ಕನ್ನಡ ಸ್ಪಷ್ಟವಾಗಿ ಮಾತಾಡೋಕೆ ಬಂದ್ರೆ ಸಾಕು ಗೌರ್ಮೆಂಟ್ ವೆಬ್ ಸೈಟ್ ನಲ್ಲಿ ಕೆಲಸ ಮಾಡುವ ಮೂಲಕ ತಿಂಗಳಿಗೆ 25,000 ದುಡಿಯಬಹುದು.! ವರ್ಕ್ ಫ್ರಂ ಹೋಂ

 

ಗೃಹಿಣಿಯರು ವಿದ್ಯಾರ್ಥಿಗಳು ಅಥವಾ ನಿವೃತ್ತಿ ಹೊಂದಿದವರು ಸಹ ಜೀವನ ನಿರ್ವಹಣೆಗಾಗಿ ಅವರ ದಿನನಿತ್ಯದ ಖರ್ಚಿಗಾಗಿ ಆದರೂ ದುಡಿಯುವ ಅನಿವಾರ್ಯತೆ ಇರುತ್ತದೆ. ಎಲ್ಲರಿಗೂ ಸಹ ಕಂಪನಿಗಳಿಗೆ ಹೋಗಿ ಕೆಲಸ ಮಾಡುವ ಅನುಕೂಲತೆ ಇರುವುದಿಲ್ಲ. ಅಂತಹ ಸಮಯದಲ್ಲಿ ಮನೆಯಲ್ಲಿ ಇದ್ದುಕೊಂಡು ಉದ್ಯೋಗ ಮಾಡಲು ಇಚ್ಚಿಸುವವರು ಈಗ ಆನ್ಲೈನ್ ಅಲ್ಲಿಯೇ ಸಿಗುವ ಯಾವುದಾದರೂ ಒಂದು ಉದ್ಯೋಗ ಮಾಡಬಹುದು.

ಆದರೆ ಅನೇಕರು ಈ ರೀತಿ ಕೆಲಸ ತೆಗೆದುಕೊಂಡು ನಂತರ ಅದಕ್ಕೆ ಸಲ್ಲಬೇಕಾದ ಸಂಬಳ ಕೊಡದೆ ವಂಚನೆ ಮಾಡುತ್ತಿರುತ್ತಾರೆ, ಅಥವಾ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡುತ್ತಾರೆ. ಅವರನ್ನು ಸಂಪರ್ಕಿಸುವುದೇ ದೊಡ್ಡ ಕಷ್ಟವಾಗಿರುತ್ತದೆ. ಆದ್ದರಿಂದ ಸಿಕ್ಕಸಿಕ್ಕ ಕೆಲಸಗಳನ್ನು ಒಪ್ಪಿಕೊಂಡು ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಸರ್ಕಾರದ ಈ ವೆಬ್ಸೈಟ್ಗಳಲ್ಲಿ ಮನೆಯಲ್ಲಿ ಇದ್ದುಕೊಂಡು ಕೆಲಸ ಮಾಡುವ ಮೂಲಕ ತಿಂಗಳಿಗೆ 25 ಸಾವಿರದವರೆಗೂ ಕೂಡ ದುಡಿಯಬಹುದು.

ಸದ್ಯಕ್ಕೀಗ ಭಾರತ ಸರ್ಕಾರದ ಒಂದು ಪ್ರಮುಖ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತದ ವಿಶಿಷ್ಟ ಗುರಿತಿನ ಪ್ರಾಧಿಕಾರ ಅಂದರೆ UIDAI ಇಂತಹ ಒಂದು ಅವಕಾಶಗಳನ್ನು ಆನ್ಲೈನ್ ಮೂಲಕ ಉದ್ಯೋಗ ಮಾಡಲು ಇಚ್ಛಿಸುವವರಿಗಾಗಿ ಕೊಡುತ್ತಿದೆ. ಈಗಾಗಲೇ ಈ ಹುದ್ದೆಗಳನ್ನು ಮಾಡಲು ಇಚ್ಚಿಸುವವರ ಕಡೆಯಿಂದ ಅರ್ಜಿಗಳನ್ನು ಕೂಡ ಸ್ವೀಕರಿಸುತ್ತಿದೆ. ಇದಕ್ಕೆ ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಕುವುದು ಹೇಗೆ ಮತ್ತು ಯಾವ ರೀತಿ ಕೆಲಸ ಇರುತ್ತದೆ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತಿದ್ದೇವೆ.

