ಹಳ್ಳಿಯಲ್ಲಿ ಕೃಷಿ ಮಾಡುವ ರೈತನಿಗೆ (Farmer) ಇರುವ ಅನೇಕ ಸಮಸ್ಯೆಗಳ ಜೊತೆಗೆ ತನ್ನ ಸ್ವಂತ ಕೃಷಿ ಭೂಮಿಗೆ (Agricultur land) ಹೋಗಲು ದಾರಿ (road) ಇಲ್ಲದಿರುವುದು ಕೂಡ ಒಂದು ಸಮಸ್ಯೆ. ಈಗಲೂ ಕೂಡ ನಮ್ಮ ರಾಜ್ಯದಲ್ಲಿ ಅನೇಕ ರೈತರ ಅವರ ಭೂಮಿಗಳಿಗೆ ಹೋಗಲು ರಸ್ತೆ ಮಾರ್ಗ ಇಲ್ಲದಿರುವುದರಿಂದ ಮತ್ತೊಬ್ಬ ರೈತನ ಜಮೀನಿನ ಮೇಲೆ ತನ್ನ ಜಮೀನಿಗೆ ಹೋಗಬೇಕಾಗುತ್ತದೆ.
ಆ ರೈತನ ಜೊತೆ ಮನಸ್ತಾಪವಾದಾಗ, ಮಳೆ ಬಂದಾಗ, ಜಮೀನುಗಳಲ್ಲಿ ಬೆಳೆ ಇದ್ದಾಗ, ವಾಹನಗಳಲ್ಲಿ ಹೋಗುವುದು ಕಷ್ಟವಾಗಿರುತ್ತದೆ. ಈ ಸಮಸ್ಯೆಯನ್ನು ಅರಿತು 2017-18 ನೇ ಸಾಲಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವು (government) ನಮ್ಮ ಹೊಲ ನಮ್ಮ ದಾರಿ (Namma Hola namma Dari) ಎನ್ನುವ ಯೋಜನೆಯನ್ನು ರೂಪಿಸಿತ್ತು. ಈಗ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಯಲ್ಲಿರುವುದರಿಂದ ಯೋಜನೆಯನ್ನು ಪುನಶ್ಚೇತನಗೊಳಿಸಲಾಗಿದೆ.
ಯಾವ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲ ಅವರು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಹೊಲ ನಮ್ಮ ದಾರಿ ಯೋಜನೆಯ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ವತಿಯಿಂದ 25 ಕಿಲೋಮೀಟರ್ ವರೆಗೂ ಕೂಡ ರಸ್ತೆ ನಿರ್ಮಿಸಿ ಕೊಡಲಾಗುತ್ತದೆ. ಇದರ ಪ್ರಕಾರವಾಗಿ ರೈತನು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು, ಇದಕ್ಕಾಗಿ ಏನೆಲ್ಲ ದಾಖಲೆಗಳನ್ನು ಕೊಡಬೇಕು ಹಾಗೂ ಇದಕ್ಕೆ ನಿಯಮಗಳು ಏನಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ರೈತನು ಹೊಲದ ಸರ್ವೆ ನಂಬರ್, ಹೊಲದ ವಿಸ್ತೀರ್ಣ ಹಾಗೂ ಜಮೀನಿಗೆ ಸಂಬಂಧಪಟ್ಟ ಹಾಗೆ ಎಲ್ಲಾ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು.
● ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯ ಕುರಿತಾಗಿ ಚರ್ಚಿಸಿ ಅನುಮೋದನೆ ನೀಡಲಾಗುತ್ತದೆ.
● ಇದನ್ನು ವಾರ್ಷಿಕ ಕ್ರಿಯೆ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ್ ಸೇರಿಸುತ್ತದೆ.
● ಆ ಮೂಲಕ ನಿಮಗೆ ಅನುದಾನ ನೀಡುವ ಬಗ್ಗೆ ಚರ್ಚೆ ಮಾಡಿ ಸಾಮಾನ್ಯ ಸಭೆಯಲ್ಲಿ ಎಷ್ಟು ಅನುದಾನ ನೀಡಬೇಕು ಎನ್ನುವುದನ್ನು ಚರ್ಚಿಸಿ ಅಷ್ಟು ಹಣವನ್ನು ಮಂಜೂರು ಮಾಡಲಾಗುತ್ತದೆ.
ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!
ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಜಮೀನಿನ ಪೂರ್ಣ ಸರ್ವೆಯ ನಕ್ಷೆ
● ಜಮೀನಿನ ಸರ್ವೇ ನಂಬರ್ ನ ನಾಲ್ಕು ದಿಕ್ಕುಗಳಲ್ಲಿರುವ ಜಮೀನುಗಳ ಸರ್ವೇ ನಂಬರ್ ಗಳ ಪೂರ್ಣ ಪ್ರಮಾಣದ ಸ್ಕೆಚ್.
● ಅರ್ಜಿದಾರ ರೈತನ ಜಮೀನಿನ ಸರ್ವೇ ನಂಬರಿನ ಟಿಪ್ಪಣಿಗಳು.
● ಜಮೀನಿನ ಪಹಣಿ ಮತ್ತು ಅರ್ಜಿದಾರ ರೈತನ ಆಧಾರ್ ಕಾರ್ಡ್
● ಅರ್ಜಿ ಸಲ್ಲಿಸಿರುವ ರೈತನ ಜಮೀನಿನ ಎದುರಿರುವ ಜಮೀನಿನ ಪಹಣಿ ಮತ್ತು ವಿಳಾಸ
● ಜಮೀನಿಗೆ ದಾರಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ.
ಇಷ್ಟೆಲ್ಲಾ ದಾಖಲೆಗಳನ್ನು ಸಲ್ಲಿಸಿ ರೈತ ಮನವಿ ಸಲ್ಲಿಸಿದ ಮೇಲೆ ರೈತನ ಅರ್ಜಿ ಕುರಿತು ಗ್ರಾಮ ಸಭೆಯಲ್ಲಿ ಚರ್ಚೆಯಾಗಿ, ಪಂಚಾಯಿತಿ ಅನುಮತಿ ಸಿಕ್ಕ ಬಳಿಕ ನಿಮ್ಮ ಕೆಲಸಕ್ಕೆ ಚಾಲನೆ ದೊರೆಯುತ್ತದೆ. ಅಕ್ಕ ಪಕ್ಕದ ರೈತರ ಅನುಮತಿಯೊಂದಿಗೆ 60% ಯಂತ್ರೋಪಕರಣ ಮತ್ತು 40% ಕಾರ್ಮಿಕರ ಸಹಾಯದೊಂದಿಗೆ ರಸ್ತೆ ಕಾಮಗಾರಿ ಶುರುವಾಗುತ್ತದೆ.
ಆ ವ್ಯಾಪ್ತಿಯ ಪಂಚಾಯಿತಿ ಪ್ರತಿನಿಧಿಯೊಬ್ಬರು ನಿಮ್ಮ ಹೊಲಕ್ಕೆ ರಸ್ತೆ ಮಾಡಲು ಬೇಕಾದ ರಸ್ತೆ ಅಳತೆ ಕಾರ್ಯ ತಗುಲುವ ವೆಚ್ಚ ಹಾಗೂ ಉಪಕರಣ ಮತ್ತು ಕೆಲಸಗಾರ ವೆಚ್ಚ ಪಟ್ಟಿಯನ್ನು ತಯಾರಿ ಮಾಡುತ್ತಾರೆ. ತದನಂತರ ಆ ಗ್ರಾಮದಲ್ಲಿ ಇರುವ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಇರುವರಿಗೆ ಅವಕಾಶ ನೀಡಿ ಪ್ರತಿಯೊಬ್ಬ ಕೆಲಸಗಾರನಿಗೂ ಅವರ ವೇತನ ಸೀದಾ ಅವರ ಅಕೌಂಟ್ ಜಮೆ ಆಗುವಂತೆ ಮಾಡುತ್ತಾರೆ. ಈ ಯೋಜನೆ ಬಗ್ಗೆ ಯಾವುದೇ ಗೊಂದಲ ಇದ್ದರೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.