Friday, June 9, 2023
HomeViral Newsರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

 

ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ವ್ಯಕ್ತಿಯೊಬ್ಬನ ಪ್ರಾ.ಣ ರಕ್ಷಿಸಲು ಪರದಾಡುತ್ತಿರುವುದು ಕಾಣುತ್ತದೆ. ಈ ವಿಡಿಯೋದಲ್ಲಿ ಸುದೀಪ್ ಅವರ ಜೊತೆ ಸುದೀಪ್ ಅವರ ಬಾಡಿಗಾರ್ಡ್ ಸುತ್ತಲು ಜನ ಆವರಿಸಿರುವುದನ್ನು ಕೂಡ ಕಾಣಬಹುದು. ಎಲ್ಲರೂ ನಿಂತುಕೊಂಡು ನೋಡುತ್ತಿದ್ದರು ಕೂಡ ಸಹಾಯಕ್ಕೆ ಯಾರೂ ಬರುವುದಿಲ್ಲ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಆ ವ್ಯಕ್ತಿಯನ್ನು ಸುಧಾರಿಸುವ, ಸಮಾಧಾನಪಡಿಸುವ ಕೆಲಸ ಮಾಡುತ್ತಿರುತ್ತಾರೆ.

ಆ ವ್ಯಕ್ತಿ ನೀರು ಕೇಳುವಾಗ ಹತ್ತಿರದಲ್ಲಿದ್ದವರಿಗೆ ನೀರು ತಂದು ಕೊಡುವಂತೆ ಗದರುತ್ತಾರೆ. ಜೊತೆಗೆ ಉಳಿದವರಿಗೆಲ್ಲ ನಿಂತುಕೊಂಡು ನೋಡುತ್ತಿದ್ದೀರಲ್ಲ ಏನಾದರೂ ಸಹಾಯ ಮಾಡಬಾರದಾ, ಅಂಬುಲೆನ್ಸ್ ನಂಬರ್ ಗಾದರೂ ಫೋನ್ ಮಾಡಿ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ರ.ಕ್ತಸ್ರಾ.ವ ಆಗಿ ಬಿದ್ದಿರುವ ಯುವಕ ಕೂಡ ನಾನು ನನ್ನ ಹೆಂಡತಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದೆ. ಆಕೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ ಎಂದು ಹೇಳುತ್ತಾ ಅಳುತ್ತಿರುವುದು ಅರ್ಥ ಆಗುತ್ತದೆ.

ಇದ್ದಕ್ಕಿದ್ದಂತೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಾನಾ ಅರ್ಥ ಪಡೆದುಕೊಂಡಿದೆ. ಕೆಲವರು ನೆನ್ನೆ ಅಷ್ಟೇ ಸುದೀಪ್ ಬಿಜೆಪಿ ಪರ ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರನ್ನು ಸೆಳೆಯುವ ತಂತ್ರ ಇರಬಹುದು ಎಂದು ದೂರಿದ್ದಾರೆ. ಇನ್ನೂ ಕೆಲವರು ಇಲ್ಲ ಇದು ನಿಜ ಆಗಿರಬಹುದು ಸುದೀಪ್ ಅವರು ಹೃದಯವಂತರು ಕಣ್ಣೆದುರಿಗೆ ಕಂಡ ಅಪಘಾತವನ್ನು ಹಾಗೆ ಬಿಟ್ಟು ಹೋಗುವರಲ್ಲ ಹಾಗಾಗಿ ಅವರು ನೈಜವಾಗಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹತ್ತಿರದಲ್ಲಿದ್ದ ಯಾರೋ ರೆಕಾರ್ಡ್ ಮಾಡಿ ಹರಿಬಿಟ್ಟಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಡಿಯೋ ನಿಜವಾದ ಅಸಲಿಯತ್ತು ಈ ರೀತಿ ಇದೆ ನೋಡಿ. ಇದು ರಸ್ತೆ ಅ.ಪ.ಘಾ.ತದ ಬಗ್ಗೆ ಎಚ್ಚರಿಸಲು ಮಾಡಿದ ಜನಜಾಗೃತಿ ಕಾರ್ಯಕ್ರಮದ ಒಂದು ವಿಡಿಯೋ ಆಗಿದೆ. ಒಂದು ಸ್ಕಿಟ್ ಮಾಡಿ ಜನರಲ್ಲಿ ರಸ್ತೆ ಅಪಘಾತದ ಬಗ್ಗೆ ಎಚ್ಚರಿಕೆ ಮೂಡಿಸುವುದು ಮತ್ತು ಸಂಚಾರಿ ನಿಯಮದ ಎಲ್ಲಾ ನ್ಯೂಸ್ ಗಳನ್ನು ತಪ್ಪದೇ ಫಾಲೋ ಮಾಡಿ ಎಂದು ಉತ್ತೇಜಿಸುವುದು.

ದ್ವಿ ಚಕ್ರವಾಹನದಾರರು ಯಾವ ರೀತಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಅದರ ಪ್ರಯೋಜನಗಳೇನೆಂದು ಮನವರಿಕೆ ಮಾಡುವುದು, ಹಾಗೆ ಒಂದು ವೇಳೆ ಅ.ನಾ.ಹು.ತಗಳಾದ ಸಂದರ್ಭದಲ್ಲಿ ಜನರು ಅದಕ್ಕೆ ಹೇಗೆ ಪ್ರತಿಕ್ರಿಯಬೇಕು, ಅಂತಹ ಸಮಯದಲ್ಲಿ ಸುತ್ತಮುತ್ತಲಿನವರ ಸಹಾಯ ಎಷ್ಟು ಮುಖ್ಯ ಆಗುತ್ತದೆ, ಅವರ ನಡವಳಿಕೆಗಳು ಯಾವ ರೀತಿ ಇರಬೇಕು ಎಂದು ಜನರಿಗೆ ಜಾಗೃತಿ ಮೂಡಿಸಲು ಮಾಡಿದ ಸ್ಕಿಟ್ ನ ವಿಡಿಯೋ ಇದಾಗಿದೆ.

ಆ ವಿಡಿಯೋ ಕ್ಲಿಪಿಂಗ್ ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಅಷ್ಟು ನೈಜವಾಗಿ ಎಲ್ಲರೂ ಕಾಣಿಸಿಕೊಂಡಿರುವುದರಿಂದ ಇದು ನಿಜವಾಗಿ ಎಲ್ಲೋ ಘಟನೆ ನಡೆದಿರುವುದು ಎಂದು ಅನಿಸುವಷ್ಟು ಜನರ ಗಮನ ಸೆಳೆದಿದೆ. ಇತ್ತೀಚೆಗೆ ರಸ್ತೆ ಅ.ಪ.ಘಾ.ತಗಳ ಸಂಖ್ಯೆ ಹೆಚ್ಚುತ್ತಾ ಇದೆ ಜೊತೆಗೆ ಯಾರದ್ದಾದರೂ ಪ್ರಾಣ ಅಪಾಯದಲ್ಲಿ ಇದ್ದರೂ ಕೂಡ ಕಂಡು ಕಾಣದಂತೆ ನಿರ್ಲಕ್ಷಿ ಹೋಗುವ ಜನರು ಇದ್ದಾರೆ. ಅವರಿಗೆಲ್ಲ ತಿಳುವಳಿಕೆ ಹೇಳುವಂತಹ ವಿಡಿಯೋ ಇದಾಗಿದೆ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.