ರಾಜ್ಯದ ನಿರುದ್ಯೋಗಿಗಳಿಗೆ ಅಥವಾ ಸ್ವಂತವಾಗಿ ಉದ್ಯಮ ಮಾಡಬೇಕು ಎಂದು ಐಡಿಯಾ ಹೊಂದಿರುವ ಯುವ ಜನತೆಗೆ ಮತ್ತು ತಮ್ಮ ವ್ಯಾಪಾರ (buisness) ಅಥವಾ ಉದ್ದಿಮೆಯನ್ನು (enterprise) ಇನ್ನಷ್ಟು ವಿಸ್ತರಿಸಬೇಕು ಎನ್ನುವ ಕನಸು ಹೊಂದಿರುವ ಆಸಕ್ತರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ.
ಈ ರೀತಿ ಸ್ವಂತವಾಗಿ ಬಿಸಿನೆಸ್ ಮಾಡುವ ಆಸಕ್ತಿ ಇದ್ದು ಹಣ ಸಮಸ್ಯೆಯಿಂದ ಕೈಬಿಟ್ಟಿದ್ದರೆ ಅಂತಹ ಯುವ ಜನತೆ ಈಗ ಸರ್ಕಾರದ ಆರ್ಥಿಕ ನೆರವಿನಿಂದ ತಮ್ಮ ಉದ್ಯಮಿಯ ಕನಸನ್ನು ನನಸಾಗಿಸಿಕೊಳ್ಳಬಹುದು. ಯಾವುದೇ ವ್ಯಾಪಾರ ವ್ಯವಹಾರದ ಮೂಲಕ ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡು ಈ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಮತ್ತು ದೇಶದ ಆದಾಯವನ್ನು ಅಧಿಕ ಮಾಡುವಂತಹ ರಾಜ್ಯದ ಯುವ ಜನತೆಗೆ ಸರ್ಕಾರ (government) ಶೀಘ್ರವಾಗಿ ಸಾಲ ಸೌಲಭ್ಯ(loan) ನೀಡುವ ಮೂಲಕ ನಿಮ್ಮ ಯೋಜನೆಗೆ ಕೈಜೋಡಿಸುತ್ತಿದೆ.
ದಾಖಲೆ ಪತ್ರಗಳು ಸರಿ ಇದ್ದಲ್ಲಿ ಏಳೇ ದಿನಗಳಲ್ಲಿ ನೀವು ಸಾಲಕ್ಕೆ ಅನುಮೋದನೆ ಪಡೆದು ನಿಮ್ಮ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ (Karnataka Minoroties development corporation limited) ಈ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಅದಕ್ಕಾಗಿ ಸರ್ಕಾರವು ಕೆಲ ಕಂಡಿಷನ್ ಗಳನ್ನು ಹಾಕಿದೆ ಮತ್ತು ದಾಖಲೆ ಪತ್ರಗಳ ಅರ್ಜಿ ಜೊತೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದೆ.
ಇವೆಲ್ಲವನ್ನು ಪೂರೈಸುವವರು ಸರ್ಕಾರಕ್ಕೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೂಲಕ ನೀವು ಹೊಸ ಉದ್ಯಮ ಆರಂಭಿಸಲು ಅಥವಾ ವ್ಯಾಪಾರ ಆರಂಭಿಸಲು ನೇರ ಸಾಲ ಪಡೆಯಬಹುದು. ಸರ್ಕಾರದ ಈ ನೂತನ ಯೋಜನೆಯ ಫಲಾನುಭವಿಗಳಾಗಲು ಇರಬೇಕಾದ ಅರ್ಹತೆಗಳು ಮತ್ತು ಸಲ್ಲಿಸಬೇಕಾದ ದಾಖಲೆಗಳೇನು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಅರ್ಹತೆಗಳು:-
● ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
● ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
● ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
● ನೀವು ಈ ಸಾಲ ಪಡೆಯಲು ನಿಮ್ಮ ಯಾವುದಾದರೂ ಆಸ್ತಿ ಅಥವಾ ಭೂಮಿಯನ್ನು ಅಡಮಾನ ಇಡಬೇಕಾಗುತ್ತದೆ.
● ನೀವು ಶ್ಯೂರಿಟಿ ನೀಡುವ ಆಸ್ತಿ ಅಥವಾ ಭೂಮಿಯ ಮೌಲ್ಯವು ನೀವು ಪಡೆವ ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
● ಅರ್ಜಿದಾರರು KMDC ಡಿಫಾಲ್ಟರ್ ಆಗಿರಬಾರದು.
● ಕಟ್ಟಡ ಖಾತಾದಾರನಾದ ಯಾವ ವ್ಯಕ್ತಿ ಬೇಕಾದರೂ ಸಾಲ ಪಡೆಯಬಹುದು.
● ಶೇಕಡ 4%ರಷ್ಟು ಬಡ್ಡಿದರದಲ್ಲಿ ಗರಿಷ್ಠ 20 ಲಕ್ಷದ ವರೆಗೆ ಈ ಯೋಜನೆಯಡಿ ಸಾಲ ಪಡೆಯಬಹುದು
● ಈ ಯೋಜನೆಯಡಿ ಅಲ್ಪಸಂಖ್ಯಾತರ ವರ್ಗದವರಷ್ಟೇ ಸಾಲ ಪಡೆಯಲು ಅರ್ಹರಾಗಿರುತ್ತಾರೆ.
ಬೇಕಾಗುವ ದಾಖಲೆಗಳು:-
● ಅರ್ಜಿದಾರರ ಆಧಾರ್ ಕಾರ್ಡ್ ನಕಲು ಪ್ರತಿ
● ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣಪತ್ರ
ಮತ್ತು ಆದಾಯ ಪ್ರಮಾಣಪತ್ರ
● ಶ್ಯೂರಿಟಿ ನೀಡುವ ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದ ದಾಖಲೆ ಪ್ರತಿಗಳು
● ಕಟ್ಟಡ ಖಾತಾದಾರ ಮತ್ತು ಖಾತಾ ಪ್ರಾಮಾಣಪತ್ರ
● ಭೂಮಿಯ ರೂಪಾಂತರ ಪತ್ರ
● ಪಹಣಿ ಸಂಬಂಧಿಸಿದ ಪತ್ರ
● ಕಟ್ಟಡ ನೊಂದಾಯಿತ ಮೌಲ್ಯ ಮಾಪಕ ರಿಂದ ಮೌಲ್ಯಮಾಪನ ಪ್ರಮಾಣಪತ್ರ
● ಸಾಲ ಒಪ್ಪಂದ ಪರಿಗಣನೆ ರಶೀದಿ
ಈ ಯೋಜನೆ ಅಡಿ ಸಾಲ ಸೌಲಭ್ಯ ಪಡೆಯಲು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಅಧಿಕೃತ ವೆಬ್ಸೈಟ್ ಆದ https://kmdc.karnataka.gov.in/33/buisness-direct-credit-scheme/en ಭೇಟಿ ನೀಡಿ ಸಂಪೂರ್ಣ ವಿವರ ಪಡೆಬಹುದು.