ಹಳೆ ವಾಹನಕ್ಕೂ ಇನ್ಮುಂದೆ ಹೊಸ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ, ಇಲ್ಲದಿದ್ರೆ ದಂಡ ಫಿಕ್ಸ್.! ಜಾರಿ ಆಯ್ತು ಹೊಸ ರೂಲ್ಸ್

 

ದೇಶದಲ್ಲಿ ಹಲವಾರು ಬಾರಿ ಸಂಚಾರ ನಿಯಮಗಳು ಮೋಟಾರು ವಾಹನ ಕಾಯ್ದೆಗಳು ಬದಲಾವಣೆ ಆಗಿವೆ. ಕೆಲವೊಮ್ಮೆ ಅದು ವಾಹನ ಸವಾರರ ಹಾಗೂ ದೇಶದ ಹಿತ ದೃಷ್ಟಿಯಿಂದ ಅವಶ್ಯಕ ಕೂಡ ಹೌದು. ಅಂತಹದೇ ಒಂದು ಹೊಸ ನಿಯಮಯನ್ನು ಕೇಂದ್ರ ಸರ್ಕಾರದ ಸೂಚನೆ ಆಧಾರದ ಮೇಲೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಕೂಡ ವಿಧಿಸಿದೆ.

ಅದೇನೆಂದರೆ, ಏಪ್ರಿಲ್ 1, 2019ಕ್ಕೂ ಮುನ್ನ ಖರೀದಿಸಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP (High Security Number Plate) ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವಂತೆ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸೂಚಿಸಿದೆ. ಈಗಾಗಲೇ ದೇಶದ 18 ರಾಜ್ಯಗಳಲ್ಲಿ ಇದು ಕಡ್ಡಾಯವಾಗಿದ್ದು ಕೇಂದ್ರ ಸರ್ಕಾರದ ಆದೇಶದ ನಂತರ ಅದೇ ಮಾರ್ಗಸೂಚಿ ಪ್ರಕಾರ ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 18, 2023ರಂದು ಈ ಕುರಿತು ಆದೇಶ ಹೊರ ಬಿದ್ದಿದೆ.

2019 ಏಪ್ರಿಲ್ 1 ರಿಂದ ಈಚೆಗೆ ಖರೀದಿಸಿರುವ ಎಲ್ಲಾ ವಾಹನಗಳಲ್ಲೂ ಕೂಡ ನೈಸರ್ಗಿಕವಾಗಿ HSRP ನಂಬರ್ ಪ್ಲೇಟ್ ಇರುವುದರಿಂದ ಹಳೆಯ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮಾಲೀಕರು ಒರಿಜಿನಲ್ ಇಕ್ಯುಪ್ಮೆಂಟ್ ಮ್ಯಾನುಫ್ಯಾಕ್ಚರ್ (OIM Portal) ಪೋರ್ಟಲ್ ನಲ್ಲಿ ಮೊದಲಿಗೆ ನೋಂದಾಯಿಸಿಕೊಂಡು ನಂತರ ಹತ್ತಿರದ ಶೋರೂಮ್ ಅಥವಾ ಡೀಲರ್ ಬಳಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬಹುದು.

ರಾಜ್ಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಡೀಲರ್ ಕೇಂದ್ರಗಳಿತ್ತು, ಸ್ಥಳ ಹಾಗೂ ದಿನಾಂಕ ಇತ್ಯಾದಿ ಮಾಹಿತಿಗಳನ್ನು ಕೂಡ ಅಲ್ಲೇ ಪಡೆಯಬಹುದಾಗಿದೆ ಇದರಿಂದ ವಾಹನ ಸವಾರರು ತಮಗೆ ಅನುಕೂಲಕರವಾದದನ್ನು ಆರಿಸಿಕೊಳ್ಳಬಹುದಾಗಿದೆ. ಈ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಬದಲಾಯಿಸಿಕೊಳ್ಳಲು ವಾಹನ ಸವಾರರಿಗೆ 400 ರಿಂದ 500 ಚಾರ್ಜಸ್ ಆಗಬಹುದು.

