Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

Posted on September 20, 2023 By Kannada Trend News No Comments on ಅಕ್ಟೋಬರ್ 1 ರಿಂದ ಆಸ್ತಿ ನೋಂದಣಿ ದರ ಹೆಚ್ಚಳ ಕಂದಾಯ ಸಚಿವ ಕೃಷ್ಣಬೈರೇ ಗೌಡ ಅವರಿಂದ ಅಧಿಕೃತ ಘೋಷಣೆ.!

 

ನೂತನ ಸರ್ಕಾರದ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವ ಕೃಷ್ಣಭೈರೇಗೌಡ (Revenue Minister Krishna Bairegowda) ಅವರು ಅಧಿಕಾರಕ್ಕೆ ಬಂದಾಗ ನಂತರದಿಂದ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ಆಸ್ತಿ ರಿಜಿಸ್ಟ್ರೇಷನ್ ( Ptoperty Registration) ಕುರಿತು ಮಹತ್ವದ ಆದೇಶ ಹೊರಡಿಸಿದ್ದ ಕಂದಾಯ ಸಚಿವರು ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ ತಡವಾಗುತ್ತಿರುವುದರ ಬಗ್ಗೆ ಕೂಡ ಆಕ್ಷೇಪ ಹಾಕಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬಿಸಿ ಮುಟ್ಟಿಸಿದ್ದರು.

ಸರ್ಕಾರಿ ಆಸ್ತಿಗಳ ಒತ್ತುವರಿ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ ಇವರು ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಬರ (drought declare) ಘೋಷಿತ ತಾಲೂಕುಗಳ ಪರಿಷ್ಕರಣೆ ಹಾಗೂ ಘೋಷಣೆ ಮಾಡಿ ಕೇಂದಕ್ಕೆ ಮಾಹಿತಿ ತಲುಪಿಸಿ ಪರಿಹಾರ ಕೊಡಿಸುವ ವಿಚಾರದಲ್ಲಿ ಬ್ಯುಸಿ ಆಗಿದ್ದಾರೆ.

ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!

ಇದೆಲ್ಲದರ ನಡುವೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಆದೇಶವನ್ನು ಹೊರಡಿಸಿದ ಸಚಿವರು ಅಕ್ಟೋಬರ್ 1 ರಿಂದಲೇ ಈ ಹೊಸ ಆದೇಶ ಅನ್ವಯವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಆಸ್ತಿ ನೋಂದಣಿ ಮಾರ್ಗಸೂಚಿ ದರದ (Property registration guidlines rate) ಬಗ್ಗೆ ವಿಕಾಸ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ (Press meet at Vikas Souda ) ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಐದು ವರ್ಷಗಳಿಂದ ಹೆಚ್ಚಳವಾಗದೆ ಉಳಿದಿದ್ದ ಆಸ್ತಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುವುದರ ಬಗ್ಗೆ ಮತ್ತು ರಾಜ್ಯದಾದ್ಯಂತ ಯಾವ ರೀತಿ ಹೆಚ್ಚು ಮಾಡುವುದಾಗಿ ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತು ಕೆಲ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ ಹಾಗೂ ಮತ್ತಿತರ ಕಾರಣಗಳಿಂದ ಕಳೆದ 5 ವರ್ಷಗಳಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಿರಲಿಲ್ಲ‌.

ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!

ನಿಯಮದ ‌ಪ್ರಕಾರ ಪ್ರತಿ ವರ್ಷ ಕೂಡ ಮಾರ್ಗಸೂಚಿ ದರ ಹೆಚ್ಚಳ ಮಾಡಬೇಕು. ಹೀಗಾಗಿ ನಾವು ಈಗ ದರ ಹೆಚ್ಚಳ ಮಾಡುತ್ತಿದ್ದೇವೆ. ಇಡೀ ರಾಜ್ಯಕ್ಕೆ ಒಂದೇ ರೀತಿಯಲ್ಲಿ ಮಾರ್ಗಸೂಚಿ ದರ ಹೆಚ್ಚಳ ಮಾಡುತ್ತಿಲ್ಲ, ಬದಲಿಗೆ ಆಯಾ ಪ್ರದೇಶಗಳ ಅನುಗುಣವಾಗಿ ನಿರ್ಧಾರ ಮಾಡಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಂತಹ ಭಾಗಗಳಲ್ಲಿ ದರ ಪರಿಷ್ಕರಣೆ ಆಗಲ್ಲ.

ಆದರೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಅಲ್ಲಿ ದರ ಹೆಚ್ಚಳ ಆಗುತ್ತದೆ. ಹೆದ್ದಾರಿ, ವಿಮಾನ ನಿಲ್ದಾಣ, ಐಟಿ, ಬಿಟಿ ಈ ರೀತಿ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇರುವುದು ತಿಳಿದು ಬಂದಿದೆ. ಹಾಗಾಗಿ ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಸರಾಸರಿ 25% ರಿಂದ 30% ಮಾರ್ಗಸೂಚಿ ದರ ಏರಿಕೆ ಆಗಲಿದೆ ಎನ್ನುವ ಸುಳಿವು ನೀಡಿದ ಕಂದಾಯ ಸಚಿವರು ಈ ಬಗ್ಗೆ ಆಕ್ಷೇಪ ಇದ್ದರೆ ನಾಗರಿಕರಿಗೆ ಅವರ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

ಆಕ್ಷೇಪಣೆ ಗಮನಿಸಿ ನಂತರ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಮಾರ್ಗಸೂಚಿ ದರ ಏರಿಕೆಯಿಂದ ಸಹಜವಾಗಿ ಒಂದಷ್ಟು ವ್ಯತ್ಯಾಸ ಆಗುತ್ತದೆ. ಆದರೆ ಅದು ಎರಡರಿಂದ ಮೂರು ತಿಂಗಳಲ್ಲಿ ಸರಿಯಾಗುತ್ತದೆ ಕಪ್ಪು ಹಣ (to Controll Black Money flow) ಬಳಸಿ ಆಸ್ತಿ ಪರಿಭಾರೆ ನಡೆಯುತ್ತಿದೆ ಇದೆಲ್ಲವನ್ನೂ ತಡೆಯಬೇಕು‌ ಎಂದರೆ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ‌ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗುತ್ತಿದೆ ಇದರಿಂದಾಗಿ ಸರ್ಕಾರಕ್ಕೂ ಕೂಡ ಲಾಭ ಆಗಲಿದೆ, ವಾರ್ಷಿಕ 2.5 ಸಾವಿರ ಕೋಟಿ ಸರ್ಕಾರಕ್ಕೆ ಆದಾಯವಾಗಲಿದೆ ಎಂದರು.

Useful Information
WhatsApp Group Join Now
Telegram Group Join Now

Post navigation

Previous Post: ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!
Next Post: ಸೊಂಟ ನೋವು ಗುಣವಾಗಲು ಈ ಟಿಪ್ಸ್ ಫಾಲೋ ಮಾಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore