ಏಪ್ರಿಲ್ ಒಂದರಿಂದ ಜಾರಿಯಾಗಲಿರುವ ಹೊಸ ನಿಯಮದ ಪ್ರಕಾರ, ವಿದ್ಯುತ್ ಬಿಲ್ಲನ್ನು ಕಟ್ಟುವ ಅಗತ್ಯತೆ ಇರುವುದಿಲ್ಲ. ಬಿಜಿಲಿ ಬಿಲ್ ಮಾಫಿ ಯೋಜನೆಯ ಅಡಿಯಲ್ಲಿ, ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಠೇವಣಿ ಮಾಡಿದರೆ ಹೊಸ ನಿಯಮದ ಪ್ರಯೋಜನವನ್ನು ಪಡೆಯಬಹುದು. ಏನಿದು ಈ ಹೊಸ ಯೋಜನೆ? ಇದರಿಂದ ಯಾರ್ಯಾರಿಗೆಲ್ಲ ಲಾಭ ದೊರಕಲಿದೆ? ಎಂದಿನಿಂದ ಯಾವ ರಾಜ್ಯದಲ್ಲಿ ಜಾರಿಯಾಗಲಿದೆ? 2023ರಲ್ಲಿಯೇ ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಮಾಡಬೇಕಾದ ಅಗತ್ಯ ಕ್ರಮಗಳೇನು? ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ದುಬಾರಿ ದುನಿಯಾದಲ್ಲಿ ಬಡವರಿಂದ ಹಿಡಿದು ಮಧ್ಯಮವರ್ಗದ ಜನರವರೆಗೂ ಅಗತ್ಯತೆಗಿಂತ ಕೊಂಚವೇ ವಿದ್ಯುತ್ ಬಳಕೆ ಜಾಸ್ತಿ ಆದರೂ ಮನೆಯಲ್ಲಿ ಗಲಾಟೆ ಪ್ರಾರಂಭವಾಗುತ್ತದೆ. ಯಾಕೆಂದರೆ ದಿನನಿತ್ಯದ ಚಟುವಟಿಕೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಷೀನ್, ಇಂಡಕ್ಷನ್, ಮಿಕ್ಸರ್, ಟಿವಿ, ಮೊಬೈಲ್ ಎನ್ನುತ್ತಾ ಎಲ್ಲಾ ಹೊಸ ಯಂತ್ರೋಪಕರಣಗಳ ಬಳಕೆಯು ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿದೆ.
ಬಿಸಿಲಿನ ಬೇಗೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಬೇಸಿಗೆಕಾಲದಲ್ಲಿ ದಿನದ 24 ಗಂಟೆಯೂ ಫ್ಯಾನ್ ಬಳಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಗ್ರಾಮೀಣ ಭಾಗದಲ್ಲಿ ವ್ಯವಸಾಯ ಭೂಮಿಗಾಗಿ ನೀರನ್ನು ಒದಗಿಸಲು, ಕೀಟನಾಶಕಗಳನ್ನು ಸಿಂಪಡಿಸಲು, ಧಾನ್ಯಗಳನ್ನು ತೂರಲು ಹೀಗೆ ಕೃಷಿ ಉಪಕರಣಗಳ ಬಳಕೆಯಲ್ಲಿಯೂ ವಿದ್ಯುತ್ ಬೇಕಾಗುತ್ತದೆ. ಇನ್ನು ಸಣ್ಣ ಪುಟ್ಟ ವಸ್ತುಗಳನ್ನು ಮನೆಯಲ್ಲಿ ತಯಾರಿಸುವವರಿಗಂತೂ ವಿದ್ಯುತ್ ಬೇಕೇ ಬೇಕು.
ಇದರಿಂದಾಗಿ ತಿಂಗಳ ಕೊನೆಯಲ್ಲಿ ಅಧಿಕ ವಿದ್ಯುತ್ ಬಿಲ್ ಬರುತ್ತದೆ ಎಂಬ ಆತಂಕದಿಂದ ಹಿತಮಿತವಾಗಿ ವಿದ್ಯುತ್ತನ್ನು ಬಳಸಲಾಗುತ್ತಿದೆ. ಜಾರಿಯಾಗಲಿರುವ ಹೊಸ ನಿಯಮದ ಹೇಳಿಕೆಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ನಂತರ ಅತಿ ಕಟ್ಟುನಿಟ್ಟಾದ ವಿದ್ಯುತ್ ಬಳಕೆಯಿಂದ ಸ್ವಲ್ಪ ಸಡಿಲಗೊಳ್ಳಬಹುದು. ಇನ್ನು ಮುಂದೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ ಎಂದು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವ ಸನ್ನಿವೇಶವು ತಪ್ಪಲಿದೆ.
