ಚಾಣಕ್ಯನ ನೀತಿಯು ನಮ್ಮ ದೇಶದಲ್ಲಿ ಎಷ್ಟು ಪ್ರಖ್ಯಾತಿ ಹೊಂದಿದೆ ಚಾಣಕ್ಯ ಮಾಡಿರುವ ನೀತಿಗಳು ಒಂದು ಕುಟುಂಬ, ಸಮಾಜ, ರಾಜ್ಯ ಮತ್ತು ದೇಶ ಸರಿದಾರಿಯಲ್ಲಿ ಹೋಗುವುದಕ್ಕೆ ಸೂತ್ರಗಳು ಇದ್ದಂತಿವೆ. ಹಾಗಾಗಿ ಖ್ಯಾತ ನೀತಿವಂತರಾದ ವಿಧುರ ಮತ್ತು ವಿಭೀಷಣ, ಧರ್ಮರಾಯನ ಜೊತೆ ಚಾಣಕ್ಯನನ್ನು ಕೂಡ ಹೋಲಿಕೆ ಮಾಡಲಾಗುತ್ತದೆ.
ಚಾಣಕ್ಯರು ತಮ್ಮ ಗ್ರಂಥಗಳಲ್ಲಿ ಉತ್ತಮ ಸಮಾಜಕ್ಕಾಗಿ ಒಂದು ಸಮಾಜದೊಳಗಿರುವ ಯಾರೆಲ್ಲಾ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಕುರಿತು ಸವಿಸ್ತಾರವಾಗಿ ತಿಳಿಸಿದ್ದಾರೆ. ಒಂದು ಕುಟುಂಬದಲ್ಲಿ ಸದಸ್ಯರ ಸಂಬಂಧ ಹೇಗಿರಬೇಕು, ಮನೆಯ ಹಿರಿಯರು ಹೇಗಿರಬೇಕು, ಮಕ್ಕಳನ್ನು ಬೆಳೆಸುವ ರೀತಿಯಿಂದ ಹಿಡಿದು ಒಬ್ಬ ರಾಜನಾದವನು ತನ್ನ ಪ್ರಜೆಗಳ ಏಳಿಗೆಗಾಗಿ ಯಾವ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎನ್ನುವವರೆಗೂ ಕೂಡ ಇವರ ನೀತಿಗಳಲ್ಲಿ ತಿಳಿಸಲಾಗಿದೆ.
ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!
ರಾಜನೀತಿಗೆ, ಅರ್ಥಶಾಸ್ತ್ರಕ್ಕೆ ಹಾಗೂ ತತ್ವಶಾಸ್ತ್ರಕ್ಕೆ ಹೆಸರುವಾಸಿ ಆಗಿರುವ ಚಾಣಕ್ಯರು ಪತಿ ಪತ್ನಿ ಸಂಬಂಧದ ಬಗ್ಗೆ ಕೂಡ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಆ ಪ್ರಕಾರವಾಗಿ ನಡೆದುಕೊಂಡರೆ ಕುಟುಂಬ ನಂದನವನ ಆಗಿರುತ್ತದೆ. ಪತ್ನಿಯಾದವಳು ಪತಿಗಾಗಿ ಹೇಗೆ ನಡೆದುಕೊಳ್ಳುಬೇಕು ಎನ್ನುವುದರ ಬಗ್ಗೆ ಚಾಕಣಕ ನೀತಿಯಲ್ಲಿ ಹೇಳಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹೆಂಡತಿ ಗಂಡನಿಗಾಗಿ ಮಾಡಲೇಬೇಕಾದ ಕೆಲವು ಕರ್ತವ್ಯಗಳು ಇವೆ, ಅದನ್ನು ತಪ್ಪದೆ ಪೂರೈಸಿದಾಗ ಗಂಡ ಹೆಂಡತಿಯ ಬಾಂಧವ್ಯ ಗಟ್ಟಿಯಾಗುತ್ತದೆ. ಅದರಲ್ಲಿ ಪ್ರಮುಖವಾದ ಮೂರು ವಿಷಯಗಳ ಈ ರೀತಿ ಇದೆ.
