ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿ ಮನೆಗಳಲ್ಲೂ ಕೂಡ ಪೂಜೆ ಮಾಡುವಾಗ ಘಂಟಾನಾದ ಮಾಡುತ್ತೇವೆ. ಹಿಂದೂಗಳ ಪ್ರತಿ ದೇವರ ಮನೆಯಲ್ಲಿ ಕೂಡ ಪೂಜಾ ಸಾಮಗ್ರಿ ಯಾಗಿ ಗಂಟೆ ಇದ್ದೇ ಇರುತ್ತದೆ. ಈ ಘಂಟೆಯನ್ನು ಭಾರಿಸುವುದರ ಕುರಿತು ಶಾಸ್ತ್ರಗಳು ಹಾಗೂ ವೈಜ್ಞಾನಿಕ ಕಾರಣಗಳು ಅನೇಕ ವಿಷಯಗಳನ್ನು ತಿಳಿಸುತ್ತವೆ.
ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಆ ಪಾಲನೆ ಮಾಡುವುದರಿಂದ ದೇವರ ಅನುಗ್ರಹ ಸಿಗುವುದರ ಜೊತೆಗೆ ನಮಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಕೂಡ ವೃದ್ಧಿಸುತ್ತದೆ. ಇದೇ ಕಾರಣಕ್ಕಾಗಿ ಮನೆಯಲ್ಲಿ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸುವ ಕುರಿತು ಕೆಲವು ಪ್ರಮುಖ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೇವೆ.
● ಮನೆಯಲ್ಲಿ ಘಂಟಾನಾದ ಮಾಡದೆ ಪೂಜೆ ಮಾಡಿದರೆ ಆ ಪೂಜೆ ಫಲ ಕೊಡುವುದಿಲ್ಲ, ಪೂಜೆ ಪೂರ್ತಿಯೂ ಆಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಾಗಿ ಮಾಡಿದ ಪೂಜೆ ಸಾರ್ಥಕ ಆಗಬೇಕು ಎಂದರೆ ಘಂಟೆನಾದ ಮಾಡಲೇಬೇಕು.
● ದೇವರಿಗೆ ದೀಪ ಹಚ್ಚುವಾಗ ಧೂಪ ಬೆಳಗುವಾಗ ಹಾಗೂ ನೈವೇದ್ಯ ಮಾಡುವಾಗ ಘಂಟೆನಾದ ಮಾಡಬೇಕು.
● ಮನೆಗಳಲ್ಲಿ ಬಳಸುವಂತಹ ಘಂಟೆಯ ಎತ್ತರವೂ 5 ಇಂಚು ಇದ್ದರೆ ಉತ್ತಮ. 5 ಇಂಚಿಗಿಂತ ದೊಡ್ಡ ಘಂಟೆಯನ್ನು ಕೂಡ ಬಳಸಬಹುದು ಆದರೆ ಅದಕ್ಕಿಂತ ಕಡಿಮೆ ಗಾತ್ರದ ಘಂಟೆ ಬಳಸುವುದು ನಿಷಿದ್ಧ.
● ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ನಂದೀಶ್ವರನ ವಿಗ್ರಹ ಅಥವಾ ಆಂಜನೇಯ ಸ್ವಾಮಿ ಇರುವ ಘಂಟೆ ಇರುತ್ತದೆ. ಕೆಲವು ಮನೆಗಳಲ್ಲಿ ಮಾತ್ರ ಶಂಕ ಚಕ್ರ ಇರುವ ಗಂಟೆ ಇರುತ್ತದೆ, ಕೆಲವು ಮನೆಗಳಲ್ಲಿ ನಾಗರಹೆಡೆ ಇರುವ ಘಂಟೆಗಳ ಬಳಕೆ ಕೂಡ ಮಾಡುತ್ತಾರೆ. ಈ ಮೇಲೆ ತಿಳಿಸಿದ ಯಾವ ದೇವರ ವಿಗ್ರಹ ಇದ್ದರೂ ಆ ಘಂಟೆ ಬಳಸಬಹುದು.
● ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುವಂತೆ ನೋಡಿಕೊಳ್ಳಲು ಮನೆಯ ಮೂಲೆ ಮೂಲೆಗಳಲ್ಲೂ ಘಂಟೆನಾದ ಮಾಡಬೇಕು.
● ಮನೆಗಳಲ್ಲಿ ಬೆಳಗ್ಗೆ ಸಮಯ ಗಂಡು ಮಕ್ಕಳು ಸಂಜೆ ಸಮಯ ಹೆಣ್ಣು ಮಕ್ಕಳು ದೀಪ ಹಚ್ಚಬೇಕು ಎಂದು ಶಾಸ್ತ್ರ ಹೇಳುತ್ತದೆ. ಈ ನಿಯಮವನ್ನು ಪಾಲಿಸುವುದರಿಂದ ಮನೆಯಲ್ಲಿ ಧನಾಭಿವೃದ್ಧಿ ಆಗುತ್ತದೆ. ಹಾಗೆಯೇ ಆ ಸಮಯದಲ್ಲಿ ಘಂಟೆನಾದವನ್ನು ಮೊಳಗಿಸಬೇಕು.
