ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ.!

 

ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ (Construction worker ) ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್ (Labour card) ನೀಡಲಾಗುತ್ತದೆ. ಈ ರೀತಿ ನೋಂದಣಿಯಾಗಿ ಲೇಬರ್ ಕಾರ್ಡ್ ಪಡೆಯುವಂತಹ ಕಟ್ಟಡ ಕಾರ್ಮಿಕರು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಸಾಕಷ್ಟು ಸಹಾಯಗಳನ್ನು ಪಡೆಯುತ್ತಾರೆ.

ನಮ್ಮ ರಾಜ್ಯ ಸರ್ಕಾರವು ಲೇಬರ್ ಕಾರ್ಡ್ ಹೊಂದಿರುವಂತಹ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ವಿಮೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಕಿಟ್ ಮತ್ತು ಉಚಿತ ಟ್ಯಾಬ್ ವಿತರಣೆ, ಕಾರ್ಮಿಕ ಕಿಟ್, ವಿವಾಹ ಪ್ರೋತ್ಸಾಹ ಧನ, ಹೆರಿಗೆ ಸೌಲಭ್ಯ ನೆರವು, ಉಚಿತ ಪ್ರಯಾಣಕ್ಕೆ ಅವಕಾಶ ಸೇರಿದಂತೆ ಇನ್ನು ಹಲವು ಅನುಕೂಲತೆಗಳನ್ನು ನೀಡುತ್ತಿದೆ.

ಈರುಳ್ಳಿ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ 1.60 ಲಕ್ಷ ಸಹಾಯಧನ ಘೋಷಣೆ ಆಸಕ್ತ ರೈತರು ಇಂದೇ ಅರ್ಜಿ ಸಲ್ಲಿಸಿ.!

ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಾತ್ರವಲ್ಲದೆ ಅಸಂಘಟಿತ ವಲಯದಲ್ಲಿ (Unorganized sector) ದುಡಿಯುವ ಕಾರ್ಮಿಕರು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್ (Smart card) ಪಡೆಯುವ ಮೂಲಕ ಅವರು ಸರ್ಕಾರ ರೂಪಿಸುವ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಯಾವುದು ಜಾತಿ ವರ್ಗದ ಅಡ್ಡಿಯಿಲ್ಲದೆ ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡು ತಿಳಿಯುತ್ತಿರುವ ಎಲ್ಲಾ ಕಾರ್ಮಿಕನು ಕೂಡ ಈ ಸ್ಮಾರ್ಟ್ ಕಾರ್ಡ್ ಪಡೆಯಲು ಅರ್ಜಿ ಹಾಕಬಹುದು.

ಅಮಾಲಿಗಳು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಟೈಲರ್ ಗಳು, ಮೆಕ್ಯಾನಿಕ್ ಗಳು, ವಾಚ್ ಮೆನ್ ಗಳು, ಕ್ಷೌರಿಕರು, ಚಿನ್ನಾಭರಣ ಕೆಲಸಗಾರರು, ಕಂಬಾರರು, ಕುಂಬಾರರು ಮತ್ತು ಗೂಡು ಕಾರ್ಮಿಕರು ಸೇರಿದಂತೆ 11 ವರ್ಗದ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಈ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದು. ಆನ್ಲೈನ್ ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯುತ್ತದೆ.

ಎಲ್ಲರ ಮನೆಯಲ್ಲಿಯೂ ಹೆಣ್ಣು ಮಕ್ಕಳು ಹುಟ್ಟುವುದಿಲ್ಲ ಯಾಕೆ ಗೊತ್ತ.? ಹೆಣ್ಣು ಮಕ್ಕಳು ಯಾರ ಮನೆಯಲ್ಲಿ ಹುಟ್ಟುತ್ತದೆ ಗೊತ್ತ.?

ಈವರೆಗೂ 2,57,217 ಅಸಂಘಟಿತ ಕಾರ್ಮಿಕರು ಈ ಸ್ಮಾರ್ಟ್ ಕಾರ್ಡನ್ನು ಪಡೆದಿದ್ದಾರೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ಸರ್ಕಾರ (Karnataka government) ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಸಮ್ಮಾನ್ ದಿನವನ್ನು (Karmika Samman) ಆಚರಿಸಿ ಆ ವರ್ಷದಲ್ಲಿ ಸಾಧನೆ ಮಾಡಿದ ಕಾರ್ಮಿಕನನ್ನು ಗುರುತಿಸಿ ಪ್ರಥಮ, ದ್ವಿತೀಯ ಹಾಗೂ ದ್ವಿತೀಯ ಬಹುಮಾನವನ್ನು ಕೂಡ ನೀಡಲಾಗುತ್ತದೆ.

