ಈರುಳ್ಳಿ (Onion) ಬೆಳೆಯುವ ರೈತರಿಗೆ (Farmer) ಇರುವ ಸಾಮಾನ್ಯ ಸಮಸ್ಯೆಗಳ ಜೊತೆಗೆ ಬೆಳೆ ಬಂದ ಮೇಲೆ ಎದುರಾಗುವ ಮತ್ತಷ್ಟು ಸಮಸ್ಯೆಗಳು ಎಂದರೆ ಬೆಲೆಕುಸಿತ ಹಾಗೂ ಈರುಳ್ಳಿಯನ್ನು ಸಂಗ್ರಹಣೆ ಮಾಡಿಡುವ ಸವಾಲು. ಯಾಕೆಂದರೆ, ಈರುಳ್ಳಿಯ ಬೆಲೆ ಯಾವಾಗಲೂ ಒಂದೇ ಸಮನಾಗಿ ಇರುವುದಿಲ್ಲ ಎಲ್ಲೆಡೆ ಈರುಳ್ಳಿ ಫಸಲು ಹೆಚ್ಚಾಗಿದ್ದಾಗ ದಿಢೀರ್ ಎಂದು ಬೆಲೆ ಕುಸಿತವಾಗುತ್ತದೆ.
ಇದನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಟ್ಟರೆ ಬೆಲೆ ಬಂದಾಗ ಮಾರಾಟ ಮಾಡಬಹುದು. ಆದರೆ ತೇವಾಂಶ ಬೆಳೆ ಆಗಿರುವ ಕಾರಣದಿಂದಾಗಿ ಈರುಳ್ಳಿಯನ್ನು ಈ ರೀತಿ ಶೇಖರಿಸಿ ಇಡಲು ಸೂಕ್ತವಾದ ವ್ಯವಸ್ಥೆ ಬೇಕು. ಮಧ್ಯವರ್ತಿಗಳು ಹಾಗೂ ದೊಡ್ಡ ರೈತರುಗಳು ಶೆಡ್ ನಿರ್ಮಾಣ (Onion Shed Construction) ಮಾಡಿ ಈರುಳ್ಳಿಯನ್ನು ಸಂಗ್ರಹಿಸಿ ಬೆಲೆ ಬಂದಾಗ ಮಾರಾಟ ಮಾಡಿ ಲಾಭ ಪಡೆಯುತ್ತಾರೆ.
ಈರುಳ್ಳಿ ಬೆಳೆದ ಸಣ್ಣ ಬೆಳೆಗಾರರು ಶೆಡ್ ಗಳ ನಿರ್ಮಾಣ ಮಾಡಿಕೊಳ್ಳಲು (Onion Shed Scheme) ಅನುಕೂಲತೆ ಇಲ್ಲದ ಕಾರಣ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಧ್ಯವರ್ತಿಗಳು ಕೇಳಿದ ಬೆಲೆಗೆ ಕೊಟ್ಟು ಕೈ ತೊಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇದನ್ನು ತಪ್ಪಿಸಲು ಸರ್ಕಾರವು ಈರುಳ್ಳಿ ಬೆಳೆವ ಎಲ್ಲಾ ರೈತರಿಗೂ ಕೂಡ ಅವರ ಜಮೀನಿನಲ್ಲಿಯೇ ಶೆಡ್ ಮಾಡಿಕೊಳ್ಳುವುದಕ್ಕೆ ಸಹಾಯಧನ (Subsidy) ನೀಡುತ್ತಿದೆ.
ಸರ್ಕಾರ ವತಿಯಿಂದ ತೋಟಗಾರಿಕೆ ಇಲಾಖೆ (Horticultural Scheme) ಈ ರೀತಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸ್ವೀಕಾರ ಮಾಡುತ್ತಿದ್ದು, ರೈತರುಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗಾಗಿ ಸರ್ಕಾರದ ಈ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಪ್ರತಿಯೊಬ್ಬ ರೈತನಿಗೂ ಕೂಡ ಉಪಯೋಗವಾಗುವಂತಹ ಮಾಹಿತಿಯಾದ ಕಾರಣ ಇದನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ಕೂಡ ತಪ್ಪದೇ ಹಂಚಿಕೊಳ್ಳಿ.
