕ ದಾಖಲೆ ಬರೆದಿದೆ. ಆದರೆ ವಿಜಯ್ ಗೂ ಮುಂಚೆ ದಕ್ಷಿಣದ ಮತ್ತೊಬ್ಬ ನಟ ಈ ದಾಖಲೆ ಮಾಡಿದ್ದರು.

ಪುಷ್ಪ ಸಿನಿಮಾ ಮೂಲಕ ದೇಶದ ಎಲ್ಲಾ ಭಾಷೆಗಳಿಗೂ ಕೂಡ ಪರಿಚಿತರಾಗಿರುವ ಅಲ್ಲು ಅರ್ಜುನ್ ಅವರು ಈ ಹಿಂದೆ ಅಪ್ಲೋಡ್ ಮಾಡಿದ ಒಂದು ಫೋಟೋಗೆ 69 ನಿಮಿಷಗಳಲ್ಲೇ ಒಂದು ಮಿಲಿಯನ್ ಲೈಕ್ಸ್ ಬಂದಿತ್ತು, ಈಗ ಪುಷ್ಪ ಸಿನಿಮಾ ಆದ ಮೇಲೆ ಅವರು ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿಗೆ ಫೇಮಸ್ ಆಗುತ್ತಿದ್ದಾರೆ.

ಇವರೆಲ್ಲರೂ ಮೀರಿ ಸೌತ್ ಸಿನಿಮಾ ಇಂಡಸ್ಟ್ರಿಯ ಮತ್ತೊಬ್ಬ ನಟರಿದ್ದಾರೆ. ಅವರು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಈಗ ದೇಶದಾದ್ಯಂತ ರಾಕಿ ಭಾಯ್ ಎಂದು ಕರೆಸಿಕೊಳ್ಳುತ್ತಿರುವ ಈ ಪ್ಯಾನ್ ಇಂಡಿಯಾ ಸ್ಟಾರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಬಹಳ ಕಡಿಮೆ. ಆದರೆ ಇವರು ಅಪರೂಪಕ್ಕೆ ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳು ತಕ್ಷಣವೇ ವೈರಲ್ ಆಗುತ್ತವೆ. ಈ ಹಿಂದೆ ಇವರು ಹಾಕಿದ ಒಂದು ಫೋಟೋ 46 ನಿಮಿಷಗಳಲ್ಲಿ ಒಂದು ಮಿಲಿಯನ್ ಲೈಕ್ಸ್ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಇಂದಿಗೂ ಸಹ ಈ ಲಿಸ್ಟ್ ಅಲ್ಲಿ ಯಶ್ ಅವರೇ ಟಾಪರ್ ಆಗಿದ್ದಾರೆ.

LEAVE A REPLY

Please enter your comment!
Please enter your name here