ದೇಶದಲ್ಲಿ 2005ರಲ್ಲಿ ಹಿಂದು ಉತ್ತರಾಧಿಕಾರದ ಕಾಯ್ದೆಯಲ್ಲಿ ಒಂದು ತಿದ್ದುಪಡಿ ನಡೆಯಿತು. ಇದು ದೇಶದಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿತು. ಅದೇನೆಂದರೆ, ಈ ಒಂದು ತಿದ್ದುಪಡಿ ಆದ ನಂತರ ಸಂವಿಧಾನವು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಕೂಡ ಗಂಡು ಮಕ್ಕಳಷ್ಟೇ ಅಧಿಕಾರ ಹೊಂದಿರುತ್ತಾರೆ ಆಸ್ತಿ ಇಬ್ಬರಲ್ಲೂ ಸಮಾನವಾಗಿ ವಿಭಾಗ ಆಗಬೇಕು ಎನ್ನುವ ತೀರ್ಪನ್ನು ಎತ್ತಿ ಹಿಡಿಯಿತು.
ಇದಾದ ಬಳಿಕ ಎಲ್ಲೆಡೆ ಆಸ್ತಿ ವಿಭಾಗದ ಕುರಿತು ಮನಸ್ತಾಪಗಳು ಹೆಚ್ಚಾದವು. ಆದರೆ 2005ಕ್ಕೂ ಮುಂಚಿನ ಪರಿಸ್ಥಿತಿ ಬೇರೆ ಇತ್ತು. 2005ಕ್ಕೂ ಮುಂಚೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಅಧಿಕಾರ ಇದೆ ಎನ್ನುವ ನಿಯಮ ಇರಲಿಲ್ಲ, ಒಂದು ವೇಳೆ ತಂದೆ ಬಯಸಿದರೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ಪಾಲು ಸಿಗುತ್ತಿತ್ತು.
ಆದರೆ ಹೆಣ್ಣು ಮಕ್ಕಳು ಕೂಡ ಹುಟ್ಟಿನಿಂದಲೇ ತಂದೆ ಆಸ್ತಿಯಲ್ಲಿ ಅದರಲ್ಲೂ ಪಿತ್ರಾರ್ಜಿತ ಆಸ್ತಿಯನ್ನು ಕೂಡ ಸಮಾನ ಅಧಿಕಾರ ಹೊಂದಿರುತ್ತಾರೆ ಎನ್ನುವುದು 2005ರಲ್ಲಿ ಆದ ತಿದ್ದುಪಡಿ ಇಂದ ಇನ್ನೂ ಬಲವಾಯಿತು. ಆದರೆ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೆ ತಂದೆ ತೀರಿ ಹೋದ ನಂತರ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ತಿಳಿಸದಂತೆ ಅವರ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ.
ವಿಭಾಗ ಮಾಡುವ ವೇಳೆ ಹೆಣ್ಣು ಮಕ್ಕಳಿಗೆ ಮಾಹಿತಿಯನ್ನು ಕೊಡದೆ ಎಲ್ಲವನ್ನು ತಮ್ಮ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿಕೊಂಡಿರುತ್ತಾರೆ ಅಥವಾ ಕೆಲವೊಮ್ಮೆ ಮಾರಾಟ ಕೂಡ ಮಾಡಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಹೇಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹಲವರ ಪ್ರಶ್ನೆ ಇದೆ. ಆದರೆ ಕಾನೂನಿನಲ್ಲಿ ಇದಕ್ಕೆ ಖಂಡಿತವಾಗಿಯೂ ಅವಕಾಶ ಇದೆ.
