ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

 

● ಚರ್ಮವನ್ನು ಸೂರ್ಯನ ಸುಡುಬಿಸಲಿನಿಂದ ರಕ್ಷಿಸಿಕೊಳ್ಳಿ, ಪ್ರತಿದಿನವೂ ಕೂಡ ಬಿಸಿಲಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಓಡಾಡುತ್ತಿದ್ದರೆ ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಇದರಿಂದ ಚರ್ಮ ಬೇಗನೆ ಹಾಳಾಗುವುದಿಲ್ಲ ಆಗ ನೀವು ಬಹಳ ಎಂಗ್ ಆಗಿ ಕಾಡುತ್ತೀರಿ.
● ಪ್ರತಿದಿನವೂ ಕೂಡ ನೀವು ಕನಿಷ್ಠ ಎಂಟು ಲೋಟ ನೀರನ್ನು ಕುಡಿಯಲೇಬೇಕು, ಈ ರೀತಿ ಮಾಡಿದಾಗ ನಿಮ್ಮ ತ್ವಚೆ ಹೆಚ್ಚು ಶುಷ್ಕವಾಗಿರುತ್ತದೆ ಹಾಗೂ ದೇಹದಲ್ಲಿರೋ ಟಾಕ್ಸಿನ್ ಅಂಶವು ಹೊರಹೋಗಲು ಅನುಕೂಲ ಆಗುತ್ತದೆ. ಆಗ ನೀವು ಇನ್ನಷ್ಟು ಫ್ರೆಶ್ ಆಗಿ ಕಾಣುತ್ತೀರಿ.

● ಕುಳಿತಲ್ಲೇ ಕುಳಿತುಕೊಂಡು ಇರಬೇಡಿ ಆಕ್ಟಿವ್ ಆಗಿದ್ದಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುತ್ತೀರಿ. ನೀವು ದಿನದಲ್ಲಿ ಅರ್ಧ ತಾಸಾದರೂ ವ್ಯಾಯಾಮಕ್ಕೆ ಹಾಗೂ 20 ನಿಮಿಷವಾದರೂ ವಾಕಿಂಗ್ ಗೆ ಸಮಯ ಕೊಡಿ. ಇದು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
● ನಿಮ್ಮ ದೇಹ ಹೊರಗಿನಿಂದ ಹೆಚ್ಚು ಶೈನ್ ಆಗಿ ಕಾಣಬೇಕು ಮತ್ತು ದೇಹವು ಆರೋಗ್ಯವಾಗಿ ಬಲಿಷ್ಠವಾಗಿರಬೇಕು ಎಂದರೆ ನೀವು ಸೇವಿಸುತ್ತಿರುವ ಆಹಾರದಿಂದಲೇ ಸಾಧ್ಯ. ಹಾಗಾಗಿ ಪ್ರೊಟೀನ್ ಹೆಚ್ಚು ಇರುವಂತಹ ಆಹಾರ ಮತ್ತು ಅತೀ ಹೆಚ್ಚು ಸೊಪ್ಪು ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

● ಸ್ನಾನ ಮಾಡುವಾಗ ತ್ವಚೆಯನ್ನು ಹೆಚ್ಚು ತಿಕ್ಕಬೇಡಿ, ಇದರಿಂದ ನ್ಯಾಚುರಲ್ ಆಗಿ ಇರುವ ಗ್ಲೋ ಹೊರಟು ಹೋಗುತ್ತದೆ ಮತ್ತು ಅತಿ ಹೆಚ್ಚು ಸುಡುವ ನೀರಿನಲ್ಲಿ ಸ್ನಾನ ಮಾಡುವುದು ಅಷ್ಟೊಂದು ಸೂಕ್ತವಲ್ಲ.
● ನೀವು ಎಷ್ಟು ನಿದ್ದೆ ಮಾಡುತ್ತೀರೋ ಅಷ್ಟು ನಿಮ್ಮ ಮೈಂಡ್ ಫ್ರೆಶ್ ಆಗುತ್ತದೆ, ಮನಸ್ಸು ಪ್ರಶಾಂತವಾಗಿದ್ದಾಗ ಆ ಕಳೆ ಮುಖದ ಮೇಲೂ ಕೂಡ ಕಾಣುತ್ತದೆ. ಹಾಗಾಗಿ ದಿನದಲ್ಲಿ 8 ಗಂಟೆಗಳ ನಿದ್ದೆ ಆದರೂ ದೇಹಕ್ಕೆ ಅವಶ್ಯಕತೆ ಇರುತ್ತದೆ, ಉತ್ತಮ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

