ಚುನಾವಣಾ ಸಮಯ ಸಮೀಪಿಸುತ್ತಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪ್ರಚಾರ ಕಾರ್ಯವು ಬರದಿಂದ ಸಾಗುತ್ತಿರುವುದು ಒಂದೆಡೆಯಾದರೆ ಅಪ್ಲೈ ಮಾಡಿರುವ ವೋಟರ್ ಐಡಿ ಕಾರ್ಡ್ ಬಂದಿಲ್ಲ ಎಂದು ಚಿಂತೆ ಮಾಡುವವರು ಇನ್ನೊಂದಡೆ. ಆದರೆ ಹೊಸ ವೋಟರ್ ಐಡಿಯನ್ನು ಪಡೆದುಕೊಳ್ಳುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಬರಹದಲ್ಲಿ ತಿಳಿಸಲಿದ್ದೇವೆ.
ಮತ ಹಾಕುವ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿಯ ಅವಶ್ಯಕತೆ ಇರುತ್ತದೆ. ಅದನ್ನು ಪಡೆಯಲು ಮೊದಲು ಅಪ್ಲೈ ಮಾಡಬೇಕಾಗುತ್ತದೆ. ಅಪ್ಲೈ ಮಾಡಿದ ನಂತರ ನಮ್ಮ ವೋಟರ್ ಐಡಿಯು ಅಪ್ರುವಲ್ ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಮನೆಯಲ್ಲಿಯೇ ಕುಳಿತು ಕಂಪ್ಯೂಟರ್ನಲ್ಲಿಯೇ ನೋಡಬಹುದು.
ಹೀಗೆ ನೀವು ಇದ್ದ ಸ್ಥಳದಿಂದಲೇ ವೋಟರ್ ಐಡಿ ಅಪ್ರೂವ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ವೋಟರ್ ಐಡಿಯು ನಿಮ್ಮನ್ನು ಬಂದು ತಲುಪಿಲ್ಲವೆಂದಾದರೆ ಏನೇನು ಮಾಡಬೇಕು ಎಂಬುದನ್ನು ನೋಡೋಣ. ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಅಪ್ಲೈ ಮಾಡಿದ ಬಳಿಕ ಗುರುತಿನ ಚೀಟಿಯು ಅಬ್ರುವಲ್ ಆಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಅಫಿಶಿಯಲ್ ವೆಬ್ಸೈಟ್ಗೆ ಭೇಟಿ ನೀಡಬೇಕು.
ವೆಬ್ಸೈಟ್ ಓಪನ್ ಮಾಡಿದ ಬಳಿಕ ಬಲಗಡೆ ಕಾಣುವ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಕಾಣುವ ಸರ್ಚ್ ಬೈ ಅಪ್ಲಿಕೇಶನ್ ನಂಬರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ವೋಟರ್ ಕಾರ್ಡ್ ಕಾರ್ಡಿಗೆ ಅಪ್ಲೈ ಮಾಡಿದಾಗ ನೀಡಿದ ರೆಫರೆನ್ಸ್ ನಂಬರ್ ಹೊಂದಿರುವ ಎಕ್ನೋಲೆಜ್ಮೆಂಟ್ ತೆರೆದುಕೊಳ್ಳುತ್ತದೆ ಬಳಿಕ ರೆಫೆರೆನ್ಸ್ ನಂಬರ್ ಅನ್ನು ಬಳಸಿ ಟ್ರಾನ್ಸ್ ಸ್ಟೇಟಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ವೋಟರ್ ಐಡಿಯ ಸ್ಟೇಟಸ್ ಬಗ್ಗೆ ತಿಳಿಯುತ್ತದೆ.
