ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ಯಾರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ ಅವರು ತಪ್ಪದೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜುಲೈ 14 ರ ವರೆಗೂ ಕೂಡ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ಸುಲಭವಾಗಿ ಆಧಾರ್ ಅಪ್ಡೇಟ್ ಮಾಡಿಸಬಹುದು. ಇದರ ಸುಲಭ ಹಂತಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅಲ್ಲಿ ಗೂಗಲ್ ಗೆ ಹೋಗಿ Aadhar ಎಂದು ಟೈಪ್ ಮಾಡಿ ಸರ್ಚ್ ಕೊಡಿ. My Aadhar ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಆಧಾರ್ ನ ಅಧಿಕೃತ ವೆಬ್ಸೈಟ್ ತಲುಪುತ್ತೀರಿ.
● ಆ ಪೇಜ್ ಅನ್ನು ಸ್ಕ್ರೋಲ್ ಮಾಡಿದರೆ Aadhar update ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಕೊನೆಯ ಆಯ್ಕೆ ಆದ Update Demographics Data & check status ಎನ್ನುವುದನ್ನು ಕ್ಲಿಕ್ ಮಾಡಿ
● ಲಾಗಿನ್ ಆಪ್ಷನ್ ಕ್ಲಿಕ್ ಮಾಡಿ ನೀವು ಯಾರ ಆಧಾರ್ ಅಪ್ಡೇಟ್ ಮಾಡುತ್ತಿದ್ದೀರಾ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಕೆಳಗೆ ಕ್ಯಾಪ್ಚರ್ ಕೋಡ್ ಇರುತ್ತದೆ ಅದನ್ನು ಕೂಡ ಹಾಕಬೇಕು. Send OTP ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ ಅದನ್ನು Enter OTP ಮಾಡಿ Log in ಆಗಬೇಕು.
● ಆಧಾರ್ ವೆಬ್ಸೈಟ್ ನ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಆಧಾರ್ ನ ಎಲ್ಲಾ ಸರ್ವಿಸ್ ಗಳು ಕೂಡ ಸಿಗುತ್ತವೆ.
● Document update ಎನ್ನುವ ಸರ್ವೀಸ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.
● ಮುಂದಿನ ಪೇಜ್ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಎಲ್ಲಾ ಮಾಹಿತಿಯು ಸ್ಕ್ರೀನ್ ಮೇಲೆ ಕಾಣುತ್ತದೆ ಅವೆಲ್ಲ ಸರಿಯಾಗಿದ್ದರೆ ವೇರಿಫೈ ಮಾಡಿ next ಆಪ್ಷನ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ದಾಖಲೆಗಳನ್ನು ಸಲ್ಲಿಸುವುದಕ್ಕೆ ಗೈಡ್ಲೈನ್ಸ್ ಗಳು ಇರುತ್ತವೆ ಆ ಪ್ರಕಾರವಾಗಿ ನೀವು ನಿಮ್ಮ ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.ಆ ದಾಖಲೆಗಳ ಕಾಪಿ 2MB ಒಳಗೆ ಇರಬೇಕು ಎನ್ನುವ ನಿಯಮವಿದೆ.
● please upload proof of identity (POI) documents ಆಪ್ಷನ್ ಇರುತ್ತದೆ ಅದರಲ್ಲಿ ಹಲವಾರು ಐಡೆಂಟಿಟಿ ಫ್ರೂಫ್ ಗಳ ಲಿಸ್ಟ್ ಇರುತ್ತದೆ ನಿಮ್ಮ ಬಳಿ ಯಾವುದು ಇದೆ ಅದನ್ನು ಸೆಲೆಕ್ಟ್ ಮಾಡಿ.
● ಮುಂದಿನ ಹಂತದಲ್ಲಿ view details & upload document ಎನ್ನುವುದನ್ನು ಕ್ಲಿಕ್ ಮಾಡಿ continue to upload ಎನ್ನುವುದನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಫೋನ್ ನಲ್ಲಿ ಸ್ಕ್ಯಾನ್ ಆಗಿರುವ ಅಥವಾ ಫೋಟೋಗ್ರಾಫಿ ಆಗಿ ಇರುವ ಆ ದಾಖಲೆಗಳನ್ನು ಸೆಲೆಕ್ಟ್ ಮಾಡಿ ಅಪ್ಲೋಡ್ ಮಾಡಬೇಕು.
● ನೀವು ಕೊಟ್ಟಿರುವ ಮಾಹಿತಿಗಳು ಸರಿ ಇದೆಯೇ ಎನ್ನುವ ಘೋಷಣೆ ಬರುತ್ತದೆ ಅದಕ್ಕೆ ಒಪ್ಪಿದ್ದೇನೆ ಎಂದು ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
● ಮುಂದಿನ ಹಂತದಲ್ಲಿ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು, ಜುಲೈ 14ರ ಒಳಗೆ ಈ ಪ್ರಕ್ರಿಯೆ ಪೂರ್ತಿ ಉಚಿತವಾಗಿತ್ತು ಆದರೆ ಈಗ ನೀವು ನೆಟ್ ಬ್ಯಾಂಕಿಂಗ್ ಮೂಲಕ ನಿಗದಿತ ಶುಲ್ಕ ಪಾವತಿ ಮಾಡಬೇಕು.
● ಶುಲ್ಕ ಪಾವತಿ ಆದ ನಂತರ download aknowledgment ಎಂದು ಬರುತ್ತದೆ. ಇದನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ನಿಮ್ಮ ಆಧಾರ್ ಸ್ಟೇಟಸ್ ಚೆಕ್ ಮಾಡಲು ಇದರಲ್ಲಿ ರೆಫೆರೆನ್ಸ್ ನಂಬರ್ ಬೇಕಾಗುತ್ತದೆ. ಈ ರೀತಿಯಾಗಿ ಮೊಬೈಲ್ ಫೋನ್ ನಲ್ಲಿ ಆಧಾರ್ ಗೆ ಡಾಕ್ಯೂಮೆಂಟ್ ಗಳನ್ನು ಅಪ್ಲೋಡ್ ಮಾಡಿ ಅಪ್ಡೇಟ್ ಮಾಡಿಸಬಹುದು.