Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರೈತರಿಗೆ ಸಿಹಿಸುದ್ದಿ, ಕೃಷಿಹೊಂಡ ನಿರ್ಮಾಣ ಮಾಡಲು 75,000 ಸಹಾಯ ಧನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

Posted on August 11, 2023 By Kannada Trend News No Comments on ರೈತರಿಗೆ ಸಿಹಿಸುದ್ದಿ, ಕೃಷಿಹೊಂಡ ನಿರ್ಮಾಣ ಮಾಡಲು 75,000 ಸಹಾಯ ಧನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

 

ಮಳೆಗಾಲದಲ್ಲಿ (Rain water) ಕೃಷಿ ಜಮೀನಿನಲ್ಲಿ ನೀರನ್ನು ಕೃಷಿಕೊಂಡದ (agricultural pit ) ಮೂಲಕ ಸಂಗ್ರಹಣೆ ಮಾಡಿ ಬಳಿಕ ನೀರಿನ ಅಭಾವ ಇರುವ ಸಮಯದಲ್ಲಿ ಅದನ್ನು ರೈತರು ಬಳಸಿಕೊಳ್ಳಲು ಕೃಷಿ ಹೊಂಡಗಳು ಸಹಾಯ ಮಾಡುತ್ತದೆ. ಹೂವು, ಹಣ್ಣು, ತರಕಾರಿ ಮತ್ತು ಸಾಂಬಾರ್ ಪದಾರ್ಥಗಳನ್ನು ಬೆಳೆಯುವ ರೈತರುಗಳು ತಮ್ಮ ಜಮೀನಿನಲ್ಲಿ ಈ ರೀತಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಣೆ ಮಾಡುತ್ತಿದ್ದಾರೆ.

ತೋಟಗಾರಿಕೆ ಮತ್ತು ನೀರಾವರಿ ಉತ್ತೇಜಿಸುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು (Government) ಕೂಡ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ಸಹಾಯಧನ ನೀಡಿ ನೆರವಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ (National horticulture mission) 2005-06ನೇ ಸಾಲಿನ 10ನೇ ಪಂಚವಾರ್ಷಿಕ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಸಹಾಯ ನೀಡುತ್ತಿವೆ.

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ನೀರಿನ ಪ್ರಾಮುಖ್ಯವನ್ನು ಅರಿತು ಮಳೆಗಾಲದಲ್ಲಿ ಮತ್ತು ನೀರಿನ ಪ್ರಮಾಣ ಹೆಚ್ಚಾಗಿದ್ದ ಸಮಯದಲ್ಲಿ ಅದನ್ನು ಸಂಗ್ರಹಿಸಿಕೊಂಡು ಬಳಿಕ ಬೇಸಿಗೆ ಕಾಲದಲ್ಲಿ ಅಥವಾ ನೀರಿನ ಅಭಾವ ಉಂಟಾದಾಗ ರೈತರು ಅದನ್ನು ಸದುಪಯೋಗ ಮಾಡಿಕೊಳ್ಳಲು ಉತ್ತೇಜಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ಅದರ ವೆಚ್ಚದ ಶೇಕಡ 50% ಪ್ರತಿಶತದವರೆಗೂ ಕೂಡ ಸರ್ಕಾರ ಸಹಾಯಧನ ನೀಡುತ್ತಿದೆ.

ರಾಜ್ಯ ಸರ್ಕಾರವು ಈ ವೆಚ್ಚದ 35%-50% ಭರಿಸುತ್ತದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೃಷಿ ಹೊಂಡ ನಿರ್ಮಾಣ ಅಥವಾ ನೀರು ಹೊಂಡ ನಿರ್ಮಾಣಕ್ಕಾಗಿ ಬೇಕಾಗುವ ತಾಡಪತ್ರಿ ಅಥವಾ ನೀರು ನಿಲ್ಲಿಸಲು ಬೇಕಾಗುವ ಪ್ಲಾಸ್ಟಿಕನ್ನು ಖರೀದಿಸಿಕೊಳ್ಳಲು ಜೊತೆಗೆ ಕೂಲಿ ಕಾರ್ಮಿಕರಿಂದ ಅಥವಾ ಯಂತ್ರಗಳ ಸಹಾಯದಿಂದ ಬದು ನಿರ್ಮಾಣ ಮಾಡಿ ನೀರನ್ನು ಕ್ರೋಢೀಕರಿಸಿ ಕೃಷಿಗೆ ಬಳಸಿಕೊಳ್ಳಲು ನಿರ್ಮಿಸುವ ವೈಯಕ್ತಿಕ ನೀರು ಸಂಗ್ರಹಣೆ ಘಟಕಕ್ಕೆ ಅದರ ನಿರ್ಮಾಣ ಖರ್ಚಿಗಾಗಿ ರೈತರಿಗೆ 75,000 ವರೆಗೂ ಕೂಡ ಈ ಸಹಾಯಧನ ಸಿಗಲಿದೆ.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