ನೀವು ಕಾರ್ಮಿಕರ ಇಲಾಖೆ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುತ್ತಿರುವ ಎಲ್ಲಾ ಪ್ರಯೋಜನಗಳ ವಿವರವನ್ನು ಕೂಡ ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ರೈಲ್ವೆ ರಕ್ಷಣಾ ಪಡೆಯ 9700 ಹುದ್ದೆಗಳ ನೇಮಕಾತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ

ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ:-

● ಕಾರ್ಮಿಕ ಇಲಾಖೆ ಇತ್ತೀಚಿಗೆ ಹೊಸ ವೆಬ್ ಸೈಟನ್ನು ಬಿಡುಗಡೆ ಮಾಡಿದೆ ನೇರವಾಗಿ ಆ ವೆಬ್ಸೈಟ್ಗೆ ಭೇಟಿ ಕೊಡಿ.
● ಮುಖಪುಟ ಓಪನ್ ಆದ ಬಳಿಕ ನಿಮಗೆ 1.ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ 3. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಈ ರೀತಿ ಮೂರು ಆಯ್ಕೆ ಕಾಣುತ್ತದೆ, ಇದರಲ್ಲಿ ಮೂರನೇ ಆಯ್ಕೆಯನ್ನು ಕ್ಲಿಕ್ ಮಾಡಿ.

● ಆಗ ನಿಮಗೆ ಅಸಂಘಟಿತ ವಲಯದ ಕಾರ್ಮಿಕರ ಕುರಿತು ಮಾಹಿತಿ ಹಾಗೂ ಅವರಿಗಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳು ಈ ಎಲ್ಲ ಮಾಹಿತಿಯ ವಿವರಗಳು ಸಿಗುತ್ತದೆ. ಅದರಲ್ಲಿ ಕೊನೆಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಸ್ಮಾರ್ಟ್ ಕಾರ್ಡ್ ಕುರಿತು ವಿವರ ಇರುತ್ತದೆ. ಆ ಪೇಜ್ ಕೊನೆಯಲ್ಲಿ ಅನ್ವಯಿಸು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.

ಕಳಸ ಸ್ಥಾಪನೆಯಿಂದ ಕೆಂಪಾರತಿವರೆಗೆ ವರಮಹಾಲಕ್ಷ್ಮಿ ಪೂಜೆ ಸಂಪೂರ್ಣ ಪೂಜಾ ವಿಧಾನ.! ನಾಳೆಯ ವರಮಹಾಲಕ್ಷ್ಮಿ ಹಬ್ಬವನ್ನು ಈ ರೀತಿ ಆಚಾರಿಸಿ.!

● ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಪೇಜ್ ಓಪನ್ ಆಗುತ್ತದೆ ಮುಖಪುಟದ ಎಡಭಾಗದಲ್ಲಿ ಹಸಿರು ಬಣ್ಣದಲ್ಲಿ know your application status ಅಪ್ಲಿಕೇಶನ್ ಲಿಂಕ್ ಬ್ಲಿಂಕ್ ಆಗುತ್ತಿರುತ್ತದೆ.
● ಅದರ ಮೇಲೆ ಕ್ಲಿಕ್ ಮಾಡಿ ನೀವು ಅಪ್ಲಿಕೇಶನ್ ಹಾಕಿದಾಗ ನಿಮಗೆ ನೀಡಲಾದ ರೆಫರೆನ್ಸ್ ನಂಬರ್ (application reference num.) ಕೇಳುತ್ತದೆ ಅದನ್ನು ಎಂಟ್ರಿ ಸರ್ಚ್ ಮಾಡಿ ನಿಮ್ಮ ಸ್ಮಾರ್ಟ್ ಕಾರ್ಡ್ ಅಪ್ರೂವ್ಡ್ (approved) ಆಗಿದೆಯಾ ಎಂದು ತಿಳಿದುಕೊಳ್ಳಬಹುದು.

● ಕಾರ್ಡ್ ಪ್ರಿ-ವಿವ್ಯೂ (Card preview) ಮಾಡಿದರೆ ನಿಮ್ಮ ಸ್ಮಾರ್ಟ್ ಕಾರ್ಡ್ ಡೀಟೇಲ್ಸ್ ಬರುತ್ತದೆ. ಆದರೆ ನಿಮ್ಮ ಹೆಸರು, ತಂದೆ ಹೆಸರು, ವಿಳಾಸ ಹುಟ್ಟಿದ ದಿನಾಂಕ ನೀವು ಮಾಡುವ ಕೆಲಸ ಮುಂತಾದ ಎಲ್ಲಾ ವಿವರವೂ ಇರುತ್ತದೆ. ಪ್ರಿಂಟ್ (Print) ಆಪ್ಷನ್ ಕ್ಲಿಕ್ ಮಾಡುವ ಮೂಲಕ ಸರ್ಕಾರ ಅಪ್ರೂವ್ಡ್ ಮಾಡಿರುವ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು.

Leave a Comment