ನಿಂಬೆ ಹಣ್ಣಿನಲ್ಲಿ (Lemon) ಅಪಾರವಾದ ಸಿ ಜೀವಸತ್ವ (Vitamin C) ಅಡಗಿದೆ. ಸಿ ಜೀವಸತ್ವದ ಸೇವನೆಯು ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತಶುದ್ದಿ ಮಾಡುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅಜೀರ್ಣ, ಸುಸ್ತು, ನಿಶಕ್ತಿ ಇನ್ನು ಮುಂತಾದ ಸಮಸ್ಯೆಗಳಿಗೂ ಕೂಡ ನಿಂಬೆಹಣ್ಣಿನ ಪದಾರ್ಥಗಳ ಸೇವನೆ ಅಥವಾ ನಿಂಬೆರಸದ ಸೇವತೆಯು ಉತ್ತಮ ಔಷಧಿ ಆಗಿದೆ.
ಯಾವ ರೀತಿ ಆರೋಗ್ಯ ಸಮಸ್ಯೆಯಾದಾಗ ನಿಂಬೆರಸದಿಂದ ಯಾವ ರೀತಿ ಮನೆ ಮದ್ದು (home remedies) ಮಾಡಿಕೊಳ್ಳಬಹುದು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
● ನಿಂಬೆಹಣ್ಣು ಜೀರ್ಣಶಕ್ತಿ ಹೆಚ್ಚಿಸುತ್ತದೆ, ಇದಕ್ಕೆ ಪಿತ್ತ ಶಮನ ಮಾಡುವ ಬಳಲಿಕೆ ನಿವಾರಿಸುವ ದಾಹ ಇಂಗಿಸುವ ಗುಣಗಳಿವೆ.
● ಮಾದಕ ವಸ್ತುಗಳ ಸೇವನೆಯಿಂದ ಶರೀರದಲ್ಲಿ ವಿಕಾರಗಳಾಗಿದ್ದರೆ ಅವೆಲ್ಲವನ್ನು ಕೂಡ ಸರಿಪಡಿಸುವ ಶಕ್ತಿ ಈ ನಿಂಬೆಹಣ್ಣಿನ ಸೇವನೆಯಿಂದ ಬರುತ್ತದೆ.
● ಒಂದು ಚಮಚ ನಿಂಬೆರಸಕ್ಕೆ ಅಷ್ಟೇ ಪ್ರಮಾಣದ ಬಿಳಿ ಈರುಳ್ಳಿ ರಸವನ್ನು ಸೇರಿಸಿ ಪ್ರತಿದಿನ ಸೇವನೆ ಮಾಡುವುದರಿಂದ ಮಲೇರಿಯ ರೋಗವನ್ನು ನಿವಾರಣೆ ಮಾಡಬಹುದು.
● ಅಜೀರ್ಣವಾಗಿರುವಾಗ ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆರಸ ಚಿಟಿಕೆಯಷ್ಟು ಅಡುಗೆಗೆ ಬಳಸುವ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ ಪರಿಣಾಮಕಾರಿಯಾಗಿ ಫಲ ಕೊಡುತ್ತದೆ.
● ಗರ್ಭಿಣಿಯರು ಪ್ರತಿದಿನವೂ ಒಂದು ಚಮಚ ನಿಂಬೆಹಣ್ಣಿನ ಶರಬತ್ತು ಸೇವಿಸುವುದರಿಂದ ಬಹಳ ಸಲೀಸಾಗಿ ಹೆರಿಗೆ ಆಗುತ್ತದೆ ಎಂದು ಹೇಳಲಾಗುತ್ತದೆ.
● ಅಧಿಕ ಜ್ವರದಿಂದ ಬಾಯಾರಿಕೆಯಾಗುತ್ತಿದ್ದರೆ ಅಥವಾ ಬೇಸಿಗೆಯ ಬೇಗೆ ಗೆ ಬಹಳ ಬಾಯಾರಿಕೆ ಆಗುತ್ತಿದ್ದರೆ, ಆಗ ಒಂದು ಲೋಟ ನಿಂಬೆ ರಸದ ಪಾನಕ ಸೇವಿಸಿದರೆ ಅದು ನಿವಾರಣೆ ಆಗುತ್ತದೆ.