ಇದನ್ನು ಪಡೆದುಕೊಳ್ಳಲು ರೈತರು ದಾಖಲೆಗಳ ಸಮೇತ ಗ್ರಾಮ ಪಂಚಾಯಿತಿ ಅಥವಾ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ / ಸಹಾಯಕ ತೋಟಗಾರಿಕೆ ಅಧಿಕಾರಿ / ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಭೇಟಿ ಮಾಡಿದರೆ ಈ ಯೋಜನೆ ಕುರಿತು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ.

ಯೋಜನೆ ಕುರಿತು ಇರುವ ನಿಯಮಗಳು:-

● ಈ ಯೋಜನೆಯಲ್ಲಿ ಸಹಾಯಧನ ಪಡೆಯಲು ರೈತರು 20×20×3 ಮೀ ಅಳತೆಯ 1:1 ಇಳಿಜಾರಿನಂತೆ ಕೃಷಿ ಹೊಂಡವನ್ನು ಕಡ್ಡಾಯವಾಗಿ ನಿರ್ಮಿಸಬೇಕು.
● ಈ ಕೃಷಿಹೊಂಡದ ನೀರು ಶೇಖರಣೆ ಸಾಮರ್ಥ್ಯ 1200 ಘ.ಮೀ ಇರಬೇಕು.

● ತಳಭಾಗದಲ್ಲಿ ನೀರು ಇಂಗಬಾರದು ಎನ್ನುವ ಕಾರಣಕ್ಕಾಗಿ ನಿರ್ಮಿಸಿರುವ ಕೃಷಿ ಹೊಂಡಕ್ಕೆ 300 ಮೈಕ್ರಾನ್ ISI ಗುಣಮಟ್ಟದ ಪಾಲಿಥೀನ್ ಹೊದಿಕೆಯನ್ನು ಕೃಷಿ ಇಲಾಖೆಯು ಸೂಚಿಸಿರುವ ಏಜೆನ್ಸಿಯಿಂದಲೇ ಖರೀದಿಸಿ ರೈತರು ಬಳಸಿರಬೇಕು.
● ನೀರು ಸಂಗ್ರಹಣೆಯಾದಾಗ ಒಳಹರಿವಿಗಾಗಿ ಮತ್ತು ನೀರಿನ ಮಟ್ಟ ಹೆಚ್ಚಾದಾಗ ಹೆಚ್ಚುವರಿ ನೀರನ್ನು ಹೊರಗೆ ಹೋಗಲು ಔಟ್ಲೆಟ್ ನಿರ್ಮಾಣ ಮಾಡಬೇಕು.

● ಈಶಾನ್ಯದ 8 ರಾಜ್ಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯದ ರೈತರು ಅರ್ಹರಿದ್ದಲ್ಲಿ ಈ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
● ಕೇಂದ್ರಾಡಳಿತ ಪ್ರದೇಶಗಳಾದ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ ಹಿಮಾಚಲ ಪ್ರದೇಶ, ಉತ್ತರಖಾಂಡ ಈ ಪ್ರದೇಶಗಳಲ್ಲಿನ ರೈತರ ಕೂಡ ಈ ಸಹಾಯಧನ ಪಡೆಯಲು ಅರ್ಹರಿದರೆ ಅರ್ಜಿ ಸಲ್ಲಿಸಬಹುದು.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

Useful Information
WhatsApp Group Join Now
Telegram Group Join Now

Post navigation

Previous Post: ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!
Next Post: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ, ಆದ್ರೆ ಕಂಡಿಷನ್ ಅಪ್ಲೈ ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore