ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಗ್ಯಾರಂಟಿ ಯೋಜನೆಗಳದ್ದೇ (Guarantee Schemes) ಅತಿ ಹೆಚ್ಚು ಚರ್ಚೆ, ಅದರಲ್ಲೂ ಮಹಿಳೆಯರ ಪಾಲು ಹೆಚ್ಚು ಎಂದು ಹೇಳಿದರೆ ತಪ್ಪಲ್ಲ. ಯಾಕೆಂದರೆ ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲತೆ ಇರುವುದರಿಂದ ಈ ವಿಚಾರದಲ್ಲಿ ಮಹಿಳೆಯರೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ಎಂದು ಕೂಡ ಹೇಳಬಹುದು.
ಯಾಕೆಂದರೆ, ಸರ್ಕಾರ ಘೋಷಿಸಿರುವ ಈ ಗ್ಯಾರೆಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಕುಟುಂಬದ ಹಿರಿಯ ಮಹಿಳೆಯ ಖಾತೆಗೆ (Annabhagya and Gruhalakshmi Scheme amount credited to head of the family Bank accout) ಬರುತ್ತಿದೆ.
ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!
ಅದರೊಂದಿಗೆ ಶಕ್ತಿ ಯೋಜನೆಯಡಿ (Shakthi Scheme) ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ (Free travel) ಮಾಡಬಹುದಾಗಿದೆ ಹಾಗಾಗಿ ಗ್ಯಾರೆಂಟಿ ಯೋಜನೆಗಳ ಬಹುಪಾಲು ಮಹಿಳೆಯರದ್ದೇ ಎಂದೇ ಹೇಳಬಹುದು. ಸರ್ಕಾರ ಜಾರಿ ಮಾಡಿದ ಮೊದಲನೇ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಯಾಗಿದೆ.
ಆ ಯೋಜನೆ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸರ್ಕಾರ ನೀಡಿರುವ ಈ ಅವಕಾಶದಿಂದ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ರಾಜ್ಯ ಸರ್ಕಾರದ ನಾಲ್ಕು ನಿಗಮದ ಬಸ್ ಗಳಲ್ಲಿ ಶುಲ್ಕ ರಹಿತವಾಗಿ ಓಡಾಡುತ್ತಿದ್ದಾರೆ. ಆದರೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುವ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ.
8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?
ಶೂನ್ಯ ದರ ಟಿಕ್ಮೆಟ್ ಆಗಿದ್ದರೂ ಕರ್ನಾಟಕದ ಮಹಿಳೆ ಎಂದು ಗುರುತಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಕಂಡಕ್ಟರ್ ಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ನೀಡಿರುವ ಯಾವುದೇ ಗುರುತಿನ ಚೀಟಿ ತೋರಿಸಬೇಕು. ಸದ್ಯಕ್ಕೆ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳನ್ನು ತೋರಿಸಿ ಈ ಉಚಿತ ಪ್ರಯಾಣದ ಅನುಕೂಲತೆ ಪಡೆಯುತ್ತಿದ್ದಾರೆ.
ಯೋಜನೆ ಆರಂಭ ಆದಾಗಲೇ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Ramalinga Reddy) ಅವರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವುದಕ್ಕೆ ಮೂರು ತಿಂಗಳ ಒಳಗೆ ಸ್ಮಾರ್ಟ್ ಕಾರ್ಡ್ (Shakthi Smart card) ಪಡೆಯಬೇಕು ಆದರೆ ಅಲ್ಲಿಯವರೆಗೂ ಯಾವುದೇ ಗುರುತಿನ ಚೀಟಿ ತೋರಿಸಿ ಪ್ರಯಾಣಿಬಹುದು ಎಂದು ಹೇಳಿದ್ದರು. ಆದರೆ ಈಗ ಯೋಜನೆ 100 ದಿನಗಳತ್ತ ಕಾಲಿಡುತ್ತಿದ್ದರೂ ಸ್ಮಾರ್ಟ್ ಕಾರ್ಡ್ ವಿತರಣೆಯಾಗಿಲ್ಲ.
ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!
ಈ ಬಗ್ಗೆ ಅನೇಕ ಊಹಾಪೋಹಗಳ ಗಾಳಿ ಸುದ್ದಿ ಹಬ್ಬಿತ್ತು. ಅಂತಿಮವಾಗಿ ಇದಕ್ಕೆ ಸ್ಪಷ್ಟತೆ ಸಿಕ್ಕಿದ್ದು, ಬಲವಾದ ಮೂಲಗಳ ಮಾಹಿತಿ ಪ್ರಕಾರ ಇನ್ನು ಎರಡೇ ವಾರಗಳಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಯೋಜನೆ ಆರಂಭವಾಗಲಿದೆ. ಎಲ್ಲಾ ಮಹಿಳೆಯರು ಕೂಡ ಸೇವಾ ಸಿಂಧು ಕೇಂದ್ರಗಳಿಗೆ (Sevasindhu Centre) ಹೋಗಿ ತಮ್ಮ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ತೋರಿಸಿ ಈ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು.
ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ಗೆ ಅವಕಾಶ ಇಲ್ಲ ಮಾಸಿಕ ಪಾಸ್ ನಂತೆ ಪ್ರತ್ಯೇಕ ಪಾಸ್ ವಿತರಣೆ ಅವಕಾಶ ನೀಡದೆ ಅರ್ಜಿ ಸಲ್ಲಿಸಿದ ವೇಳೆ ಪಡೆಯುವ ಪ್ರಿಂಟ್ ಅಷ್ಟೇ ಮಾನ್ಯ ಎಂದು ಸೂಚಿಸಲಾಗಿದೆ. ಈ ರೀತಿ ಪಡೆಯುವ ಪ್ರಿಂಟ್ ಗೆ ಮಹಿಳೆಯರು ಲ್ಯಾಮಿನೇಷನ್ ಮಾಡಿ ಇಟ್ಟುಕೊಳ್ಳಬೇಕು ಮತ್ತು ಪ್ರಯಾಣ ಮಾಡುವಾಗ ಇತರೆ ಗುರುತಿನ ಚೀಟಿ ಬದಲು ಈ ಸ್ಮಾರ್ಟ್ ಕಾರ್ಡ್ ಅನ್ನೇ ತೋರಿಸಬೇಕು.
ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!
ಒಂದು ವೇಳೆ ಈ ಉಚಿತ ಪ್ರಯಾಣದ ಅವಕಾಶ ಪಡೆಯುವುದಕ್ಕಾಗಿ ಅನ್ಯ ರಾಜ್ಯದ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಬದಲಾಯಿಸಿಕೊಂಡರೆ ಅಂತವುಗಳನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ವಜಾ ಮಾಡಲಾಗುತ್ತದೆ ಎನ್ನುವ ಮಾಹಿತಿ ಕೇಳಿ ಬಂದಿದೆ.