ನಾವು ದೇವರಿದ್ದಾನೆ ಎಂದು ನಂಬಿ ಪೂಜೆ ಮಾಡುತ್ತೇವೆ. ಅದಕ್ಕೆ ಸಾಕ್ಷಿ ಎಂಬಂತೆ ನೂರಾರು ಉದಾಹರಣೆಗಳ ಮೂಲಕ ಭಗವಂತ ತಾನು ಇರುವುದನ್ನು ನಿರೂಪಣೆ ಮಾಡಿದ್ದಾನೆ. ನೇರವಾಗಿ ದೇವರು ನಮ್ಮ ಎದುರು ಕಾಣಿಸಿಕೊಳ್ಳದೆ ಇದ್ದರೂ ಕೂಡ ನಾವು ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಕೇಳಿಕೊಂಡ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅಥವಾ ನಮ್ಮ ಕಷ್ಟದ ಸಮಸ್ಯೆಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಅದಕ್ಕೆ ಪರಿಹಾರ ತರುವ ಮೂಲಕ ಅಥವಾ ನಾವು ಮಾಡಿಕೊಂಡ ಕೋರಿಕೆಗಳು ನೆರವೇರುತ್ತವೋ ಅಥವಾ ಇಲ್ಲವೋ ಎಂಬುದನ್ನು ಸೂಚನೆ ಕೊಟ್ಟು ತಿಳಿಸುವ ಮೂಲಕ ತಾನು ಇರುವುದನ್ನು ನಿರೂಪಿಸಿದ್ದಾನೆ.
ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ದೇವರ ಫೋಟೋ ಇಂದ ಹೂ ಬೀಳುವುದು. ಇದನ್ನು ಬಹುತೇಕ ಎಲ್ಲರೂ ಕೂಡ ಅನುಭವ ಪಟ್ಟಿರುತ್ತಾರೆ. ಆದರೆ ಇದರ ಸರಿಯಾದ ಮಾಹಿತಿ ಕೆಲವರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿ ದೇವರ ಫೋಟೋ ಇಂದ ಹೂ ಬೀಳಲು ಕಾರಣ ಏನು, ಆ ಹೂವನ್ನು ಏನು ಮಾಡಬೇಕು, ಇದಕ್ಕೆ ಏನು ಅರ್ಥವಿರುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
● ಕೆಲವೊಮ್ಮೆ ದೇವರ ಫೋಟೋಗೆ ಹೂ ಇಟ್ಟ ಕೂಡಲೆ ಅದು ಕೆಳಗೆ ಬೀಳುತ್ತದೆ, ಕೆಲವೊಮ್ಮೆ ಇನ್ನೇನು ಪೂಜೆ ಆಯ್ತು ಎನ್ನುವ ಸಮಯದಲ್ಲಿ ಬೀಳುತ್ತದೆ, ಕೆಲವೊಮ್ಮೆ ಪೂಜೆ ಆದ ಬಳಿಕ ಕೂಡ ಹೂ ಬೀಳುತ್ತದೆ ಆದರೆ ಯಾವ ಸಂದರ್ಭದಲ್ಲಿ ಇದನ್ನು ಎತ್ತಿಕೊಳ್ಳಬೇಕು ಯಾವ ಸಂದರ್ಭದಲ್ಲಿ ಇದನ್ನು ವಾಪಸ್ಸು ದೇವರಿಗೆ ಮುಡಿಸಬೇಕು ಎನ್ನುವ ಗೊಂದಲ ಹಲವರಿಗೆ ಇರುತ್ತದೆ. ಇದಕ್ಕೆ ಸರಿಯಾದ ಕ್ರಮ ಏನೆಂದರೆ ದೇವರು ಫೋಟೋಗೆ ಒಮ್ಮೆ ಹೂ ಇಟ್ಟ ಮೇಲೆ ಅದು ಯಾವಾಗ ಕೆಳಗೆ ಬಿದ್ದರೂ ಅದು ನಿಮ್ಮ ಪೂಜೆಗೆ ದೇವರು ಕೊಟ್ಟಿರುವ ಪ್ರಸಾದ ಎಂದು ಪರಿಗಣಿಸಬೇಕು. ಅದನ್ನು ಮತ್ತೆ ಯಾವುದೇ ಕಾರಣಕ್ಕೂ ದೇವರ ಫೋಟೋಗೆ ಹಾಕಬಾರದು. ದೇವಸ್ಥಾನದಲ್ಲಿ ನಿಮಗೆ ಪ್ರಸಾದ ಎಂದು ಕೊಡುವ ಹೂವಿನ ರೀತಿಯಲ್ಲಿ ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.