ಈ ಹುದ್ದೆಗಳಿಗೆ ಅರ್ಜಿ ನೀವು ಮೊಬೈಲ್ ಮೂಲಕ ಅಥವಾ ಹತ್ತಿರದಲ್ಲಿರುವ ಸೈಬರ್ ಸೆಂಟರ್ಗಳಿಗೆ ಹೋಗಿ ಅಥವಾ ನಿಮ್ಮ ಪರ್ಸನಲ್ ಕಂಪ್ಯೂಟರ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ.

● ಮೊದಲಿಗೆ ಗೂಗಲ್ ಗೆ ಹೋಗಿ UIDAI ಎಂದು ಸರ್ಚ್ ಮಾಡಿ. ನಿಮ್ಮ ಆಯ್ದ ಭಾಷೆಗಳ ಮೂಲಕ ಓಪನ್ ಮಾಡುವ ಅವಕಾಶ ಇರುತ್ತದೆ. ನಿಮ್ಮ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
● ನಂತರ ಓಪನ್ ಆಗುವ ಹೊಸ ಪೇಜ್ ಅಲ್ಲಿ ಎರಡನೇ ಆಪ್ಷನಲ್ಲಿ about UIDAI ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ಅದು ಓಪನ್ ಆದಮೇಲೆ ಕೊನೆಯಲ್ಲಿ ಇಂಟರ್ನ್ ಶಿಪ್ ವಿಥ್ UADAI ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.

● ಅದರ ಮೇಲೆ ಕ್ಲಿಕ್ ಮಾಡಿದಾಗ ಈ ಆನ್ಲೈನ್ ಉದ್ಯೋಗದ ಕುಳಿತಿರುವ ಕಂಪ್ಲೀಟ್ ಡೀಟೇಲ್ ದೊರೆಯುತ್ತದೆ, ಆ ವಿವರಗಳನ್ನು ಪೂರ್ತಿಯಾಗಿ ಓದಿಕೊಳ್ಳಿ. ಅದರಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಳಲಾಗಿರುವ ಅರ್ಹತೆ ಸಮೇತವಾಗಿ ಕೆಲಸ ಮಾಡುವ ವಿಧಾನ, ಈ ಹುದ್ದೆಗಳನ್ನು ನೀಡುತ್ತಿರುವ ಉದ್ದೇಶ ಇವುಗಳ ಕುರಿತು ಕೂಡ ಮಾಹಿತಿ ಇರುತ್ತದೆ.
● ಇದಕ್ಕೆ ಅರ್ಜಿ ಫಾರಂ ಕೂಡ ಲಭ್ಯವಿರುತ್ತದೆ, ಅದನ್ನು ಪ್ರಿಂಟೌಟ್ ತೆಗೆದುಕೊಂಡು ನೀವು ನಿಮ್ಮ ಬರಹದ ಮೂಲಕ ಅದನ್ನು ಫಿಲ್ ಮಾಡಿ ನಂತರ ಅದರ ಫೋಟೋ ಕಾಪಿಯನ್ನು ನೀಡಲಾಗಿರುವ ಇಮೇಲ್ ಐಡಿಗೆ ರೆಸ್ಯೂಮ್ ಜೊತೆ ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದು ವಿದ್ಯಾರ್ಥಿಗಳಿಗಾಗಿ ನೀಡಿರುವ ಸುವರ್ಣವಕಾಶವಾಗಿದೆ. ಸರ್ಕಾರವು ವಿದ್ಯಾರ್ಥಿಗಳಿಗೆ ಶಿಕ್ಷಣದ ಹಂತದಲ್ಲಿಯೇ ಒಂದು ಜವಾಬ್ದಾರಿಯುತ ಕೆಲಸ ನಿರ್ವಹಿಸುವ ಸ್ಕಿಲ್ ಬೆಳೆಸಿಕೊಳ್ಳಲು ಪ್ರೋತ್ಸಾಹಿಸುವ ಸಲುವಾಗಿ ಈ ರೀತಿ ಉದ್ಯೋಗಾವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಅಂತಿಮ ವರ್ಷದಲ್ಲಿರುವ ಪದವಿ ಹಾಗೂ ನಾಲ್ಕು ವರ್ಷಗಳ ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು ಅಥವಾ ಈಗಷ್ಟೇ ಪದವಿಗಳನ್ನು ಪೂರ್ತಿಗೊಳಿಸಿರುವವರು ಇವುಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಇರುವ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment