ಇನ್ಮುಂದೆ ಕೇವಲ 450 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್, ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ…

ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ (Central government) ಎಲ್ಲಾ ಗೃಹಣಿಯರಿಗೂ ಕೂಡ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ಹಣದುಬ್ಬರ ಕಾರಣದಿಂದಾಗಿ ದೇಶದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಅದನ್ನು ನಿಯಂತ್ರಣ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ (Gas cylinder rate) 200ರೂ. ಇಳಿಕೆ ಮಾಡಿದೆ.

ಇದರಿಂದಾಗಿ ಉಜ್ವಲ್ ಯೋಜನೆ (Ujwal Scheme) ಪ್ರಯೋಜನ ಪಡೆದ ಕುಟುಂಬಗಳಿಗೆ 200ರೂ. ಸಬ್ಸಿಡಿ ಸಿಗುತ್ತಿದ್ದ ಕಾರಣ ಹೊಸ ಘೋಷಣೆ ಸೇರಿ 400ರೂ. ಇಳಿಕೆಯಾಗಿದೆ. ಜೊತೆಗೆ ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಹೊಸದಾಗಿ 75 ಲಕ್ಷ ಅರ್ಜಿಗಳನ್ನು ಸ್ವೀಕರಿಸುದಾಗಿ ಹೇಳಿಕೆ ಕೊಟ್ಟು ದೇಶದ ಜನತೆಗೆ ಸಿಲಿಂಡರ್ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರ ದುಪ್ಪಟ್ಟು ಸಿಹಿಸುದ್ದಿ ನೀಡಿದೆ.

ಈ ವಿಚಾರವಾಗಿ ಗೋವಾ (Goa) ಸರ್ಕಾರವು ಕೂಡ ತನ್ನ ರಾಜ್ಯದ ನಾಗರಿಕರಿಗೆ ಪ್ರತಿ ಸಿಲಿಂಡರ್ ಬುಕ್ಕಿಂಗ್ ಮೇಲೆ 275ರೂ. ಸಹಾಯಧನ ನೀಡುವುದಕ್ಕೆ ಘೋಷಿಸಿತ್ತು. ಈಗ ಪಡಿತರ ಚೀಟಿ ಹೊಂದಿದ್ದ ಎಲ್ಲಾ ಕುಟುಂಬಗಳು ಕೂಡ ಇದರ ಪ್ರಯೋಜನವನ್ನು ಪಡೆಯುತ್ತಿವೆ. ಈಗ ಇದೇ ಸಾಲಿಗೆ ಮತ್ತೊಂದು ರಾಜ್ಯ ಕೂಡ ಸೇರುತ್ತದೆ. ಮಧ್ಯಪ್ರದೇಶದ (Madyapradesh) ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ BJP ಸರ್ಕಾರವು ಮಧ್ಯಪ್ರದೇಶದ ಜನತೆಗೆ ಈ ಕುರಿತು ಸಿಹಿ ಸುದ್ದಿ ನೀಡಿದೆ.

ಸದ್ಯ ಮಧ್ಯ ಪ್ರದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 900 ರೂ. ಇದ್ದು, ಬಳಕೆದಾರರು 450 ರೂ ನೀಡಿದರೆ ಸಾಕು. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಸೆಪ್ಟೆಂಬರ್​​ 1ರಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರ ಅಲ್ಲಿನ ಸರ್ಕಾರ ತಿಳಿಸಿದೆ.

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತು ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆ (PM Ujwal Scheme and Ladli Bahana Scheme) ಮೂಲಕ ಗ್ಯಾಸ್ ಸಂಪರ್ಕ ಪಡೆದುಕೊಂಡ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದರೆ, ಗ್ಯಾಸ್ ರೀಫಿಲ್ಲಿಂಗ್ ಸೆಂಟರ್ ಗಳಲ್ಲಿ ಅಥವಾ ಡೋರ್ ಡೆಲಿವರಿ ಮೂಲಕ ಗ್ಯಾಸ್ ಸಿಲಿಂಡರ್ ತೆಗೆದುಕೊಂಡ ಗ್ರಾಹಕರು ಇದರಿಂದ ವಂಚಿತರಾಗಲಿದ್ದಾರೆ.

ಅವರು ಸಿಲಿಂಡರ್​​ಗೆ ಪೂರ್ತಿ ಬೆಲೆಯನ್ನು ಪಾವತಿ ಮಾಡಲೇಬೇಕು ಅವರಿಗೆ ಈಗ ಘೋಷಣೆಯಾಗಿರುವ ಹೊಸ ಯೋಜನೆ ಲಾಭ ಲಭ್ಯವಾಗುವುದಿಲ್ಲ. ಆದರೆ ಕೇಂದ್ರ ಸರ್ಕಾರ ಘೋಷಿಸಿರುವ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಮಾರುಕಟ್ಟೆಯಲ್ಲಿನ ಬೆಲೆ ವ್ಯತ್ಯಾಸವಾದಾಗಲು ಈ ಯೋಜನೆಗೆ ಅರ್ಹರಾಗಿರುವವರು ಫಲಾನುಭವಿಗಳು ಆ ಬೆಲೆಯ ಅರ್ಧ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಲಾಡ್ಲಿ ಬಹನಾ ಯೋಜನೆಯು ಮಧ್ಯಪ್ರದೇಶದಲ್ಲಿ ಜಾರಿಯಲ್ಲಿರುವ ಯೋಜನೆಯಾಗಿದ್ದು ಅಲ್ಲಿನ ಅನೇಕ ಕುಟುಂಬಗಳು ಈ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿವೆ. 2023-24ನೇ ಸಾಲಿನಲ್ಲೂ ಕೂಡ ಉಜ್ವಲ್ ಯೋಜನೆ ಮೂಲಕ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವವರು ಸಹಾ ಪ್ರಯೋಜನ ಪಡೆಯಬಹುದು ಅಥವಾ
ಗ್ರಾಮ ಪಂಚಾಯಿತಿ ಕಚೇರಿ, ಶಿಬಿರ ಕಚೇರಿ, ಅಂಗನವಾಡಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ.

ಪ್ರಧಾನ ಮಂತ್ರಿ ಲಾಡ್ಲಿ ಬಹನಾ ಯೋಜನೆಗೆ ನೋಂದಾಯಿಸಿಕೊಂಡು ಫಲಾನುಭವಿಗಳಾದಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಮಧ್ಯಪ್ರದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಇದೆ ಆದ್ದರಿಂದ ಇದು ಚುನಾವಣೆಯಲ್ಲಿ ಮತಗಳನ್ನು ಸಲ್ಲಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ ಘೋಷಣೆ ಮಾಡಿದ ಸಮಯದಲ್ಲೂ ಕೂಡ ಇದು ಲೋಕಸಭಾ ಚುನಾವಣೆ ಪ್ರಯುಕ್ತ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು.

Leave a Comment