● ಗಂಡ ಹೆಂಡತಿ ಮತ್ತೆ ಪ್ರೀತಿ ಬಹಳ ಮುಖ್ಯವಾದದ್ದು. ವಿವಾಹ ಎಂದರೆ ಅದು ಒಬ್ಬರಿಗೆ ಸೇರಿದ್ದಲ್ಲ ದಂಪತಿಗಳಿಬ್ಬರು ಕೂಡ ಎರಡು ದೇಹ ಒಂದು ಜೀವ ಎನ್ನುವಂತೆ ಬದುಕುವ ಬಂಧನ ಅದು. ಹಾಗಾಗಿ ಒಬ್ಬರ ಕಷ್ಟ ಸುಖದಲ್ಲಿ ಮತ್ತೊಬ್ಬರು ಸಹಭಾಗಿಗಳಾಗಬೇಕು. ಕಷ್ಟ ಸುಖ ಇಬ್ಬರಿಗೂ ಕೂಡ ಸೇರಿದ್ದು ಎನ್ನುವ ರೀತಿ ಪ್ರೀತಿಯಿಂದ ಬದುಕಬೇಕು. ಒಬ್ಬರ ಸಮಸ್ಯೆಗೆ ಮತ್ತೊಬ್ಬರು ಸಲಹೆ ನೀಡುತ್ತಾ ಸಹಾಯ ಮಾಡುತ್ತಾ ಪರಿಹರಿಸಿಕೊಳ್ಳಲು ಪ್ರಯತ್ನ ಪಡಬೇಕು. ಈ ವಿಚಾರದಲ್ಲಿ ಹೆಂಡತಿ ನಾಚಿಕೆ ಇಲ್ಲದೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು, ಎಷ್ಟೇ ಒತ್ತಡ ಇದ್ದರೂ ಕೂಡ ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಸಮಯ ನೀಡಬೇಕು.
● ಗಂಡನ ಬೇಸರವನ್ನು ಅರ್ಥ ಮಾಡಿಕೊಂಡು ಹೇಂಡತಿ ಸಂತೈಸಬೇಕು. ಗಂಡನಿಗೆ ಹೊರಗಡೆ ಎಷ್ಟೇ ಸಮಸ್ಯೆ ಇದ್ದರೂ ಕೂಡ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಧೈರ್ಯ ಹಾಗೂ ಸಾಮರ್ಥ್ಯ ಇರುತ್ತದೆ. ಆದರೆ ಕುಟುಂಬದ ಸಮಸ್ಯೆಯು ಅವನನ್ನು ಕುಗ್ಗಿಸಿಬಿಡಬಹುದು ಹಾಗಾಗಿ ಪತ್ನಿಯಾದವಳು ಪತಿಯ ಗುಣ ಸ್ವಭಾವ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕಲೆಯನ್ನು ಕಲಿತಿರಬೇಕು. ಗಂಡನ ಬೇಕು ಬೇಡಗಳನ್ನು ಸರಿಯಾಗಿ ಪೂರೈಸುವ ಜಾಣ್ಮೆ ಹೊಂದಿರಬೇಕು. ಹೀಗಿದ್ದಾಗ ಆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ.
ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!
● ಹೆಣ್ಣಿಗೆ ತಾಳ್ಮೆ ಕರುಣೆ ಅನುಕಂಪ ಗಂಡಿಗಿಂತ ಜಾಸ್ತಿ ಇರುತ್ತದೆ. ಹಾಗಾಗಿ ಯಾವುದೇ ಸಂಬಂಧವಾದರೂ ಕೂಡ ಅವುಗಳ ಮಧ್ಯೆ ಮನಸ್ತಾಪಗಳು ಜಗಳ ಬರುವುದು ಸಾಮಾನ್ಯ. ಹಾಗೆಯೇ ಗಂಡ ಹೆಂಡತಿ ಮಧ್ಯೆ ಕೂಡ ಈ ರೀತಿ ಸಮಸ್ಯೆ ಬಂದಾಗ ಮಾತುಗಳು ನಡೆದಾಗ ಅದನ್ನು ಸಾಧಿಸಿಕೊಂಡು ಹೋಗುವ ಬದಲು ಅನುಸರಿಸಿಕೊಂಡು ಹೋಗುವುದನ್ನು ಕಲಿಯಬೇಕು. ಹೆಣ್ಣು ಮಕ್ಕಳು ಕುಟುಂಬಕ್ಕಾಗಿ ಸೋಲಬೇಕು. ಯಾವುದೇ ವಿಷಯಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದರೂ ಕೊನೆಯಲ್ಲಿ ಅದು ಮುಗುಳುನಗೆಯಲ್ಲಿ ಮುಕ್ತಾಯ ಆಗುವಂತಿರಬೇಕು.