● ಹಸಿವಾಗದೆ ಇರುವಂತಹ ಸಮಸ್ಯೆಯಿಂದ ಬಳಲುತ್ತಾ ಇರುವವರು ಪ್ರತಿದಿನವೂ ಕೂಡ ನಿಂಬೆಹಣ್ಣಿನ ಪಾನಕದ ಸೇವನೆ ಮಾಡಬೇಕು. ಈ ರೀತಿ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಪರಿಹಾರವಾಗಿ ಚೆನ್ನಾಗಿ ಹಸಿವಾಗುತ್ತದೆ.
● ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನುಲಿತ, ವಾಕರಿಕೆ ಮುಂತಾದ ಸಮಸ್ಯೆಗಳಿಗೂ ನಿಂಬೆಹಣ್ಣಿನ ಶರಬತ್ತಿನ ಸೇವನೆ ಒಂದು ಉತ್ತಮ ಔಷಧಿ ಆಗಿದೆ.
● ನಿಂಬೆ ಹಣ್ಣಿನ ಪಾನಕವನ್ನು ನಿಯಮಿತವಾಗಿ ಸೇವಿಸುವುದರಿಂದ ಆಮಶಂಕೆ ಹಾಗೂ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.
● ನಿಂಬೆ ಹಣ್ಣಿನ ಪಾನಕವನ್ನು ತಯಾರಿಸುವಾಗ ಸಕ್ಕರೆಯನ್ನು ಬಳಸುವುದಕ್ಕಿಂತ ಉಪ್ಪನ್ನು ಬಳಸಿ ಪಾನಕ ಮಾಡುವುದರಿಂದ ಅದು ಇನ್ನು ಹೆಚ್ಚು ಉತ್ತಮ ಪರಿಣಾಮಗಳನ್ನು ನೀಡುತ್ತದೆ.
ಅಡುಗೆ ಉಪ್ಪಿಗೆ ಎಷ್ಟೊಂದು ಪ್ರಯೋಜನ ಇದೆ ಗೊತ್ತ..? ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕು.!
● ಮೀನಿನ ಖಾದ್ಯಗಳನ್ನು ಸೇವಿಸುವಾಗ ನಿಂಬೆಹಣ್ಣಿನ ಸೇವನೆಯ ತಪ್ಪದೆ ಮಾಡಬೇಕು. ಯಾಕೆಂದರೆ ಮೀನಿನ ಮುಳ್ಳುಗಳು ಹೊಟ್ಟೆಯಲ್ಲಿ ಸೇರಿದ್ದರೆ ನಿಂಬೆಹಣ್ಣಿನ ರಸವು ಅದು ಜೀರ್ಣವಾಗುವಂತೆ ಮಾಡುತ್ತದೆ.
● ಮೂತ್ರದ ಪ್ರಮಾಣ ಕಡಿಮೆ ಆಗುತ್ತಿದ್ದರೆ ಅದು ಕೂಡ ಒಂದು ಆರೋಗ್ಯ ಕೆಡುವ ಸೂಚನೆ ಹಾಗಾಗಿ ಈ ರೀತಿ ಆದಾಗ ಅಥವಾ ಉರಿ ಮೂತ್ರ ಸಮಸ್ಯೆ ಇದ್ದಾಗ ಅಥವಾ ಯಾವುದೇ ರೀತಿ ಇನ್ಫೆಕ್ಷನ್ ಆಗಿದ್ದಾಗಲೂ ಕೂಡ ಎಳನೀರಿಗೆ ನಿಂಬೆರಸವನ್ನು ಸೇವಿಸಿ ಸೇವನೆ ಮಾಡಿದರೆ ಈ ಸಮಸ್ಯೆಗಳು ಪರಿಹಾರ ಆಗುತ್ತವೆ.
● ನಿಂಬೆ ಹಣ್ಣಿಗೆ ಕ್ರಿಮಿನಾಶಕ ಗುಣ ಇರುವುದರಿಂದ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಯಾವುದಾದರೂ ಹಾನಿಕಾರಕ ಕ್ರಿಮಿಗಳು ಇದ್ದರೆ ಅದನ್ನು ನಾಶ ಮಾಡುತ್ತದೆ.
● ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಮಜ್ಜಿಗೆಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಚರ್ಮದ ಕಾಂತಿಯು ಹೆಚ್ಚಾಗುತ್ತದೆ.