ಸರ್ಕಾರ ನೀಡಿರುವ ಈ ಕಾಲಾವಧಿ ಒಳಗಡೆ ನಂಬರ್ ಪ್ಲೇಟ್ ಬದಲಾಯಿಸದೆ ಇದ್ದಲ್ಲಿ ಕನಿಷ್ಠ 1000ರೂ. ವರೆಗೂ ದಂಡ (fine) ಬೀಳುವ ಸಾಧ್ಯತೆ ಇದೆ. ಈ ವಿಷಯ ಕುರಿತು ಸರ್ಕಾರ ಇಷ್ಟು ಆಸಕ್ತಿ ತೋರಿಸಲು ಸಾಕಷ್ಟು ಕಾರಣ ಇದೆ. ಯಾಕೆಂದರೆ ಈ ರೀತಿ ದೇಶದಾದ್ಯಂತ ಏಕರೂಪದ HSRP ಅಳವಡಿಸಿಕೊಳ್ಳುವುದರಿಂದ ಈ ಸಮಯದಲ್ಲಿ ವಾಹನ ಮಾಲೀಕರು ನೀಡುವ ಮಾಹಿತಿಗಳು ವಾಹನ ತಂತ್ರಾಂಶದಲ್ಲಿ ಲಭ್ಯವಿರುತ್ತದೆ ಮತ್ತು ಅದು ಕೇಂದ್ರ ಮಾಹಿತಿಯ ವಿಭಾಗದಲ್ಲೂ ಕೂಡ ರೆಕಾರ್ಡ್ ಆಗಿ ಉಳಿಯಲಿದೆ.

ಇದರಿಂದಾಗಿ ವಾಹನಕ್ಕೆ ಹೆಚ್ಚು ಸುರಕ್ಷತೆ ಸಿಗುತ್ತದೆ ವಾಹನ ಕಳುವಾದ ಸಮಯದಲ್ಲಿ ಅಥವಾ ವಾಹನಗಳನ್ನು ಅಕ್ರಮ ಚಟುವಟಿಕೆಗೆ ಒಳಸಿಕೊಳ್ಳುವಾಗ ಅಥವಾ ಅನಧಿಕೃತ ವಾಹನಗಳು ರಸ್ತೆ ಮೇಲೆ ಓಡಾಡುವಾಗ ಶೀಘ್ರವಾಗಿ ಅದನ್ನು ಪತ್ತೆ ಮಾಡಲು ಇದು ಅನುಕೂಲಕ್ಕೆ ಬರಲಿದೆ. ಹಾಗಾಗಿ ಪರೋಕ್ಷವಾಗಿ ಇದು ರಾಷ್ಟ್ರೀಯ ಸುರಕ್ಷತೆಯ ವಿಷಯದಲ್ಲಿ ಕೂಡ ಮಹತ್ವದ ಪಾತ್ರ ವಹಿಸಿರುವುದರಿಂದ ಇಷ್ಟು ಕಟ್ಟುನಿಟ್ಟಾಗ ನಿಯಮಗಳನ್ನು ಕೈಗೊಳ್ಳಲಾಗಿದೆ.

ಒಂದು ವೇಳೆ ಸರ್ಕಾರ ನೀಡಿರುವ ಈ ನಿಗದಿತ ಅವಧಿ ಒಳಗೆ ಪ್ರಕ್ರಿಯೆ ಪೂರ್ತಿ ಗೊಳಿಸಿದವರಿಗೆ ಮುಂದೆ ಹಲವು ಸಂದರ್ಭದಲ್ಲಿ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಇದೆ. HSRP ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ RC, ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ ಇತ್ಯಾದಿಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಮಾಲೀಕರಿಗೆ ದಂಡದ ಜೊತೆ ಇನ್ನು ಅನೇಕ ಸಮಸ್ಯೆಗಳಾಗುವುದರಿಂದ ಸರ್ಕಾರದ ನಿಯಮದ ಪ್ರಕಾರ ವಾಹನ ಮಾಲೀಕರು ತಪ್ಪದೆ ತಮ್ಮ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬೇಕಾಗಿದೆ.

Leave a Comment