● ಪ್ರತಿದಿನವೂ ಕೂಡ ಮುಖಕ್ಕೆ ಅಲೋವೆರಾ ಹಚ್ಚುವುದು ಒಳ್ಳೆಯದು ಅಥವಾ ರೋಸ್ ವಾಟರ್ ಕೂಡ ಹಚ್ಚಬಹುದು ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ ಮತ್ತು ಹೆಚ್ಚು ಗ್ಲೋ ಆಗಿ ಕಾಣುತ್ತೀರಿ.
● ಪ್ರತಿದಿನವೂ ಕೂಡ ಕೊಬ್ಬರಿ ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹಳೆ ಕಲೆಗಳು ಮಾಯವಾಗುತ್ತದೆ ಮತ್ತು ತ್ವಚೆಗೆ ಹೊಳಪು ಬರುತ್ತದೆ.
● ನಗುಮುಖ ಕೂಡ ಒಂದು ಆಭರಣವೇ, ಆಭರಣವು ಸೌಂದರ್ಯವನ್ನು ಹೆಚ್ಚಿಸುವಂತೆ ಮುಖದಲ್ಲಿ ನಗು ಇದ್ದಾಗ ನಿಮ್ಮ ಸೌಂದರ್ಯ ಇಮ್ಮಡಿಕೊಳ್ಳುತ್ತದೆ ಹಾಗಾಗಿ ಸದಾ ಹಸನ್ಮುಖಿಯಾಗಿರಿ.

● ಹಾಲಿಗೆ ಮೆಲನಿನ್ ಅಂಶವನ್ನು ಕಡಿಮೆಗೊಳಿಸುವ ಗುಣ ಇರುವುದರಿಂದ ನೀವು ಮುಖಕ್ಕೆ ರಾತ್ರಿ ಹೊತ್ತು ಹಾಲು ಅಥವಾ ಹಾಲಿನ ಕೆನೆಯನ್ನು ಮಸಾಜ್ ಮಾಡಿಕೊಂಡು ಬೆಳಗ್ಗೆ ಶುದ್ಧ ನೀರಿನಲ್ಲಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮುಖದ ಕಪ್ಪು ಕಲೆಗಳು ಬಣ್ಣಮಾಸುವಿಕೆ ಎಲ್ಲವೂ ಕೂಡ ಮಾಯವಾಗುತ್ತದೆ. ಚರ್ಮ ಹೆಚ್ಚು ಒಳಪನ್ನು ಪಡೆದುಕೊಳ್ಳುತ್ತದೆ ನೀವು ಕೂಡ ಹಾಲಿನಂತೆ ಪಳ ಪಳ ಹೊಳೆಯುತ್ತೀರಿ.

● ಗಟ್ಟಿಯಾದ ಹಾಲಿಗೆ ಹರಿಶಿನ ಹಾಗೂ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಫೇಸ್ ಪ್ಯಾಕ್ ರೀತಿ ಮಾಡಿಕೊಳ್ಳಿ ಇದನ್ನು ಪ್ರತಿದಿನವೂ ಕೂಡ ಮುಖಕ್ಕೆ ಹಚ್ಚಿ ಒಂದು ತಾಸು ಬಿಟ್ಟು ಶುದ್ಧವಾದ ನೀರಿನಲ್ಲಿ ಅಥವಾ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.
● ಜೇನುತುಪ್ಪ ಬ್ಲೀಚಿಂಗ್ ಗುಣವನ್ನು ಹೊಂದಿದೆ ಹಾಗಾಗಿ ಒಂದು ಚಮಚ ಜೇನುತುಪ್ಪ ತೆಗೆದುಕೊಂಡು ಮುಖಕ್ಕೆ ಗುತ್ತಿಗೆಗೆ ಚೆನ್ನಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.

● ಕಡಲೆ ಹಿಟ್ಟಿಗೆ ನೈಸರ್ಗಿಕವಾಗಿ ಡೆಡ್ ಸೆಲ್ ತೊಳೆದು ಹಾಕುವ ಗುಣ ಇರುವುದರಿಂದ ಸ್ಥಾನ ಮಾಡುವಾಗ ಒಂದೆರಡು ಚಮಚ ಕಡಲೆ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಮುಖಕ್ಕೆ ಮತ್ತು ಕೈಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ ನಂತರ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಚರ್ಮಕ್ಕೆ ಹೆಚ್ಚು ಕಾಂತಿ ಬರುತ್ತದೆ.

Leave a Comment