ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

 

ಮಕ್ಕಳಿಗೆ ಎಷ್ಟೇ ವಯಸಾಗಿದ್ದರೂ ಕೂಡ ಹೆತ್ತವರಿಗೆ ಅವರು ಎಂದೇಂದಿಗೂ ಕೂಡ ಮಕ್ಕಳೇ, ಆದರೆ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ, ಎದುರು ಮಾತನಾಡುತ್ತಿದ್ದರೆ ಅಥವಾ ಶಾಲಾ ಕಾಲೇಜುಗೆ ಹೋಗುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಕೊಡದೆ ಕೆಟ್ಟ ಸಹವಾಸ ಮಾಡಿದ್ದರೆ ಯಾವುದಾದರೂ ಕೆಟ್ಟ ಚಟಕ್ಕೆ ಬಿದ್ದಿದ್ದರೆ ಅದನ್ನೆಲ್ಲ ಸರಿಪಡಿಸಲು ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಅತಿ ಸರಳವಾದ ಯಾವುದೇ ಅಡ್ಡ ಪರಿಣಾಮ ಬೀರದ ಕಡಿಮೆ ಸಮಯ ಹಾಗೂ ಹಣ ಖರ್ಚಾಗುವ ಪರಿಹಾರ ಇದಾಗಿದೆ. ತುಂಬಾ ಉತ್ತಮವಾದ ಪರಿಣಾಮವನ್ನು ಇದು ನಿಮ್ಮ ಮಕ್ಕಳ ಜೀವನದ ಮೇಲೆ ಬೀರಿ ನಿಮ್ಮ ಮನೆಯ ವಾತಾವರಣವನ್ನೇ ಬದಲಾಯಿಸುತ್ತದೆ ಹಾಗಾಗಿ ಒಮ್ಮೆ ಪ್ರಯತ್ನಿಸಿ ನೋಡಿ. ಈ ಉಪಾಯ ಮಾಡಲು ನೀವು 40 ಚಿಕ್ಕ ಮಣ್ಣಿನ ದೀಪಗಳನ್ನು ಖರೀದಿಸಬೇಕು, ಒಂದು ವೇಳೆ ನಿಮಗೆ 40 ದೀಪಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದರೆ ಒಂದೇ ದೀಪವನ್ನು ಪ್ರತಿದಿನವೂ ಕೂಡ ಸ್ವಚ್ಛ ಮಾಡಿ ಮತ್ತೆ ಬಳಸಬಹುದು.

ನೀವು ಪ್ರತಿದಿನವೂ ದೇವರ ಮನೆಯಲ್ಲಿ ದೀಪ ಬೆಳಗಿಸಿ ಪೂಜೆ ಮಾಡುತ್ತೀರಾ ಅದೇ ಸಮಯದಲ್ಲಿ ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಸಾಸಿವೆ ಎಣ್ಣೆ ಹಾಕಿ ನಾಲ್ಕು ಕಾಳು ಮೆಣಸು ಹಾಕಿ ಒಂದು ಕರ್ಪೂರವನ್ನು ಇಟ್ಟು ದೀಪ ಹಚ್ಚಬೇಕು. ಆದರೆ ಈಗಲೇ ಮನೆಯಲ್ಲಿ ಎರಡು ದೀಪ ಹಚ್ಚುತ್ತಿದ್ದರೆ ಈ ದೀಪ ಸೇರಿ ಮೂರೂ ದೀಪ ಆಗಬಾರದು ಮತ್ತು ಒಂದು ಎರಡು ಬೇರೆ ದೀಪ ಸೇರಿಸಿ ನಾಲ್ಕು ಅಥವಾ ಐದು ದೀಪ ಆಗುವಂತೆ ಹಚ್ಚಿ 40 ದಿನಗಳ ನಿರಂತರವಾಗಿರಬೇಕು.

ಹೆಣ್ಣು ಮಕ್ಕಳಿಗೆ ಮುಟ್ಟಾಗುವ ಸಮಸ್ಯೆ ಇದ್ದಾಗ ಕುಟುಂಬದ ಬೇರೆ ಸದಸ್ಯರು ಇದನ್ನು ಮುಂದುವರಿಸಬೇಕು, ಯಾವುದೇ ಕಾರಣಕ್ಕೂ ಮಧ್ಯ ನಿಲ್ಲಿಸಬಾರದು. ಪ್ರತಿದಿನವೂ ಬೆಳಿಗ್ಗೆ 9 ಗಂಟೆ ಒಳಗಡೆ ಇದನ್ನು ಮಾಡಬೇಕು ಜೊತೆಗೆ ರಾಹುಕಾಲವನ್ನು ನೋಡಿಕೊಂಡು ಆ ಸಮಯ ಇಲ್ಲದೆ ಇದ್ದಾಗ ದೀಪ ಹಚ್ಚಬೇಕು. ಕುಲದೇವರು ಹಾಗೂ ಇಷ್ಟದೇವರ ಬಳಿ ನಿಮ್ಮ ಮಕ್ಕಳ ಯಾವ ಸಮಸ್ಯೆ ಇದೆ ಅದನ್ನು ಹೇಳಿ ಪರಿಹಾರ ಮಾಡುವಂತೆ ಕೇಳಿಕೊಳ್ಳಬೇಕು.

