ಜೀವನದಲ್ಲಿ ಮನುಷ್ಯನಿಗೆ ನಾನಾ ಬಗೆಯ ಕ’ಷ್ಟಗಳು ಬರುತ್ತವೆ. ಇವುಗಳಲ್ಲಿ ಸಾಲ ಕೂಡ ಒಂದು, ಆದರೆ ಈ ಸಾಲ ಎನ್ನುವ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಎಷ್ಟು ಕೆಟ್ಟ ಪರಿಸ್ಥಿತಿ ಎಂದರೆ ಅವರ ಬದುಕಿನ ನೆಮ್ಮದಿಯನ್ನೇ ಅದು ಕಿತ್ತುಕೊಂಡು ಬಿಡುತ್ತದೆ. ಸಾಲ ತೀರಿಸುವವರೆಗೂ ಕೂಡ ಅವರಿಗೆ ಮಾನಸಿಕ ಶಾಂತಿ ಇರುವುದಿಲ್ಲ, ಈ ಕಾರಣಕ್ಕಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.
ಜೊತೆಗೆ ಕೆಲಸದಲ್ಲಿ ಆಸಕ್ತಿ ತೋರಲಾಗದೆ ಕುಟುಂಬದವರ ಜೊತೆ ಪ್ರೀತಿಯಿಂದ ಇರಲಾಗದೆ ಕಿರಿಕಿರಿಯಾಗಿ ವಿಚಿತ್ರ ವೇದನೆಯನ್ನು ಅನುಭವಿಸುತ್ತಾರೆ. ಹಾಗಾಗಿ ಸಾಲವನ್ನು ಶೂಲ ಎನ್ನುವುದು. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಪರಿಸ್ಥಿತಿಯಲ್ಲಿ ಸಾಲ ಮಾಡಬೇಕಾದ ಅವಶ್ಯಕತೆ ಬರುತ್ತದೆ. ಈ ರೀತಿ ಸಾಲ ತೆಗೆದುಕೊಂಡ ಮೇಲೆ ಅದನ್ನು ತೀರಿಸಲು ನಾವು ಹಾಕಿಕೊಂಡ ಯೋಜನೆ ನಮ್ಮ ಪ್ರಕಾರ ನಡೆಯದಿದ್ದಾಗ ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…
ಈ ರೀತಿ ನಮ್ಮ ಜೀವನದಲ್ಲಿ ನಮ್ಮಿಂದ ಪರಿಹರಿಸಿಕೊಳ್ಳಲಾಗದ ಸಮಸ್ಯೆ ಬಂದಾಗ ಭಗವಂತನೇ ದಾರಿ ಆಗಿರುತ್ತಾನೆ. ಆತನ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಭಕ್ತಿಯಿಂದ ಪ್ರಾರ್ಥನೆ ಮಾಡಿ ಬೇಡಿಕೊಂಡಾಗ ಖಂಡಿತವಾಗಿಯೂ ನಮಗೆ ಸಾಲ ತೀರಿಸುವ ದಾರಿ ಸಿಕ್ಕೇ ಸಿಗುತ್ತದೆ. ಜೀವನದಲ್ಲಿ ದೇವರು ಒಳ್ಳೆಯವರಿಗೆ ಪರೀಕ್ಷೆ ಮಾಡಿ ನೋಡಬಹುದು ಆದರೆ ಒಳ್ಳೆಯವರ ಕೆಟ್ಟ ಪರಿಸ್ಥಿತಿಯಲ್ಲಿ ಎಂದು ಕೂಡ ಕೈ ಬಿಡುವುದಿಲ್ಲ.
ಹಾಗಾಗಿ ನೀವು ಇಂತಹ ಸಂದರ್ಭಗಳಲ್ಲಿ ಭಗವಂತನ ಮೊರೆ ಹೋಗುವುದೇ ಪರಿಹಾರ. ಅದರಲ್ಲೂ ಕೂಡ ಕೆಲವು ವಿಶೇಷವಾದ ಆಚರಣೆಗಳು ಇದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಖಂಡಿತವಾಗಿಯೂ ನೂರಕ್ಕೆ ನೂರರಷ್ಟು ನಿಮ್ಮ ಸಮಸ್ಯೆ ತೀರುವುರಲ್ಲಿ ಅನುಮಾನವೇ ಇಲ್ಲ. ಅಂತಹದ್ದೇ ಒಂದು ಆಚರಣೆ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!
ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಯಾವುದೇ ಪುರುಷ ಅಥವಾ ಮಹಿಳೆಯು ಈ ಆಚರಣೆಯನ್ನು ಮಾಡಬಹುದು. ಮಂಗಳವಾರದಂದು ಸಂಜೆ 7ರ ಸಮಯಕ್ಖೆ ನೀವು ಇದನ್ನು ಮಾಡಬೇಕು. ಮಂಗಳವಾರದಂದು ನಿಮ್ಮ ಮನೆಯನ್ನು ಶುದ್ಧ ಮಾಡಿ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ದೀಪ ಹಚ್ಚಿ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಳ್ಳಿ ಈ ಸಮಯದಲ್ಲಿ ತಪ್ಪದೆ ಆಂಜನೇಯನ ಸ್ವಾಮಿಯನ್ನು ಕೂಡ ಸ್ಮರಣೆ ಮಾಡಿ.
ಮನಸಾರೆ ನಿಮ್ಮ ಕ’ಷ್ಟವನ್ನು ದೇವರ ಬಳಿ ಹೇಳಿಕೊಂಡಿ ನಂತರ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಇದು ಎಲ್ಲೂ ಒಡೆದಿರಬಾರದು, ಬಾಡಿರಬಾರದು ಅಚ್ಚ ಹಸಿರಾದ ಒಂದು ವೀಳ್ಯದೆಲೆ ತೆಗೆದುಕೊಂಡು ಅದರ ತೊಟ್ಟನ್ನು ತೆಗೆಯಿರಿ. ಈಗ ಅದರ ಮೇಲೆ ಎರಡು ಏಲಕ್ಕಿ ಹಾಗೂ ಒಂದು ಲವಂಗವನ್ನು ಹಾಕಿ ಏಲಕ್ಕಿ ಹಾಗೂ ಲವಂಗ ಕೂಡ ಚೆನ್ನಾಗಿರಬೇಕು, ಚೂರಾಗಿರಬಾರದು.
ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!
ಇದನ್ನು ಪಾನ್ ರೀತಿ ಮಡಚಿ ಮತ್ತೊಂದು ಲವಂಗದಿಂದ ಚುಚ್ಚಿ ಅಥವಾ ಕೆಂಪು ದಾರದಿಂದ ಇದನ್ನು ಕಟ್ಟಿ. ಸಂಜೆ ಆಂಜನೇಯ ಸ್ವಾಮಿ ಗುಡಿಗೆ ಹೋಗಿ ಅರ್ಚಕರ ಬಳಿ ಈ ಪಾನ್ ಕೊಟ್ಟು ಆಂಜನೇಯ ಸ್ವಾಮಿಯ ಪಾದದ ಹತ್ತಿರ ಇಡಲು ಹೇಳಿ ಮತ್ತು ನೀವು ಕೂಡ ಆಂಜನೇಯನನ್ನು ಮನಸಾರೆ ಪ್ರಾರ್ಥಿಸಿ, ನಿಮ್ಮನ್ನು ಈ ಸಮಸ್ಯೆಯಿಂದ ಹೊರ ತರುವಂತೆ ಕೇಳಿಕೊಳ್ಳಿ.
ಪ್ರಾರ್ಥನೆ ಮಾಡಿ ಸಾಧ್ಯವಾದರೆ ಹನುಮಾನ್ ಚಾಲೀಸಾ ಕೂಡ ಪಠಣೆ ಮಾಡಿ. ಈ ಆಚರಣೆಯನ್ನು ಮೂರು ತಿಂಗಳುಗಳ ಕಾಲ ಪ್ರತಿ ಮಂಗಳವಾರ ಮಾಡಬೇಕು, ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸುವಂತಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ಬಂದರೆ ಆಚರಣೆ ಮಾಡುತ್ತಿದ್ದವರು ಅನುಪಸ್ಥಿತಿಯಲ್ಲಿ ಕುಟುಂಬದ ಬೇರೆ ಸದಸ್ಯರು ಇದನ್ನು ಮಾಡಬಹುದು.
ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!
ಈ ರೀತಿ ಮಾಡಿದರೆ ಭಗವಂತ ನಿಮ್ಮ ಸಮಸ್ಯೆಗೆ ದಾರಿ ತೋರಿಸುತ್ತಾರೆ. ನಿಮ್ಮ ಉದ್ಯೋಗದಲ್ಲಿ ಬಡ್ತಿಯಾಗಿ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ, ಅನಿರೀಕ್ಷಿತ ಧನಾಗಮನವಾಗಿ ನಿಮ್ಮ ಸಾಲದ ಹೊರೆ ಇಳಿಸಿಕೊಳ್ಳುಸುವುದಕ್ಕೆ ಖಂಡಿತವಾಗಿಯೂ ಮಾರ್ಗ ದೊರೆಯುತ್ತದೆ. ಅದನ್ನು ಮಾಡುವ ಮುನ್ನ ಆಂಜನೇಯ ಸ್ವಾಮಿಯಲ್ಲಿ ಅಚಲವಾದ ನಂಬಿಕೆ ಇಡುವುದು ಮುಖ್ಯ.