ಯಾಕೆಂದರೆ ಸರ್ಕಾರವು ಮಹತ್ವದ ಘೋಷಣೆಯನ್ನು ಮಾಡಿದ್ದು, ಈ ನಿಯಮದ ಅನ್ವಯ ಅನೇಕ ಜನರು ವಿದ್ಯುತ್ ಬಿಲ್ಲನ್ನು ಕಟ್ಟಬೇಕಾದ ಚಿಂತೆ ಬಿಡಬಹುದು. ಬಿಜಿಲಿ ಬಿಲ್ ಮಾಪಿ ಯೋಜನೆ 2023 ರ ಲಾಭವನ್ನು ಪಡೆದುಕೊಳ್ಳುವವರು ವಿದ್ಯುತ್ ಬಿಲ್ಲನ್ನು ಕಟ್ಟ ಬೇಕಾಗಿಲ್ಲ. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ‘ಮಾರ್ಚ್ 31ರ ಒಳಗಾಗಿ ಹಿಂದಿನ ಎಲ್ಲಾ ವಿದ್ಯುತ್ ಬಿಲ್ ಬಾಕಿಯನ್ನು ಜಮಾ ಮಾಡಿರಬೇಕು’.
ನಿಗದಿತ ದಿನಾಂಕದ ಒಳಗಾಗಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ಲನ್ನು ಕಟ್ಟದಿದ್ದಲ್ಲಿ ಬಿಜಿಲಿ ಬಿಲ್ಮಾಫಿ ಯೋಜನೆಯ ಹೊಸ ನಿಯಮದ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ವಿದ್ಯುತ್ ಪಿಲ್ಲನ್ನು ಕಟ್ಟುವುದು ಬಾಕಿ ಉಳಿದಿದ್ದರೆ ಕೂಡಲೇ ನಿಮ್ಮ ಹತ್ತಿರದ ವಿದ್ಯುತ್ ವಿಭಾಗ ಕಚೇರಿಗೆ ಭೇಟಿ ನೀಡಿ ಹಾಗೂ ಬಾಕಿ ಹಣವನ್ನು ಭರ್ತಿ ಮಾಡಿ.
ಈ ಯೋಜನೆಯಿಂದ ಮುಖ್ಯವಾಗಿ ಗ್ರಾಮೀಣ ಭಾಗದ ರೈತರಿಗೆ ಸಹಾಯವಾಗಲಿದೆ. ಬಿಜ್ಲಿ ಬಿಲ್ ಮಾಫಿ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾದ ರೈತರು ಎಂದರೆ ವಿದ್ಯುತ್ ಕೊಳವೆಬಾವಿಯನ್ನು ಹೊಂದಿದವರು, ವಿದ್ಯುತ್ ಹಣವನ್ನು ಪಾವತಿಸಲು ಸಾಧ್ಯವಾಗದವರು, ಸಂಕಷ್ಟದಲ್ಲಿ ಸಿಲುಕಿರುವವರು ಇಂತಹ ಸಮಸ್ಯೆಯನ್ನು ಹೊಂದಿದ್ದು, ಕೂಡ ಮಾರ್ಚ್ 31ರ ಒಳಗಾಗಿ ಹಳೆಯ ಬಾಕಿಯನ್ನು ತುಂಬಿದವರು ಏಪ್ರಿಲ್ ಒಂದರ ನಂತರದ ವಿದ್ಯುತ್ ಬಿಲ್ಲನ್ನು ಕಟ್ಟ ಬೇಕಾಗಿಲ್ಲ.
ಈಗಾಗಲೇ ಈ ಯೋಜನೆಯನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಪ್ರಾಯೋಗಿಕ ಹಂತದ ಪ್ರಯೋಜನವನ್ನು ಪರಿಶೀಲಿಸಿದ ಬಳಿಕ ಎಲ್ಲ ರಾಜ್ಯಗಳಲ್ಲಿಯೂ ವಿದ್ಯುತ್ ಬಿಲ್ ಅನ್ನು ಕಡಿತಗೊಳಿಸುವ ಈ ಹೊಸ ಯೋಜನೆಯನ್ನು ಜಾರಿಗೆ ತರಬಹುದು. ಇದರಿಂದ ರಾಜ್ಯದ ಅನೇಕ ಬಡ ರೈತರಿಗೆ ಸಹಾಯವಾಗಲಿದೆ.