ರೈಲ್ವೆ ರಕ್ಷಣಾ ಪಡೆಯ 9700 ಹುದ್ದೆಗಳ ನೇಮಕಾತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ
ಈರುಳ್ಳಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಕುಟುಂಬದ ಪಡಿತರ ಚೀಟಿ
● ಜಮೀನಿಗೆ ನೀರಿನ ವ್ಯವಸ್ಥೆ ಇರುವ ಬಗ್ಗೆ ಪತ್ರ
● 20 ರೂಪಾಯಿ ಸ್ಟ್ಯಾಂಪ್ ಪೇಪರಲ್ಲಿ ಹೇಳಿಕೆ, ಘೋಷಣೆ ಮತ್ತು ಸಹಿ
● ಅರ್ಜಿ ಫಾರಂ
● ರೈತನ ಬ್ಯಾಂಕ್ ಪಾಸ್ ಪುಸ್ತಕ
● ಫಾರಂ ನಂಬರ್ 6
● PDO ಸಹಿ ಹೊಂದಿರುವ ಕೆಲಸಗಾರನ ಜಾಬ್ ಕಾರ್ಡ್
ಜಮೀನಿನ ಪಹಣಿ
ಅರ್ಜಿ ಸಲ್ಲಿಸುವ ವಿಧಾನ:-
● ಈರುಳ್ಳಿ ಬೆಳೆ ಬೆಳೆಗಾರನಾದ ಸಣ್ಣ ರೈತ ಅಥವಾ ದೊಡ್ಡ ರೈತನು ಜೆರಾಕ್ಸ್ ಶಾಪ್ ಅಲ್ಲಿ ಸಿಗುವ ಅರ್ಜಿ ಫಾರಂ ಅನ್ನು ತಂದು ಭರ್ತಿ ಮಾಡಿ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ತೋಟಗಾರಿಕೆ ಇಲಾಖೆಯ ಕಚೇರಿಗೆ ಕೊಡಬೇಕು.
● ತೋಟಗಾರಿಕೆ ಇಲಾಖೆ ಪ್ರತಿನಿಧಿಯು ಅರ್ಜಿ ಪರಿಶೀಲಿಸಿ ಮೇಲಧಿಕಾರಿಯ ಅನುಮತಿ ಪಡೆದು ಕ್ರಿಯಾಯೋಜನೆ ಸಿದ್ಧಪಡಿಸುತ್ತಾರೆ.
● ಅದನ್ನು ಇಲಾಖೆಯ ಕಂಪ್ಯೂಟರ್ನಲ್ಲಿ ಡಾಟಾ ರೂಪದಲ್ಲಿ ಎಂಟ್ರಿ ಮಾಡಿದ ಮೇಲೆ ಕ್ಷೇತ್ರ ಪ್ರತಿನಿಧಿಯು ಈರುಳ್ಳಿ ಬೆಳೆಯುವ ಜಮೀನಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ.
● ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಎಷ್ಟು ಸಹಾಯಧನ ನೀಡಬೇಕು ಎನ್ನುವುದು ನಿರ್ಧಾರವಾಗುತ್ತದೆ. 60,000ರೂ. ದಿಂದ 1,60,000ರೂ. ವರೆಗೂ ಕೂಡ ಸಹಾಯಧನ ಪಡೆಯಬಹುದು.
● ಈ ಸಹಾಯಧನದವನ್ನು 3 ರೀತಿಯಾಗಿ ಹಂಚಿಕೆ ಮಾಡಲಾಗುತ್ತದೆ.
● 60%ರಷ್ಟು ಹಣವನ್ನು ಮೆಟೀರಿಯಲ್ ಅಂಗಡಿಗಳಿಗೆ ಕೊಡುತ್ತಾರೆ. ಶೆಡ್ ನಿರ್ಮಾಣ ಮಾಡಿದ ಕೆಲಸಗಾರನ ಕೂಲಿಯು ಉದ್ಯೋಗ ಖಾತ್ರಿ ಯೋಜನೆಯಡಿ DBT ಮೂಲಕ ನೇರವಾಗಿ ಆತನ ಅಕೌಂಟಿಗೆ ಜಮೆ ಆಗುತ್ತದೆ. ಯೋಜನೆಗೆ ನಿಗದಿಪಡಿಸಿದ ಹಣದಲ್ಲಿ 10% ಹಣವನ್ನು ರೈತನ ಇನ್ನಿತರ ಖರ್ಚಿಗಾಗಿ ರೈತನ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.