● ಮನೆಯಲ್ಲಿ ಪೂಜೆ ಮಾಡುವ ವೇಳೆ ಮಾಡುವ ಗಂಟೆ ಶಬ್ದವು ಓಂಕಾರ ನಾದಕ್ಕೆ ಸಮನಾಗಿರುತ್ತದೆ ಹಾಗಾಗಿ ನೀವು ಓಂಕಾರ ಪಠಣೆ ಮಾಡಿದಷ್ಟೇ ಫಲ ಸಿಗುತ್ತದೆ.
● ಪುರಾಣಗಳ ಪ್ರಕಾರವಾಗಿ ಪೂಜೆ ಮಾಡುವಾಗ ಘಂಟೆಶಬ್ದವನ್ನು ಮಾಡುವುದು ದೇವರನ್ನು ಎಚ್ಚರಗೊಳಿಸಲು ಮತ್ತು ದೇವರ ಎದುರಿಗೆ ನಿಂತಿರುವ ವ್ಯಕ್ತಿಯನ್ನು ಖಚಿತಪಡಿಸಲು ಎಂದು ಹೇಳಲಾಗುತ್ತದೆ ಹಾಗಾಗಿ ಪ್ರತಿದಿನವೂ ಪೂಜೆ ಮಾಡುವಾಗ ತಪ್ಪದೇ ಘಂಟೆನಾದವನ್ನು ಕೂಡ ಮಾಡಿ.
● ಘಂಟೆ ಶಬ್ದ ಆದಾಗ ಮೂಡುವ ಕಂಪನದಿಂದ ಆ ಪರಿಸರದಲ್ಲಿ ಇರುವ ವೈರಸ್ ಗಳು, ಬ್ಯಾಕ್ಟೀರಿಯಾಗಳು, ಸೂಕ್ಷ್ಮಾಣು ಜೀವಿಗಳು ನಾಶ ಆಗುತ್ತವೆ ಎಂದು ಸೈನ್ಸ್ ಹೇಳುತ್ತದೆ. ಆದ್ದರಿಂದಲೇ ಗಂಟೆ ಶಬ್ದ ಮಾಡುವ ದೇವಸ್ಥಾನದ ವಾತಾವರಣ ಸಕಾರಾತ್ಮಕದಿಂದ ಕೂಡಿರುತ್ತದೆ ಮನೆಗಳಲ್ಲೂ ಕೂಡ ಇದೆ ಅಭ್ಯಾಸ ಮಾಡುವುದರಿಂದ ಪಾಸಿಟಿವ್ ಎನರ್ಜಿ ತುಂಬುತ್ತದೆ.
● ಬ್ರಾಹ್ಮಿ ಮುಹೂರ್ತದಲ್ಲಿ ಹಾಗೂ ಗೋಧೂಳಿ ಸಮಯದಲ್ಲಿ ಪೂಜೆ ಮಾಡುವಾಗ ಮಾತ್ರ ಘಂಟೆ ಶಬ್ಧ ಮಾಡಬೇಕು, ಯಾವುದೇ ಕಾರಣಕ್ಕೂ ರಾತ್ರಿ ಸಮಯ ಗಂಟೆ ಶಬ್ದ ಮಾಡಬಾರದು, ಹಾಗೆಯೇ ಸೂತಕ ಇರುವ ಮನೆಗಳಲ್ಲಿ ಕೂಡ ಘಂಟೆ ಶಬ್ದವನ್ನು ಮಾಡಬಾರದು.
ನಮ್ಮ ಆರೋಗ್ಯವನ್ನು ಸುಧಾರಿಸಬಲ್ಲ ಕೆಲವೊಂದು ಉಪಯುಕ್ತ ಟಿಪ್ಸ್ ಗಳು ಇವು ತಪ್ಪದೆ ಇದನ್ನು ಪಾಲಿಸಿ.!
● ಹೆಣ್ಣು ಮಕ್ಕಳು ಘಂಟೆ ಬಾರಿಸಬಹುದಾ ಎನ್ನುವುದು ಅನೇಕರ ಪ್ರಶ್ನೆ. ನಮ್ಮ ಹಿರಿಯರು ಇದನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಹೆಣ್ಣು ಮಕ್ಕಳ ಎಡಗೈನ ನರವು ಗರ್ಭಕೋಶಕ್ಕೆ ಸಂಪರ್ಕ ಹೊಂದಿರುವುದರಿಂದ ಅವರಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳು ಘಂಟೆ ಬಾರಿಸದೇ ಇರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.