2005ರ ಹಿಂದಿನ ಪಿತ್ರಾರ್ಜಿತ ಆಸ್ತಿ ಹೊರತುಪಡಿಸಿ ತಂದೆಯ ಸ್ವಯಾರ್ಜಿತ ಆಸ್ತಿ, ತಂದೆ ಯಾರ ಹೆಸರಿಗೂ ಮಾಡಿಕೊಡದೆ ಹಾಗೆ ಉಳಿದು ಹೋಗಿ ಅವರು ಮರಣ ಹೊಂದಿದ್ದರೆ ಅಥವಾ 2005ರ ಕಾನೂನಿನಂತೆ ನಂತರ ಪಿತ್ರಾರ್ಜಿತ ಆಸ್ತಿ ವಿಭಾಗ ಆದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಅದರ ಮಾಹಿತಿ ಕೊಡದೆ ವಿಭಾಗ ಮಾಡಿದ್ದರೆ ಮತ್ತು 2005ರ ತಿದ್ದುಪಡಿ ಆದ ನಂತರವೂ ತಂದೆ ತಾವು ಸಂಪಾದನೆ ಮಾಡಿದ್ದ ಸ್ವಯಾರ್ಜಿತ ಆಸ್ತಿಯನ್ನು ಸಹ ಹಾಗೆ ಬಿಟ್ಟು ಮ.ರಣ ಹೊಂದಿದ್ದರೆ ಈ ಎಲ್ಲದರಲ್ಲೂ ಸಹ ಹೆಣ್ಣು ಮಕ್ಕಳಿಗೆ ಪಾಲು ಕೊಡಲೇಬೇಕು.
ಒಂದು ವೇಳೆ ಅವರು ರಿಜಿಸ್ಟರ್ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿದ್ದರೂ ಕೂಡ ಹೆಣ್ಣು ಮಕ್ಕಳು ನ್ಯಾಯದಲ್ಲಿ ಧಾವೇ ಕೊಡಿ ನ್ಯಾಯ ಪಡೆಯಬಹುದು. ಅವರು ಬಹಳ ತಡವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಕೂಡ ಅದಕ್ಕೆ ಸಕಾರಣವನ್ನು ತಿಳಿಸುವ ಮೂಲಕ ಕೋರ್ಟ್ ಮನ ಒಲಿಸಬಹುದು. ಆದರೆ ಹೆಣ್ಣು ಮಕ್ಕಳು ಕೆಲವೊಮ್ಮೆ ಪ್ರೀತಿ ವಿಶ್ವಾಸಕ್ಕಾಗಿ ತಂದೆಯ ಕುಟುಂಬದಿಂದ ತಮಗೆ ಸಿಗಬೇಕಾಗಿದ್ದ ಪಾಲನ್ನು ಬಿಟ್ಟು ಕೊಟ್ಟಿರುತ್ತಾರೆ.
ಕೆಲವೊಮ್ಮೆ ಬಾಯಿ ಮಾತಿನ ಮೂಲಕ ಕೆಲವೊಮ್ಮೆ ಹಕ್ಕು ಬಿಡುಗಡೆ ಪತ್ರ ಮಾಡಿಕೊಡುವ ಮೂಲಕ ಮತ್ತು ಕೆಲವೊಮ್ಮೆ ಈ ರೀತಿ ಬಿಟ್ಟುಕೊಟ್ಟ ಆಸ್ತಿ ಮೌಲ್ಯದ ಬೇರೆ ಉಡುಗೊರೆಯನ್ನು ಪಡೆಯುವ ಮೂಲಕ ರಿಲೀಸ್ ಡೀಡ್ ಮಾಡಿ ಕೊಟ್ಟಿರುತ್ತಾರೆ. ಈ ರೀತಿ ಮಾಡಿ ಕೊಟ್ಟಿದ್ದ ಸಂದರ್ಭದಲ್ಲಿ ಅವರು ಮತ್ತೆ ಆಸ್ತಿಯಲ್ಲಿ ಭಾಗ ಕೇಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಕೀಲರ ಬಳಿ ಮಾಹಿತಿ ಪಡೆದು ನಂತರ ಕ್ರಮ ಕೈಗೊಳ್ಳಬಹುದು.