ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ.!

 

ಆಧಾರ್ ಕಾರ್ಡ್ ಈಗ ಒಂದು ಪ್ರಮುಖ ದಾಖಲೆ ಆಗಿದೆ. ಈ ಆಧಾರ್ ಕಾರ್ಡ್ ನ್ನು ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಇತರ ಎಲ್ಲಾ ದಾಖಲೆಗಳ ಜೊತೆ ಲಿಂಕ್ ಮಾಡಬೇಕು, ಈ ರೀತಿ ಮಾಡುವುದರಿಂದ ಅನೇಕ ಲಾಭಗಳಿವೆ. ಇವುಗಳು ಮಾತ್ರವಲ್ಲದೆ ನೀವು ಜಮೀನನ್ನು ಹೊಂದಿದ್ದ ಪಕ್ಷದಲ್ಲಿ ನಿಮ್ಮ ಜಮೀನಿನ ಪಹಣಿ ಪತ್ರಿಕ್ಕೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು.

ಹೀಗೆ ಲಿಂಕ್ ಮಾಡುವುದರಿಂದ ಬ್ಯಾಂಕ್, ಆದಾಯ ತೆರಿಗೆ ಅಥವಾ ಜಮೀನಿನ ಕುರಿತು ಸರ್ಕಾರದ ಯಾವುದೇ ಸೌಲಭ್ಯ ಅಥವಾ ಸಂದೇಶಗಳು ಇದ್ದರೆ ಅವುಗಳ ಕುರಿತ ಅನೇಕ ಮಾಹಿತಿಯನ್ನು ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕಾರಣದಿಂದಾಗಿ ನೇರವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಇಂದು ಈ ಅಂಕಣದಲ್ಲಿ ಪ್ರಮುಖವಾಗಿ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿ ಕೊಡುತ್ತಿದ್ದೇವೆ.

ನೀವು ಮೊದಲಿಗೆ
https://www.landrecords.karnataka.gov.in/ ಕ್ಲಿಕ್ ಮಾಡುವ ಮೂಲಕ ಕಂದಾಯ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡಿ.
● ಅದರಲ್ಲಿ ಭೂಮಿ ಆನ್ಲೈನ್ ರೆಕಾರ್ಡ್ಸ್ ಎನ್ನುವ ಪೇಜ್ ಓಪನ್ ಆಗುತ್ತದೆ
● ನಿಮ್ಮ ಆಧಾರ್ ನಂಬರ್ ಕೇಳುತ್ತದೆ ಅದನ್ನು ಎಂಟ್ರಿ ಮಾಡಿದ ತಕ್ಷಣ ಆ ನಿವಾಸಿಯ ಹೆಸರು ಬರುತ್ತದೆ
● ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ Generate OTP ಎನ್ನುವುದನ್ನು ಕ್ಲಿಕ್ ಮಾಡಿ.

● ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ ವೇರಿಫೈ ಮಾಡಿ.
● ಇಷ್ಟಾದ ಮೇಲೆ ನೀವು ಮುಂದಿನ ಹಂತಕ್ಕೆ ಹೋಗುತ್ತೀರಿ.

● ಮುಂದಿನ ಪೇಜ್ ಅಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರನ್ನು ಆಧಾರ್ ಕಾರ್ಡಲ್ಲಿ ಇರುವಂತೆಯೇ ನಮೂದಿಸಬೇಕು, ನಿಮ್ಮ ವಿಳಾಸವನ್ನು ಕೂಡ ಫಿಲ್ ಮಾಡಬೇಕು.
ಸೆಲೆಕ್ಟ್ ಡಾಕ್ಯುಮೆಂಟ್ ಆಪ್ಷನ್ ಕಾಣುತ್ತದೆ ಅದರಲ್ಲಿ ನೀವು ನಿಮ್ಮ ವಿಳಾಸ ದೃಢೀಕರಣಕ್ಕೆ ಯಾವ ಡಾಕ್ಯುಮೆಂಟ್ ನೀಡುತ್ತೀರಾ ಎನ್ನುವುದನ್ನು ಆಯ್ಕೆ ಮಾಡಿ. ಚುನಾವಣಾ ಚೀಟಿ / ಪಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ ಯಾವುದನ್ನಾದರೂ ಸೆಲೆಕ್ಟ್ ಮಾಡಿ.

● ನೀವು ಸೆಲೆಕ್ಟ್ ಮಾಡಿದ ದಾಖಲೆಯ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ನಂತರ ಸ್ಕ್ರೀನ್ ಮೇಲೆ ಜಿಲ್ಲಾವಾರು ಆಪ್ಷನ್ ಕಾಣುತ್ತದೆ ಅದರಲ್ಲಿ ನಿಮ್ಮ ಭೂಮಿಯಲ್ಲಿ ಎಲ್ಲಿದೆ. ಆ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಎಲ್ಲಾ ಮಾಹಿತಿಯು ಸರಿ ಇದ್ದಾಗ ನಿಮ್ಮ ಭೂಮಿಯ ಮಾಹಿತಿಯು ಸ್ಕ್ರೀನ್ ಮೇಲೆ ಕಾಣಿಸುತ್ತದೆ.

● ಕೆಳಗೆ ಕಾಣುವ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಕೊನೆಗೆ add ಎನ್ನುವುದನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ನಂಬರ್ ನಿಮ್ಮ ಸರ್ವೇ ನಂಬರ್ ಗೆ ಲಿಂಕ್ ಆಗಿರುತ್ತದೆ.
● Save ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಈ ಪ್ರಕ್ರಿಯ ಪೂರ್ತಿ ಆಗುತ್ತದೆ.
● ಭೂಮಿ ಹೊಂದಿರುವ ಪ್ರತಿಯೊಬ್ಬ ರೈತನು ಕೂಡ ಈ ರೀತಿ ತನ್ನ ಆಧಾರ್ ಕಾರ್ಡ್ ಅನ್ನು ತನ್ನ ಜಮೀನಿನ ಸರ್ವೆ ನಂಬರ್ ಜೊತೆ ಲಿಂಕ್ ಮಾಡಿಕೊಳ್ಳುವುದು ಉತ್ತಮ, ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ಎಲ್ಲಾ ರೈತರಿಗೂ ತಲುಪಿಸಿ.

Leave a Comment