ಗುರುತಿನ ಚೀಟಿ ಅಪ್ಲೈ ಮಾಡಿರುವುದು ಸಬ್ಮಿಟ್ ಆಗಿದೆಯೇ? ಬಿ ಓ ಎಲ್ ಅಪಾಯಿಂಟ್ಮೆಂಟ್ ಆಗಿದೆಯೇ? ಫೀಲ್ಡ್ ವೆರಿಫೈ ಆಗಿದೆಯೇ? ಎಕ್ಸೆಪ್ಟೆಡ್ ಆಗಿದೆಯೇ? ಎಪಿಕ್ ಜನರೇಟ್ ಆಗಿದೆಯೇ? ಎಂಬ ಎಲ್ಲಾ ಆಯ್ಕೆಗಳ ಮೇಲು ಹಸಿರು ಬಣ್ಣದ ಮಾರ್ಕ್ ಬಂದಿದೆ ಎಂದಾದರೆ ನಿಮ್ಮ ವೋಟರ್ ಐಡಿ ಜನರೇಟ್ ಆಗಿದೆ ಎಂದರ್ಥ. ಎಪಿಕ್ ಜನರೇಟ್ ಎಂಬ ಆಯ್ಕೆಯ ಕೆಳಗೆ ಕಾಣುವ ನಂಬರ್ ಅದು ನಿಮ್ಮ ವೋಟರ್ ಕಾರ್ಡಿನ ನಂಬರ್ ಆಗಿರುತ್ತದೆ. ಈ ನಂಬರ್ ನಿಮ್ಮ ವೋಟರ್ ಐಡಿಯು ಅಪ್ರುವಲ್ ಆಗಿದೆ ಎಂದರ್ಥ. ಅದಾಗಿಯೂ ನಿಮ್ಮ ವೋಟರ್ ಕಾಲ್ ನಿಮ್ಮನ್ನು ತಲುಪದಿದ್ದಲ್ಲಿ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ.
* ಮೊದಲಿಗೆ ವೋಟರ್ ಕಾರ್ಡ್ ಪಡೆಯುವ ಆಫೀಸಿಯಲ್ ವೆಬ್ಸೈಟ್ಗೆ ಭೇಟಿ ನೀಡಬೇಕು.
* ನೌ ಯುವರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಕಾಣಿಸುವ ಎಪಿಕ್ಪಿ ನಂಬರ್ ಎಂಬ ಕಾಲಂನಲ್ಲಿ ವೋಟರ್ ಐಡಿ ನಂಬರ್ ಅನ್ನು ಹಾಕಬೇಕು. ಬಳಿಕ ಸರ್ಚ್ ಅನ್ನು ಕ್ಲಿಕ್ ಮಾಡಬೇಕು.
* ಕೆಳಗಡೆ ಬಿಎಲ್ಓ ಇಲೆಕ್ಟ್ರಿಕಲ್ ಆಫೀಸರ್ ಡೀಟೇಲ್ ಎಂಬ ಸಾಲುಗಳಿದ್ದು ಅದರಲ್ಲಿ ನೀವು ಮತ ಚಲಾಯಿಸುವ ವಾರ್ಡಿಗೆ ಸಂಬಂಧಪಟ್ಟ ಅಧಿಕಾರಿಗಳ ಕುರಿತಾದ ಮಾಹಿತಿ ದೊರಕುತ್ತದೆ. ಹೆಸರು ಹಾಗೂ ಫೋನ್ ನಂಬರ್ ಇರುತ್ತದೆ.
ಬಿಎಲ್ಓ, ಇಆರ್ ಓ, ಡಿಇಓ ಅವರ ಹೆಸರು ಹಾಗೂ ಫೋನ್ ನಂಬರ್ ನಿಮಗೆ ಕಾಣಿಸುತ್ತದೆ. ಇವರಲ್ಲಿ ಯಾರಾದರೂ ಒಬ್ಬರನ್ನು ಕರೆ ಮಾಡಿ ಸಂಪರ್ಕಿಸಿ ನೀವು ನಿಮ್ಮ ವೋಟರ್ ಐಡಿಯು ಯಾವಾಗ ನಿಮ್ಮನ್ನು ತಲುಪುತ್ತದೆ ಎಂಬ ಮಾಹಿತಿಯನ್ನು ಪಡೆಯಬಹುದು.
* ಈ ಮೇಲೆ ತಿಳಿಸಿದಂತೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ಕೇಳಿದಾಗ ನಿಮಗೆ ಸಂಪೂರ್ಣವಾಗಿ ದೊರಕದಿದ್ದಲ್ಲಿ, ವೆಬ್ಸೈಟ್ನ ಕೆಳಗಡೆ ಇರುವ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.
ಯಾವುದೇ ರೀತಿಯಲ್ಲಿ ಹಣವನ್ನು ಖರ್ಚು ಮಾಡದೆ ಸುಲಭವಾಗಿ ನಿಮ್ಮ ಐಡಿ ಕಾರ್ಡ್ ನ ಕುರಿತಾದ ಮಾಹಿತಿಯನ್ನು ಪಡೆಯಬಹುದಾದ ಮೇಲಿನ ವಿಧಾನಗಳನ್ನು ಹೊಂದಿರುವ ಈ ಬರಹವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..