ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ವತಿಯಿಂದ ಗ್ಯಾಸ್ ಸಿಲೆಂಡರ್ (Gas Cylinder) ವಿಚಾರದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ರಕ್ಷಾಬಂಧನ ಹಬ್ಬದ ಪ್ರಯುಕ್ತ ದೇಶದ ಎಲ್ಲಾ ಮಹಿಳೆಯರಿಗೂ ಅನುಕೂಲ ಮಾಡಿಕೊಡಬೇಕು ಅನ್ನುವ ದೃಷ್ಟಿಕೋನದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಎಲ್ಲ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ಇಳಿಸಿದ್ದರು.

ಇದರಿಂದಾಗಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಕಲೆಕ್ಷನ್ ಪಡೆದವರಿಗೆ ಡಬಲ್ ಧಮಾಕವಾಗಿತ್ತು. ಯಾಕೆಂದರೆ ಈಗಾಗಲೇ ಅವರು ತಮ್ಮ ವರ್ಷದ ಬಳಕೆಯಲ್ಲಿ 12 ಸಿಲಿಂಡರ್ ಗಳಿಗೆ ಸಬ್ಸಿಡಿ (Subsidy) ಪಡೆಯುತ್ತಿದ್ದರು ಇದರೊಂದಿಗೆ ಈಗ ಘೋಷಿಸಿದ 200 ರೂ ಸೇರಿ ಒಟ್ಟು 400 ರೂಪಾಯಿ ಕಡಿಮೆ ಬೆಲೆಗೆ ಸಿಲಿಂಡರ್ ಪಡೆಯುವಂಥಾಯ್ತು.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಪೈಕಿ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PM Ujwal Scheme) ಕೂಡ ಒಂದು. ಈ ಯೋಜನೆಯಡಿ ದೇಶದ ಎಲ್ಲಾ ಮಹಿಳೆಯರಿಗೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲು ನಿರ್ಧರಿಸಿದ್ದರು.

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಉಚಿತವಾಗಿ ಒಂದು ತುಂಬಿದ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ಗ್ಯಾಸ್ ಲೈಟರ್ ಹಾಗೂ ರೆಗ್ಯುಲೇಟರ್ ಜೊತೆಗೆ ಕೈಪಿಡಿ ಕೂಡ ಪಡೆಯಬಹುದು. ಮೊದಲಿಗೆ 8 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ತಲುಪಿಸಬೇಕು ಎನ್ನುವ ಉದ್ದೇಶ ಇತ್ತಾದರೂ ಯಶಸ್ವಿಯಾಗಿ ಇಂದಿಗೆ ಇದು 10 ಲಕ್ಷದ ಗಡಿ ದಾಟಿದೆ.

ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

2023-24ನೇ ಸಾಲಿನಲ್ಲಿ 75 ಲಕ್ಷ ಕುಟುಂಬಗಳಿಗೆ ಈ ಯೋಜನೆಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸಹಿ ಕೂಡ ಹಾಕಲಾಗಿದೆ. ಇದರ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Central Minister Anuragh Takur) ಅವರೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆ ಪ್ರಕಾರವಾಗಿ ಹೊಸದಾಗಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆಯುವ ಕುಟುಂಬಗಳು ಕೂಡ ಕೇಂದ್ರ ಸರ್ಕಾರ ಕಳೆದ ತಿಂಗಳು ಘೋಷಿಸಿದ್ದ 200 ರೂಪಾಯಿ ಬೆಲೆ ಇಳಿಕೆಯ ಫಲಾನುಭವಿಗಳಾಗಬಹುದು. ಆದರೆ ಒಂದು ವರ್ಷದಲ್ಲಿ 12 ಗ್ಯಾಸ್ ಮಾತ್ರ ಈ ಬೆಲೆ ಅನ್ವಯವಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ.!

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಪ್ರಯೋಜನ ಪಡೆಯಲು ಬಯಸುವವರು ಇದುವರೆಗೆ ತಮ್ಮ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್ ಪಡೆದಿರಬಾರದು. ಈ ರೀತಿ ಹೊಸದಾಗಿ ಇದೆ ಮೊದಲ ಬಾರಿಗೆ ಗ್ಯಾಸ್ ಕಲೆಕ್ಷನ್ ಪಡೆಯುವ ಬಡ ಕುಟುಂಬಗಳು ಮಾತ್ರ ಇದನ್ನು ಪಡೆಯಬಹುದಾಗಿದೆ. ಈ ಕೂಡಲೇ ಹತ್ತಿರದಲ್ಲಿರುವ ಗ್ಯಾಸ್ ಏಜೆನ್ಸಿಗೆ (Gas Agency) ಹೋಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ದಾಖಲೆ ಜೊತೆಗೆ ವೈಯಕ್ತಿಕ ಕೆಲ ವಿವರಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ನಮೂದಿಸಿಕೊಂಡರೆ.

ನೀವು ಸಹ ನಿಮ್ಮ ಇಚ್ಛೆಯ ಕಂಪನಿಯ ಗ್ಯಾಸ್ ಕನೆಕ್ಷನ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದ್ದು ಮುಂದಿನ ತಿಂಗಳಿನಿಂದ ವೆಬ್ಸೈಟ್ ಓಪನ್ ಆಗಲಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಿ ಯೋಜನೆಗೆ ನೋಂದಾಯಿಸಿಕೊಂಡು ಈ ಅತ್ಯುತ್ತಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

Leave a Comment