ಸರ್ಕಾರದಿಂದ ಬಡ ಕುಟುಂಬಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ತಮ್ಮದೇ ಸ್ವಂತ ದ್ವಿಚಕ್ರ ವಾಹನವನ್ನು ಹೊಂದುವುದು ಹಲವಾರು ಜನರ ಕನಸು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಬೈಕ್ ಅನ್ನು ಖರೀದಿಸುವುದು ಕನಸಾಗಿ ಉಳಿದು ಬಿಡುತ್ತದೆ. ಇಂತಹ ಕನಸನ್ನು ನನಸು ಮಾಡಲು, ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕದ ಜನರ ಹಿತಾಸಕ್ತಿಯನ್ನು ಆಧರಿಸಿ ಉಚಿತವಾಗಿ ದ್ವಿಚಕ್ರ ವಾಹನವನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸರ್ಕಾರದ ಈ ಹೊಸ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ನಿಗದಿಪಡಿಸಿದ ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ಎಲ್ಲಾ ದಾಖಲಾತಿಗಳು ಕುರಿತಾದ ಮಾಹಿತಿಯನ್ನು ಈ ಬರಹದಲ್ಲಿ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ, ಇಂದಿನವರೆಗೂ ಒಮ್ಮೆಯೂ ಸ್ವಂತ ವಾಹನವನ್ನು ಹೊಂದಿರುವ ಕುಟುಂಬದ ಜನರಲ್ಲಿ ತಮ್ಮ ಮನೆಯಲ್ಲಿಯೂ ತಮ್ಮದೇ ಸ್ವಂತ ದ್ವಿಚಕ್ರ ವಾಹನ ಇರಬೇಕು ಎಂದು ಆಸೆ ಇರುತ್ತದೆ.
ಸ್ವಂತ ವಾಹನದಲ್ಲಿ ಓಡಾಡುವುದು ಕೇವಲ ಶೋಕಿಯ ವಿಚಾರವಲ್ಲ. ಉದ್ಯೋಗ ಅಥವಾ ಕೆಲಸ ಕಾರ್ಯಗಳಲ್ಲಿ ಸಮಯವನ್ನು ಉಳಿಸುವ, ಒಂದೆಡೆಯಿಂದ ಇನ್ನೊಂದಡೆ ಬಾಡಿಗೆ ನೀಡದೆ ಸಣ್ಣ ಪುಟ್ಟ ವಸ್ತುಗಳನ್ನು ಸಾಗಿಸುವ ಅನಿವಾರ್ಯತೆಯ ಸಾರಥಿಯೂ ಹೌದು. ಆದರೆ ಏರಿದ ಬೆಲೆಯಿಂದಾಗಿ ಬೈಕ್ ತಮಗೆ ಕೈಗೆಟುಕುವುದಿಲ್ಲ ಎಂದು ಆಸೆಯನ್ನು ಮನಸ್ಸಿನಲ್ಲಿ ಹುದುಗಿಸಿಕೊಂಡು ಸುಮ್ಮನಿರುತ್ತಾರೆ. ತಮ್ಮ ಬಳಿಯೂ ಬೈಕ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುತ್ತಾ ಜೀವನದ ಕಾಲವನ್ನು ತಳ್ಳುತ್ತಿರುತ್ತಾರೆ.
ಹೀಗೆ ವಾಹನವನ್ನು ಪಡೆಯಲು ಆಸಕ್ತ ಹಾಗೂ ಅರ್ಹ ಜನರಿಗಾಗಿ ಇಲ್ಲಿದೆ ಓದಲೇ ಬೇಕಾದ ಮಾಹಿತಿ. ಸರ್ಕಾರವು ದ್ವಿಚಕ್ರ ವಾಹನವನ್ನು ಮುಂಬರುವ ದಿನಗಳಲ್ಲಿ ಎಲ್ಲಾ ವರ್ಗದ ಜನರಿಗೂ ವಿತರಣೆ ಮಾಡಲಿದೆ. ದ್ವಿಚಕ್ರ ವಾಹನವನ್ನು ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಒಂದು ಸುದ್ದಿ. ಇತ್ತೀಚಿಗಷ್ಟೇ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಹಮ್ಮಿಕೊಂಡ ಕಾರ್ಯಕ್ರಮ ಒಂದರಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ ಅನೇಕ ಅಭ್ಯರ್ಥಿಗಳಿಗೆ ದ್ವಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ.
ಮಾರ್ಚ್ 9ನೇ ತಾರೀಕು ಹಮ್ಮಿಕೊಳ್ಳಲಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮದಲ್ಲಿ ಗಂಗಾ ಕಲ್ಯಾಣ ಯೋಜನೆಯ ಕಾರ್ಯಕ್ರಮವನ್ನು e-RUPI ಮುಖಾಂತರ ಅನುಷ್ಠಾನಕ್ಕೆ ತಂದು ಇದರ ಜೊತೆಯಲ್ಲಿಯೇ ಅನೇಕ ನಿಯಮಗಳ ಅನ್ವಯವಾಗಿ ಸವಲತ್ತುಗಳನ್ನು ವಿತರಿಸಲಾಗಿದೆ.
ಸರ್ಕಾರದಿಂದ ದ್ವಿಚಕ್ರ ವಾಹನವನ್ನು ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆ :
ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳು ಸೇರಿ ಫಲಾನುಭವಿಗಳಿಗೆ ಡಾ. ಬಾಬು ಗಜಜೀವನ್ ರಾಮ್ ಸ್ವ ಉದ್ಯೋಗ ಯೋಜನೆಯ ಅಡಿಯಲ್ಲಿ 28,000 ದ್ವಿಚಕ್ರ ವಾಹನಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಈ ಯೋಜನೆಯಿಂದ ಲಾಭವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ದ್ವಿಚಕ್ರವಾಹನವನ್ನು ತಮ್ಮದಾಗಿಸಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ದಾಖಲಾತಿಗಳು :
* ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಜಾತಿ ಪ್ರಮಾಣ ಪತ್ರದ ದೃಢೀಕರಣ ಪ್ರತಿ
* ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ನ ದೃಢೀಕರಣ ಪ್ರತಿ
* ಆಧಾರ್ ಕಾರ್ಡ್ ನ ದೃಢೀಕರಣ ಪ್ರತಿ
* ಚಾಲನ ಪರವಾನಗಿ ಮತ್ತು ಬ್ಯಾಡ್ಜ್ ಪ್ರತಿ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಸಂಭಂದಪಟ್ಟ ಕಚೇರಿಗೆ ಭೇಟಿ ನೀಡಿ, ಸಂಕ್ಷಿಪ್ತ ಮಾಹಿತಿಯನ್ನು ಪಡೆದುಕೊಂಡು ಈ ಮೇಲೆ ತಿಳಿಸಿದಂತೆ ಎಲ್ಲಾ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.