● ಈ ರೀತಿ ದೇವರ ಫೋಟೋ ಬಿದ್ದ ಹೂವನ್ನು ನಿಮ್ಮ ಹತ್ತಿರವೇ ಅದು ಒಣಗುವವರೆಗೂ ಕೂಡ ಇಟ್ಟುಕೊಳ್ಳಬಹುದು. ಆಮೇಲೆ ಅದನ್ನು ನಮ್ಮ ಬಳಿ ಇಟ್ಟುಕೊಳ್ಳಬಾರದು. ಅದನ್ನು ಯಾರು ಓಡಾಡದ ಯಾರು ತುಳಿಯದ ಯಾವುದಾದರೂ ಜಾಗದಲ್ಲಿ ಹಾಕಬೇಕು. ಹೂವಿನ ಗಿಡಗಳ ಬುಡದಲ್ಲಿ ಹಾಕುವುದು ಉತ್ತಮ.
● ದೇವರ ಫೋಟೋದಿಂದ ಪದೇಪದೇ ಹೂವು ಬೀಳುತ್ತಿದ್ದರೆ ನಿಮ್ಮ ಇಷ್ಟಾರ್ಥ ಶೀಘ್ರವೇ ನೆರವೇರುತ್ತದೆ. ನೀವು ಅಂದುಕೊಳ್ಳುತ್ತಿರುವ ಕೆಲಸ ಆಗುತ್ತದೆ ಎಂದರ್ಥ.
● ಆದರೆ ದೇವರ ಬಳಿ ಹೂವನ್ನು ಕೊಟ್ಟು ಬೇಡಿಕೊಳ್ಳುವ ಮತ್ತೊಂದು ಪದ್ಧತಿ ಇದೆ. ದೇವರಿಗೆ ವಿಶೇಷವಾಗಿ ಪೂಜೆ ಮಾಡಿ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಫಲಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಈ ರೀತಿ ಆಚರಣೆ ಮಾಡಿ ಕೇಳಿಕೊಂಡಾಗ ದೇವರ ಮೂರ್ತಿಯಿಂದ ಬಲಬಾಗಕ್ಕೆ ಹೂವು ಬಿದ್ದರೆ ಆ ಕಾರ್ಯ ನೆರವೇರುತ್ತದೆ ಒಳ್ಳೆಯದಾಗುತ್ತದೆ ಎಂದರ್ಥ, ಎಡ ಭಾಗಕ್ಕೆ ಹೂ ಬಿದ್ದರೆ ಆ ಕಾರ್ಯನೆರವೇರುವುದಿಲ್ಲ ಅದು ಕೈಗೂಡುವುದಿಲ್ಲ ಎಂದರ್ಥ.
● ದೇವರಿಗೆ ಹೂಗಳನ್ನು ಹಾಕುವಾಗ ಬಹಳ ಎಚ್ಚರಿಕೆಯಿಂದ ಹಾಕಬೇಕು. ಮುಟ್ಟಾದ ಹೆಂಗಸರು ಕಟ್ಟಿದ ಹೂವು ಎಂದು ಗೊತ್ತಿದ್ದರೆ ಅದನ್ನು ಬಳಸಬಾರದು, ಅಂಗಡಿಯಿಂದ ಹೂವು ತಂದ ಹೂವಿನ ಮೇಲೆ ನೀರಿನ ಪ್ರೋಕ್ಷಣೆ ಮಾಡಿ ನಂತರ ಬಳಸಬೇಕು, ಪ್ಲಾಸ್ಟಿಕ್ ಹೂಗಳನ್ನು ದೇವರಿಗೆ ಅಲಂಕಾರ ಮಾಡಲು ಹಾಗೂ ದೇವರ ಕೋಣೆಗೆ ಹಾಗೂ ಮನೆಯ ಮುಖ್ಯದ್ವಾರಕ್ಕೆ ಬಳಸಬಾರದು. ಮುಳ್ಳಿನಿಂದ ಕೂಡಿದ ಹೂವನ್ನು ದೇವರಿಗೆ ಅರ್ಪಿಸಬಾರದು. ಬಾಡಿಹೋದ ಸುಗಂಧವಿಲ್ಲದ ಹೂವುಗಳನ್ನು ಕೂಡ ಪೂಜೆಗೆ ಬಳಸಬಾರದು. ಅನುಕೂಲವಿದ್ದರೆ ನಾವೇ ಬೆಳೆಸಿದ ಹೂವಿನ ಗಿಡಗಳಿಂದ ಆರಿಸಿಕೊಂಡ ಹೂವನ್ನೇ ದೇವರಿಗೆ ಅರ್ಪಿಸಿದರೆ ಭಗವಂತ ಮೆಚ್ಚುತ್ತಾರೆ.