ಎಲ್ಲಾ ವಾಹನ ಸಾವರರಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ ಈ ರೂಲ್ಸ್ ಫಾಲೋ ಮಾಡಿದ್ರೆ ದಂಡ ಫಿಕ್ಸ್

 

2019ರ ಏಪ್ರಿಲ್​ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್​ ಪ್ಲೇಟ್​(HSRP)ಅನ್ನು ನವೆಂಬರ್​ 17ರೊಳಗೆ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಹೌದು, ನವೆಂಬರ್ 17, 2023, ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೈ-ಸೆಕ್ಯುರಿಟಿ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಹೊಂದಿರುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಪ್ರಕಟಿಸಿದೆ.

ಆಗಸ್ಟ್ 17, 2023 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ನವೆಂಬರ್ 17 ರ ಗಡುವನ್ನು ಅನುಸರಿಸಲು ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಮತ್ತು ರೂ 500 ರಿಂದ ರೂ 1,000 ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ವೇಳೆ ತಿಳಿಸಿದೆ.

ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ.!

ಶಾಶ್ವತ ಗುರುತಿನ ಸಂಖ್ಯೆ, ಹಾಲೋಗ್ರಾಮ್​ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗೊಂದಿಗೆ ಈ ನಂಬರ್​ ಪ್ಲೇಟ್​ ಸಿದ್ದಪಡಿಸಲಾಗಿದ್ದು, ಇದನ್ನು ಟ್ಯಾಂಪರ್​ ಮಾಡಲು ಸಾಧ್ಯವಿಲ್ಲ. ನವೆಂಬರ್​ 17ರ ಒಳಗಾಗಿ ಈ ನಂಬರ್​ ಪ್ಲೇಟ್​ಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಕಟ್ಟ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನಂಬರ್​ ಪ್ಲೇಟ್​ಗಳಲ್ಲಿ ಏಕತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಕುರಿತಾದ ಅಧಿಸೂಚನೆಯನ್ನು ಆಗಸ್ಟ್​ 17ರಂದು ಹೊರಡಿಸಲಾಗಿದ್ದು, ವಾಹನ ಮಾಲೀಕರಿಗೆ ನವೆಂಬರ್​ 17ರವರೆಗೆ ಗಡುವನ್ನು ನೀಡಲಾಗಿದೆ.

ಪಾಲಿಸದಿದ್ದಲ್ಲಿ ದಂಡ

ಒಂದು ವೇಳೆ ನಿಗದಿತ ವೇಳೆಯಲ್ಲಿ ಮಾಲೀಕರು ಹೊಸ ನಂಬರ್​​ ಪ್ಲೇಟ್​ ಅಳವಡಿಸಲು ವಿಫಲರಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. 500 ರಿಂದ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಏಪ್ರಿಲ್​ 1, 2019ಕ್ಕೂ ಮುನ್ನ ಎರಡು ಕೋಟಿ ವಾಹನಗಳು ನೋಂದಣಿಯಾಗಿವೆ. ಏಪ್ರಿಲ್​ 1, 2019ರಿಂದ ಜಾರಿಗೆ ಬರುವಂತೆ HSRP ನಂಬರ್​ಪ್ಲೇಟ್​ಗಳನ್ನು ಕಡ್ಡಾಯ ಮಾಡಲಾಗಿದೆ.

ಈರುಳ್ಳಿ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ 1.60 ಲಕ್ಷ ಸಹಾಯಧನ ಘೋಷಣೆ ಆಸಕ್ತ ರೈತರು ಇಂದೇ ಅರ್ಜಿ ಸಲ್ಲಿಸಿ.!

ವಾಹನ ತಯಾರಕರು ಈ ಪ್ಲೇಟ್‌ಗಳನ್ನು ವಿತರಕರಿಗೆ ಪೂರೈಸಲು ಅಧಿಕೃತ HSRP ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಳೆಯ ವಾಹನಗಳಿಗೂ ಸಹ HSRP ತಯಾರಕರು ಪ್ಲೇಟ್‌ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ವಾಹನಗಳ ಮಾಲೀಕರು ಅಧಿಕೃತ ಡೀಲರ್‌ಗಳ ಮೂಲಕ HSRP ನಂಬರ್‌ ಪ್ಲೇಟ್‌ ಅನ್ನು ಆರ್ಡರ್ ಮಾಡಬಹುದು ಎಂದು ತಿಳಿಸಿದ್ದಾರೆ.

ನಾಲ್ಕು ಚಕ್ರದ ವಾಹನಗಳಿಗೆ 400-500 ರೂಪಾಯಿ ದರ ನಿಗದಿ ಮಾಡಲಾಗಿದ್ದು, ದ್ವಿಚಕ್ರ ವಾಹನಗಳಿಗೆ 250-300 ರೂಪಾಯಿ ಇರಲಿದೆ. 12 ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನೋಂದಣಿ ಫಲಕಗಳಲ್ಲಿ ( ನಂಬರ್‌ ಪ್ಲೇಟ್‌ ) ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತಾದ ಅಧಿಸೂಚನೆಯನ್ನು ಆಗಸ್ಟ್ 17, 2023 ರಂದು ಹೊರಡಿಸಲಾಗಿದೆ. ಇದಕ್ಕೆ ನವೆಂಬರ್ 17 ರ ಗಡುವನ್ನು ನೀಡಲಾಗಿದೆ. ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಎಲ್ಲರ ಮನೆಯಲ್ಲಿಯೂ ಹೆಣ್ಣು ಮಕ್ಕಳು ಹುಟ್ಟುವುದಿಲ್ಲ ಯಾಕೆ ಗೊತ್ತ.? ಹೆಣ್ಣು ಮಕ್ಕಳು ಯಾರ ಮನೆಯಲ್ಲಿ ಹುಟ್ಟುತ್ತದೆ ಗೊತ್ತ.?

ಎಚ್‌ಎಸ್‌ಆರ್‌ಪಿ ಅವಶ್ಯಕತೆ ಏನು?

ಟ್ಯಾಂಪರಿಂಗ್ ಮತ್ತು ಪ್ಲೇಟ್‌ಗಳನ್ನು ನಕಲಿ ಮಾಡುವುದನ್ನು ತಡೆಯುವ ಎಚ್‌ಎಸ್‌ಆರ್‌ಪಿ ತಡೆಯಲಿದೆ. ವಾಹನಗಳಿಂದ ಉಂಟಾಗುವ ಅಪರಾಧಗಳನ್ನು ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಾಯ ಮಾಡಲಿದೆ. ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎಚ್‌ಎಸ್‌ಆರ್‌ಪಿ ಅನ್ನು ಅಳವಡಿಸಿಕೊಂಡ ನಂತರ, ಅಧಿಕೃತ ವಿತರಕರು ಅಥವಾ ತಯಾರಕರು ವಾಹನ್ ಪೋರ್ಟಲ್‌ನಲ್ಲಿ ಲೇಸರ್-ಕೋಡಿಂಗ್ ಅನ್ನು ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

Leave a Comment