ಇದಾದ ಮೇಲೆ ಹಸಿ ಹಾಲು ಅಥವಾ ಅರಿಶಿಣದ ನೀರನ್ನು ಉಂಗುರದ ಬೆರಳಿನಲ್ಲಿ ತೆಗೆದುಕೊಂಡು ಮಕ್ಕಳ ಹಣೆಗೆ ಇಡಬೇಕು. ದಿನವೂ ಹೊಸ ದೀಪ ತೆಗೆದುಕೊಂಡು ಹಳೆ ದೀಪವನ್ನು ಒಂದು ಡಬ್ಬದಲ್ಲಿ ಹಾಕಿಡಬೇಕು. ಅಥವಾ ದೀಪ ಸ್ವಚ್ಛ ಮಾಡಿ ಅದೇ ರೀತಿ ಹಚ್ಚಿ. 40 ದಿನಗಳು ಪೂರ್ತಿ ಆದಮೇಲೆ ದೀಪಗಳನ್ನೆಲ್ಲ ಯಾವುದಾದರೂ ಅರಳಿ ಮರದ ಕೆಳಗೆ ಇಟ್ಟು ಪ್ರಾರ್ಥಿಸಿ ಬರಬೇಕು. ಈ ರೀತಿ ಆದಾಗ ಚಮತ್ಕಾರವೇ ನಡೆದು ನಿಮ್ಮ ಮಕ್ಕಳ ಬುದ್ಧಿ ಬದಲಾಗುತ್ತದೆ.

ಮತ್ತೊಂದು ಉಪಾಯ ಇದೆ ಈ ಮೇಲೆ ಹೇಳಿದ ಉಪಾಯ ಮಾಡಲು ಆಗಲಿಲ್ಲ ಎಂದರೆ ಬುಧವಾರದಂದು ಕರ್ಚಿಫ್ ಅಗಲದ ಹಸಿರು ಬಟ್ಟೆ ತೆಗೆದುಕೊಂಡು ಅದರ ಮೇಲೆ 23 ಹೆಸರು ಕಾಳು ಹಾಕಿ ಹಸಿರು ದಾರದಿಂದ ಅದನ್ನು ಕಟ್ಟಿ ಮೊದಲಿಗೆ ಇದನ್ನು ದೇವರ ಕೋಣೆಯಲ್ಲಿ ಇಟ್ಟು ಗಣಪತಿ ಹಾಗೂ ಬುಧಗ್ರಹದ ಬಳಿ ಬೇಡಿಕೊಳ್ಳಿ. ನಮ್ಮ ಮಕ್ಕಳಿಗೆ ವಿದ್ಯಾ ಬುದ್ಧಿ ಕೊಡು ಅವರು ಹೇಳಿದ ಮಾತು ಕೇಳುವ ಹಾಗೆ ಮಾಡು ಕೆಟ್ಟ ಜನರಿಂದ ದೂರ ಮಾಡು ಎಂದು ಕೇಳಿಕೊಂಡು ಆ ಗಂಟನ್ನು ನಿಮ್ಮ ಮಕ್ಕಳ ಶಾಲಾ ಕಾಲೇಜು ಬ್ಯಾಗ್ ಅಲ್ಲಿ ಇಡೀ.

ಇದೆ ರೀತಿ ಮತ್ತೊಂದು ಗಂಟು ಮಾಡಿಕೊಂಡು ಅದನ್ನು ತಲೆ ದಿಂಬಿನ ಕೆಳಗೆ ಇಡಿ. ಪ್ರತಿದಿನವೂ ಕೂಡ ನೀವು ಪಾಸಿಟಿವ್ ಆಗಿ ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕು. ನನ್ನ ಮಕ್ಕಳು ಬದಲಾಗುತ್ತಿದ್ದಾರೆ, ಅವರು ಈಗ ಚೆನ್ನಾಗಿ ಓದುತ್ತಿದ್ದಾರೆ, ಬದಲಾವಣೆ ಆರಂಭವಾಗುತ್ತದೆ ಎಂದು ಹೇಳಿ ಒಂದು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಇದನ್ನು ಬದಲಾಯಿಸಬೇಕು. ಹಳೆಯಗಂಟನ್ನು ಯಾರು ತುಳಿಯದ ಯಾವುದಾದರೂ ಸ್ಥಳಕ್ಕೆ ಹಾಕಿ ಬರಬೇಕು ಅಥವಾ ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.

Leave a Comment