1 ಲಕ್ಷ ವಸತಿ ಯೋಜನೆಗೆ ಅರ್ಜಿ ಆಹ್ವಾನ ಮನೆ ಇಲ್ಲದವರು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ.! ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ವಿಧಾ‌ನ ಇಲ್ಲಿದೆ ನೋಡಿ.!

 

ಕರ್ನಾಟಕ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಯಡಿ (CM 1 lack housing Scheme) ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಮನೆಯನ್ನು (econimcally weaker sections of India) ಪಡೆಯಬಹುದಾಗಿದೆ. ಸದ್ಯಕ್ಕೆ ಈ ಯೋಜನೆಯಲ್ಲಿ ಈಗ ಸರ್ಕಾರ ಒಂದು ಲಕ್ಷ ಬಹುಮಹಡಿ ಹಂಚಿಕೆ ಮಾಡಲು ನಿರ್ಧಾರ ಮಾಡಿದೆ. ಈ ಯೋಜನೆ ಮೂಲಕ ಹೊಸ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಹಳೆ ಮನೆ ನವೀಕರಣಕ್ಕೆ ಸಬ್ಸಿಡಿಯನ್ನು (Subsidy) ಸಹಾ ಪಡೆಯಬಹುದಾಗಿದೆ.

ಈ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ ಸಹಾಯಧನ ಸಿಗಲಿದೆ. ಕೇಂದ್ರ ವಸತಿ ಯೋಜನೆಯಡಿ 60% ಅಂದರೆ 72,000ರೂ. ಮತ್ತು ರಾಜ್ಯ ಸರ್ಕಾರದಿಂದ 40% ಅಂದರೆ 48,000 ಪಡೆಯಬಹುದಾಗಿದೆ. ಈಗ ಬೆಂಗಳೂರು ಜಿಲ್ಲೆಯವರಿಗೆ (Bangalore district) ಮಾತ್ರ ಯೋಜನೆಯ ಫಲಾನುಭವಿಗಳಾಗಲು ಅವಕಾಶವಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಅರ್ಹತಾ ಮಾನದಂಡಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!

ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಫಲಾನುಭವಿಗಳಾಗಲು ಇರುವ ಕಂಡಿಷನ್ ಗಳು:-

● ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳಾಗಿರಬೇಕು.
● ಈ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 87,000 ಕ್ಕಿಂತ ಹೆಚ್ಚಿಗೆ ಇರಬಾರದು.
● ಬೆಂಗಳೂರು ಜಿಲ್ಲೆಯವರಿಗೆ ಮೊದಲ ಆದ್ಯತೆ. ನೀವು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿ ಬೆಂಗಳೂರಿನಲ್ಲಿ ವಾಸವಿದ್ದರೆ ನೀವು ಕಳೆದ 5 ವರ್ಷಗಳಿಂದ ಶಾಶ್ವತವಾಗಿ ಬೆಂಗಳೂರು ನಗರದಲ್ಲಿ ನೆಲೆಸಿರಬೇಕು.
● ಮೊದಲು ಬಂದವರಿಗೆ ಆದ್ಯತೆ ಇರುತ್ತದೆ. ಮೊದಲು ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಹ ಅಭ್ಯರ್ಥಿಗಳು ಈ ಯೋಜನೆಯಲ್ಲಿ ಪ್ರಯೋಜನವನ್ನು ಪಡೆಯಬಹುದು.
● ಅರ್ಜಿದಾರರು ಬೇರೆ ಯಾವುದೇ ವಸತಿ ಯೋಜನೆಗಳ ಫಲಾನುಭವಿಗಳಾಗಿರಬಾರದು.

ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

● ಈ ಮೇಲಿನ ಅರ್ಹತಾ ಮಾನದಂಡವನ್ನು ಪೂರೈಸುವ ಅಭ್ಯರ್ಥಿಗಳು ashraya portal ಮೂಲಕ ಅರ್ಜಿ ಸಲ್ಲಿಸಬೇಕು.
● ಮೊದಲಿಗೆ https://ashraya.karnataka.gov.in/ ಗೆ ಭೇಟಿ ನೀಡಿ.
● ಡಿಫಾಲ್ಟ್ ಕನ್ನಡ ಭಾಷೆಯನ್ನು ಇಂಗ್ಲಿಷ್‌ಗೆ ಬದಲಾಯಿಸಿ.
● ಮುಖ್ಯಮಂತ್ರಿಗಳಿಗೆ ಒಂದು ಲಕ್ಷ ವಸತಿ ಯೋಜನೆ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ.
● ಅದರಲ್ಲಿ ಬೆಂಗಳೂರು ವಿಭಾಗದ ಅಡಿಯಲ್ಲಿ ಮುಖ್ಯಮಂತ್ರಿಗಳಿಗೆ ಒಂದು ಮಿಲಿಯನ್ ವಸತಿ ಯೋಜನೆ ಹಂತ II ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಿ.

● ಅದರಲ್ಲಿ ತೋರಿಸಿರುವಂತೆ ಆನ್‌ಲೈನ್ ಅಪ್ಲಿಕೇಶನ್ ಹಂತ II ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ನೇರವಾಗಿ https://ashraya.karnataka.gov.in/cmonelakh/ ಕ್ಲಿಕ್ ಮಾಡಿ.
● ಈಗ ನೇರವಾಗಿ CM ಒಂದು ಲಕ್ಷ ವಸತಿ ಯೋಜನೆಗೆ Online ನಲ್ಲಿ ಅರ್ಜಿ ಸಲ್ಲಿಸುವ ಪುಟ ಕಾಣಿಸುತ್ತದೆ.
● ಈ ಪುಟದಲ್ಲಿ, ಕರ್ನಾಟಕ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು ಒಂದು ಲಕ್ಷ ಮನೆಯ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಎನ್ನುವ ಮತ್ತೊಂದು ಲಿಂಕ್ ಕ್ಲಿಕ್ ಮಾಡಿ.

Annabhagya Yojana:‌ ಅನ್ನಭಾಗ್ಯ ಯೋಜನೆಯ ಹಣ 680 ರೂ. ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ.? ಆಗಸ್ಟ್ ತಿಂಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ಡೈರೆಕ್ಟ್‌ ಲಿಂಕ್ ಇಲ್ಲಿದೆ ನೋಡಿ.!

● ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
● ಅಭ್ಯರ್ಥಿಗಳು ಬೆಂಗಳೂರು ಒನ್ ಕೇಂದ್ರಗಳಿಗೆ ಇರುವ ಆಪ್ಷನ್ ಕ್ಲಿಕ್ ಮಾಡಿ BBMP ಯ ಎಲ್ಲಾ ವಾರ್ಡ್ ಕಚೇರಿಗಳಿಗೆ ಅರ್ಜಿ ನಮೂನೆಗಳನ್ನು ಸಲ್ಲಿಸಬೇಕು ಮತ್ತು ಯಾವುದೇ CSC ಕೇಂದ್ರಗಳ ಮೂಲಕವೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

Leave a Comment